02-10-2017, 2:54 AM
ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತದಾನ ಮೂಲಕ ಅನೇಕರ ಜೀವ ಉಳಿಸುವುದರೊಂದಿಗೆ ದಾನಿಯೂ ಉತ್ತಮ ಆರೋಗ್ಯ ಗಳಿಸಲು ಸಾಧ್ಯ ಎಂದು ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್ ಸಭಾಪಾಲಕ ಸೆಬೆಸ್ಟಿನ್ ಜತ್ತನ್ ಹೇಳಿದರು. ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಆಶ್ರಯದಲ್ಲಿ ಲಿಯೋ ಮತ್ತು ಲಯನ್ಸ್ ಕ್ಲಬ್ ಹಳೆಯಂಗಡಿ, , ಜೋರ್ಜ್ ಎ.ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಹಳೆಯಂಗಡಿ, ಹೆಲ್ತ್ ಕೇರ್ ಡಯಾಗ್ನಾಸ್ಟಿಕ್ ಸೆಂಟರ್ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು , ರೆಡ್ ರಿಬ್ಬನ್ ಕ್ಲಬ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು […]
Read More
01-10-2017, 12:33 PM
ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ . ನಾವು ದಾನ ಮಾಡುವ ರಕ್ತದಿಂದ ಜೀವ ಉಳಿಸಬಹುದಾಗಿದೆ ;ರಕ್ತದಾನದಿಂದ ಆರೋಗ್ಯವೂ ಉಲ್ಲಾಸಮಯವಾಗಿರುತ್ತದೆ . ಯುವವಾಹಿನಿ ಪುತ್ತೂರು ಘಟಕವು ಇಂತಹ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಾ ವರ್ಷ 365 ದಿನಗಳಲ್ಲಿ ಕೂಡ ರಕ್ತದ ಅವಶ್ಯಕತೆ ಇದ್ದವರಿಗೆ ಸೂಕ್ತವಾಗಿ ಸ್ಪಂದಿಸುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರು ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷರಾದ ಜಯಂತ ನಡುಬೈಲ್ ತಿಳಿಸಿದರು ದಿನಾಂಕ 01.10.2017 ರಂದು ಯುವವಾಹಿನಿ (ರಿ ) ಪುತ್ತೂರು ಘಟಕದ ಆಶ್ರಯದಲ್ಲಿ […]
Read More
24-09-2017, 3:19 AM
ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ಬಲಿಷ್ಠ ಸಮಾಜ ನಿರ್ಮಾಣದ ನಮ್ಮ ಹಿರಿಯರ ಕನಸು ಮಾಡುವಲ್ಲಿ ಯುವವಾಹಿನಿ ಕಳೆದ 30 ವರ್ಷಗಳಿಂದ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಹಿರಿಯ ಪತ್ರಕರ್ತರು ಹಾಗೂ ರಂಗ ನಿರ್ದೇಶಕರಾದ ಪರಮಾನಂದ ಸಾಲ್ಯಾನ್ ತಿಳಿಸಿದರು. ದಿನಾಂಕ 24.09.2017 ರಂದು ಬೆಳುವಾಯಿ ಷಣ್ಮುಖಾನಂದ ಸಭಾಗೃಹದಲ್ಲಿ ಜರುಗಿದ ಯುವವಾಹಿನಿ (ರಿ) ಬೆಳುವಾಯಿ ಘಟಕದ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹೊಸ ಚಿಂತನೆಗಳು, ಕ್ರಿಯಾಶೀಲ ಯೋಜನೆ, ಯೋಚನೆಯ ಮೂಲಕ ಯುವವಾಹಿನಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ […]
Read More
24-09-2017, 3:03 AM
ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಲ್ಲಿ ದೇಹದ ಸಮತೋಲನದಿಂದ ದಿನಪೂರ್ತಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಸೂಕ್ತ ವೈದ್ಯರಲ್ಲಿ ನಡೆಸಿಕೊಂಡು ರೋಗ ಬರುವ ಮೊದಲೇ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿರಿ ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಸಮಿತಿಯ ಅಧಿಕಾರಿ ರಮೇಶ್ ಬಂಗೇರ ಹೇಳಿದರು. ಅವರು ದಿನಾಂಕ 24.09.2017 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಯುವವಾಹಿನಿ ಹಳೆಯಂಗಡಿ ಘಟಕದ ಆಶ್ರಯದಲ್ಲಿ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ,ಲಯನ್ಸ್, ಲಿಯೋ ಮತ್ತು ಪೂಜಾ ಫ಼್ರೆಂಡ್ಸ್‌ನ ಹಾಗೂ ಮುಕ್ಕದ […]
Read More
22-09-2017, 9:38 AM
ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ನೇ ಸಾಲಿನ ಅಧ್ಯಕ್ಷರಾಗಿ ಯಶವಂತ್ ಪೂಜಾರಿ ಆಯ್ಕೆಯಾಗಿದ್ದಾರೆ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಸುವರ್ಣ ಬಿ.ಸಿ.ರೋಡ್, ಉಪಾಧ್ಯಕ್ಷರಾಗಿ ಜಯಂತ ನಡುಬೈಲು ಹಾಗೂ ನರೇಶ್ ಕುಮಾರ್ ಸಸಿಹಿತ್ಲು, ಕೋಶಾಧಿಕಾರಿಯಾಗಿ ಹರೀಶ್ ಕೆ.ಸನಿಲ್, ಜತೆ ಕಾರ್ಯದರ್ಶಿಯಾಗಿ ಚೇತನ್ ಕುಮಾರ್ ಮುಲ್ಕಿ., ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಭುವನೇಶ್ ಪಚ್ಚಿನಡ್ಕ, ವಾರ್ಷಿಕ ಸಮಾವೇಶ ನಿರ್ದೇಶಕರಾಗಿಹರೀಶ್ ಕೆ.ಪೂಜಾರಿ ಕ್ರೀಡೆ ಮತ್ತು ಆರೋಗ್ಯನಿರ್ದೇಶಕರಾಗಿಸುಜಿತ್ ರಾಜ್ ಐ. ಸುರತ್ಕಲ್ , ಸಮಾಜ ಸೇವೆ ನಿರ್ದೇಶಕರಾಗಿ ಭಾಸ್ಕರ ಸಾಲ್ಯಾನ್ ಅಗರಮೇಲು, […]
Read More
17-09-2017, 3:27 PM
ಯುವವಾಹಿನಿ (ರಿ) ಕೊಲ್ಯ ಘಟಕದ ಕುಟುಂಬ ಸದಸ್ಯರ ಪುಣ್ಯ ಕ್ಷೇತ್ರಗಳ ಒಂದು ದಿನದ ಪ್ರವಾಸ ದಿನಾಂಕ 17.09.2017 ರಂದು ಜರುಗಿತು. 58 ಸದಸ್ಯರ ಯುವವಾಹಿನಿ ಕೊಲ್ಯ ಘಟಕದ ಕುಟುಂಬ ಸದಸ್ಯರು ಬಪ್ಪನಾಡು ಕ್ಷೇತ್ರ, ಹಲವು ಮಕ್ಕಳ ತಾಯಿ ದೇವಸ್ಥಾನ, ಹಟ್ಟಿಯಂಡಿ ಗಣಪತಿ, ಕೊಲ್ಲೂರು ಮೂಕಾಂಬಿಕಾ, ಮುರುಡೇಶ್ವರ ಮುಂತಾದ ಪ್ರಸಿದ್ಧ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡರು. ಈ ಪ್ರವಾಸದ ಕ್ಷಣ ಕ್ಷಣದ ಸವಿನೆನಪು ಎಲ್ಲರಲ್ಲೂ ಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.
Read More
17-09-2017, 1:24 PM
ಸಮಾಜ ವನ್ನು ಕಟ್ಟಬೇಕಾಗಿರುವುದು ಹಣದಿಂದಲ್ಲ. ಬದಲಾಗಿ ನಂಬಿಕೆ ವಿಶ್ವಾಸ ಮತ್ತು ಪ್ರೀತಿಯಿಂದ. ಈ ಮೂರರ ಬಂಧನ ಕಳಚಲಾಗದ್ದು. ಅಂತಹ ಬೆಸುಗೆಯನ್ನು ಯುವವಾಹಿನಿ ಬೆಸೆಯುತ್ತಿದೆ ಎಂದು ಚಿಂತಕ, ಯುವ ಸಂಘಟಕ ಸುನೀಲ್ ಕುಮಾರ್ ಬಜಾಲ್ ತಿಳಿಸಿದರು ಅವರು ದಿನಾಂಕ 17.09.2017 ರಂದು ಬಂಟ್ವಾಳ ತಾಲೂಕಿನ ಮಾಣಿ ನಾರಾಯಣಗುರು ಸಮುದಾಯಭವನದಲ್ಲಿ ಜರುಗಿದ ಯುವವಾಹಿನಿಯ 26ನೇ ನೂತನ ಘಟಕ ಯುವವಾಹಿನಿ (ರಿ) ಮಾಣಿ ಘಟಕದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಸಂಪತ್ ಬಿ.ಸುವರ್ಣ […]
Read More
09-09-2017, 1:56 PM
ಕೃಷಿಕರಿಗೆ ಸೋಣ ತಿಂಗಳು ಸಂಭ್ರಮದ ತಿಂಗಳು ಆಗಿರುವುದರಿಂದ ಈ ಕಾರ್ಯಕ್ರಮದ ಶೀರ್ಷಿಕೆ ಅರ್ಥಪೂರ್ಣವಾಗಿದೆ.ತಂತ್ರಜ್ಞಾನದಿಂದ ಮನಸ್ಸಿನ ಬದಲಾವಣೆ ಆಗಬಹುದೇ ಹೊರತು ಸಂಸ್ಕೃತಿ, ಸಂಸ್ಕಾರ ಹಾಗೂ ಜೀವನ ಪಾಠವನ್ನು ಕಲಿಸುವುದಿಲ್ಲ ಹಾಗಾಗಿ ಸಂಸ್ಕಾರದ ಜತೆಗೆ ಜೀವನ ಮೌಲ್ಯವನ್ನು ಅಳವಡಿಸುವುದು ಇಂದು ತೀರಾ ಅಗತ್ಯವಾಗಿದೆ ಎಂದು ಮಂಗಳೂರು ಮಹಿಳಾ ಮಂಡಲಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾದ ಕೆ.ಎ.ರೋಹಿಣಿ ಅಭಿಪ್ರಾಯ ಪಟ್ಟರು.ಅವರು ದಿನಾಂಕ 09.09.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಜರುಗಿದ ಸೋಣ ಸಂಭ್ರಮ ಕಾರ್ಯಕ್ರಮದಲ್ಲಿ […]
Read More
07-09-2017, 1:27 PM
ಸುದೀರ್ಘ 30 ವರ್ಷಗಳ ಕಾಲ ವಿದ್ಯೆಗೆ ಪ್ರೋತ್ಸಾಹ ನೀಡುತ್ತಿರುವ ಯುವವಾಹಿನಿಯ ಅಧ್ಬುತ ಸಾಧನೆ ಶ್ಲಾಘನೀಯವಾದುದು, ಈ ನಿಟ್ಟಿನಲ್ಲಿ ಯುವವಾಹಿನಿ ಎಲ್ಲರಿಗೂ ಪ್ರೇರಕ ಶಕ್ತಿ .ನಮ್ಮ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡಬೇಕು ಎನ್ನುವ ಭಾವನೆ ನಮ್ಮಲ್ಲಿರಬೇಕು, ಪರಸ್ಪರ ಸಹಕಾರದಿಂದ ಸದೃಢ ಸಮಾಜದ ನಿರ್ಮಾಣ ಮಾಡೋಣ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ತಿಳಿಸಿದರು. ಅವರು ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಮಂಗಳೂರು ಮಂಗಳಾ ಮ್ಯೂಸಿಕ್ ಕ್ಲಬ್ ಹಾಗೂ ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆಯ ಸಹಯೋಗದೊಂದಿಗೆ ಯುವವಾಹಿನಿ […]
Read More
06-09-2017, 9:24 AM
ಯುವವಾಹಿನಿ (ರಿ) ಅಡ್ವೆ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಪ್ರಯುಕ್ತ ದಿನಾಂಕ 06.09.2017 ರಂದು ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ತದನಂತರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕರು ಹಾಗೂ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಬಹಳ ಹಿಂದಿನಿಂದಲೂ ಸೇವೆ ಮಾಡಿಕೊಂಡು ಬಂದಿರುವ ಶ್ರೀ ಸಂಕಪ್ಪ ಪೂಜಾರಿಯವರನ್ನು ಗೌರವಿಸಲಾಯಿತು.
Read More