.
ಉಡುಪಿ : ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ಹಸಿರು ಉಸಿರು ಕಾರ್ಯಕ್ರಮಕ್ಕೆ ಉಡುಪಿಯ ಬಲಾಯಿಪಾದೆ ಜಂಕ್ಷನ್ ಬಳಿ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯುವವಾಹಿನಿ ಉಡುಪಿ ಘಟಕದ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ಉದ್ಯಾವರ ಮಾತನಾಡಿ ನಮ್ಮ ಪಕೃತಿಯ ಉಳಿವಿಗಾಗಿ ಶ್ರಮಿಸುವುದು ನಮ್ಮ ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರವೇ ನಮ್ಮ ಉಸಿರು, ನಮ್ಮ ಪರಿಸರ ಹಸಿರಾಗಿದ್ದಲ್ಲಿ ಉಸಿರು ಸ್ವಚ್ಚ ವಾಗಿರುತ್ತದೆ. ನಮ್ಮ ಪರಿಸರ ಸಮೃದ್ಧ ಗೊಳಿಸಿ ನಮ್ಮ ಮುಂದಿನ ಪೀಳಿಗೆಗೆ ನಾವೂ ಉತ್ತಮ ಕೊಡುಗೆ ನೀಡೋಣ ಎಂದು ಕರೆ ನೀಡಿದರು.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಅಶೋಕ್ ಕೋಟ್ಯಾನ್ ಮಾಹಿತಿ ನೀಡುತ್ತಾ ಪರಿಸರ ಸಂರಕ್ಷಣೆ ನಮ್ಮ ಮುಖ್ಯ ನಿಲುವಾಗಿರಬೇಕಾಗಿದೆ. ಮುಂದಿನ ದಿನಗಳಲ್ಲಿ ಯುವವಾಹಿನಿ ಸದಸ್ಯರ ಮನೆಗಳಲ್ಲಿ ಗಿಡ ನೆಟ್ಟು ಹಸಿರು ಉಸಿರು ಕಾರ್ಯಕ್ರಮ ಮುಂದುವರೆಸುವ ಮೂಲಕ ಯುವವಾಹಿನಿ ಪರಿಸರವನ್ನು ಸ್ವಚ್ಛಂದವಾಗಿ ಬೆಳೆಯುವಂತೆ ಕಾಳಜಿ ವಹಿಸಲಿದೆ ಎಂದರು.
ಯುವವಾಹಿನಿ ಉಡುಪಿ ಘಟಕದ ನಿಕಟಪೂರ್ವ ಅಧ್ಯಕ್ಷ ರಮೇಶ್ ಕುಮಾರ್, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಶಂಕರ ಪೂಜಾರಿ, ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಸಂದ್ಯಾ ಅಶೋಕ್ ಕೋಟ್ಯಾನ್, ಸದಸ್ಯರಾದ ವನಿತಾ ರಮೇಶ್, ಸೌಮ್ಯ, ಮಾಲತಿ ಅಮೀನ್, ಧನ್ಯಾ ಮತ್ತಿತರರು ಉಪಸ್ಥಿತರಿದ್ದರು