ಉಡುಪಿ : ಯುವವಾಹಿನಿ ಸಂಘಟನೆಯ ಪ್ರತಿಷ್ಠಿತ ಘಟಕ ಯುವವಾಹಿನಿ(ರಿ) ಉಡುಪಿ ಘಟಕದ ಯುವವಾಹಿನಿ ಸಭಾಂಗಣ ಮತ್ತು ಕಛೇರಿಯ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಉದ್ಯಾವರ ಬಲಾಯಿಪಾದೆಯ ನಾಗಪ್ಪ ಕಾಂಪ್ಲೆಕ್ಸ್ ನಲ್ಲಿ ಮಾಲಕ ಅಶೋಕ್ ಎನ್.ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಯುವವಾಹಿನಿ ಕಛೇರಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಉಡುಪಿ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಯುವವಾಹಿನಿ ಬೆಳವಣಿಗೆಗೆ ಉಡುಪಿ ಘಟಕದ ಸಭಾಂಗಣ ಸಹಕಾರಿಯಾಗಿದೆ. ಇದುವರೆಗೆ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಕಾರ್ಯ ನಡೆಸುತ್ತಾ ಬಂದಿದೆ ಹಾಗೂ ಈ ಬಾರಿ ಯುವವಾಹಿನಿ ಕುಟುಂಬದ ಮನೆ ನಿರ್ಮಿಸಿರುವುದು ಸಂತಸ ತಂದಿದೆ ಎಂದರು.
ಮುಖ್ಯ ಅತಿಥಿಯಾಗಿ ಕಾರ್ಪೊರೇಷನ್ ಬ್ಯಾಂಕ್ ಇಂದ್ರಾಳಿ ಶಾಖಾ ಪ್ರಬಂಧಕ ಹೇಮಂತ್ ಯು.ಕಾಂತ್, ಮುಂಬೈ ಅಕ್ಷಯ ಮಾಸ ಪತ್ರಿಕೆಯ ಉಪಸಂಪಾದಕ ಹರೀಶ್ ಜಿ.ಪೂಜಾರಿ, ಸಂಜೀವ ಪೂಜಾರಿ ಬೈಲೂರು, ಉದ್ಯಮಿ ಪ್ರಭಾಕರ ಪೂಜಾರಿ, ಸಲಹೆಗಾರರಾದ ವಿಜಯ ಕುಮಾರ್ ಕುಬೆವೂರು, ಶಂಕರ ಪೂಜಾರಿ, ಯುವವಾಹಿನಿ ಉಡುಪಿ ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ಸುಶ್ಮಿತಾ ಗಿರಿರಾಜ್, ವೇದಿಕೆಯಲ್ಲಿ ಉಪಸ್ಥಿತರಿದ್ದರು
ಗಿನ್ನಿಸ್ ದಾಖಲೆಯ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ಬಾಲಪ್ರತಿಭೆ ತನುಶ್ರೀ ಪಿತ್ರೋಡಿ, ತನ್ನ ಸ್ವಂತ ಕಛೇರಿಯನ್ನು 6 ವರ್ಷಗಳ ಕಾಲ ಯುವವಾಹಿನಿಗೆ ನೀಡಿದ ಸಂಜೀವ ಪೂಜಾರಿ, ಯುವವಾಹಿನಿ ಸಭಾಂಗಣ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಿದ ಅಶೋಕ್ ಎನ್.ಪೂಜಾರಿ, ಸಭಾಂಗಣ ನಿರ್ಮಾಣದ ನೇತ್ರತ್ವ ವಹಿಸಿ ಆರ್ಥಿಕ ಕ್ರೋಡೀಕರಣಕ್ಕೆ ಶ್ರಮ ವಹಿಸಿದ ರಘುನಾಥ್ ಮಾಬಿಯಾನ್ ಇವರ ಸೇವೆಯನ್ನು ಗುರುತಿಸಿ ಗೌರವಿಸಿ ಅಭಿನಂದಿಸಲಾಯಿತು. ಸಂದ್ಯಾ ಅಶೋಕ್ ಕೋಟ್ಯಾನ್ ಹಾಗೂ ಸಂತೋಷ ಕುಮಾರ್ ಸನ್ಮಾನಿತರನ್ನು ಪರಿಚಯಿಸಿದರು.
ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ರಮೇಶ್ ಕುಮಾರ್ ಸ್ವಾಗತಿಸಿದರು, ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕ ರಘುಮಾಥ್ ಮಾಬಿಯಾನ್ ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ಭಾರತಿ ಭಾಸ್ಕರ ಸುವರ್ಣ ವಂದಿಸಿದರು. ದಯಾನಂದ ಉಪ್ಪೂರು ಕಾರ್ಯಕ್ರಮ ನಿರ್ವಹಿಸಿದರು.