ಮಂಗಳೂರು : ಪ್ರೀತಿ, ಅಕ್ಕರೆ ಹಾಗೂ ಕೌಟುಂಬಿಕ ಚೌಕಟ್ಟಿನ ಮೂಲಕ ಯುವವಾಹಿನಿ ಯುವಕರಿಗೆ ಪ್ರೇರಣೆ ನೀಡಿದೆ. 30 ವರ್ಷಗಳ ಇತಿಹಾಸವಿರುವ ಯುವವಾಹಿನಿಯ ಸಾಧನೆ ಯಾವುದೇ ಕಲ್ಮಶವಿಲ್ಲದೆ ಬಿಳಿ ಹಾಳೆಯಂತಿದೆ. ಯುವವಾಹಿನಿಯ ಆರಂಭದ ದಿನಗಳಿಂದಲೂ ತೀರಾ ಹತ್ತಿರದಿಂದ ಯುವವಾಹಿನಿಯನ್ನು ಕಂಡ ತನಗೆ ಯುವವಾಹಿನಿಯೇ ತನ್ನ ಮೊದಲ ಮಗು ಎಂದು ಗೋಕರ್ಣನಾಥ ಕೊ ಅಪರೇಟಿವ್ ಬ್ಯಾಂಕ್ ನ ಶಾಖಾ ಪ್ರಬಂಧಕರಾದ ನಿರ್ಮಲಾ ಸಂಜೀವ್ ತಿಳಿಸಿದರು.
ಅವರು ದಿನಾಂಕ 11.04.2018 ರಂದು ಮಂಗಳೂರು ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಪದಪ್ರದಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಯುವ ಪ್ರತಿಭೆಗಳಿಗೆ ಯುವವಾಹಿನಿ ವೇದಿಕೆ ನಿರ್ಮಿಸಿದೆ, ಮುಂದಿನ ಪೀಳಿಗೆಗೆ ಸಂಸ್ಕೃತಿ ಸಂಸ್ಕಾರ ತಿಳಿಸುವ ಮೂಲಕ ಸದೃಡ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಜತೆಯಾಗಿ ಸಾಗೋಣ ಈ ನಿಟ್ಟಿನಲ್ಲಿ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರು ಹಾಗೂ ರಂಗ ನಿರ್ದೇಶಕರಾದ ಪರಮಾನಂದ ಸಾಲ್ಯಾನ್ ತಿಳಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ರಶ್ಮಿ ಕರ್ಕೇರಾ ನೇತ್ರತ್ವದ ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿರ್ಗಮನ ಅಧ್ಯಕ್ಷರಾದ ಸುಪ್ರೀತಾ ಪೂಜಾರಿಯವರು ಕಳೆದ ಒಂದು ವರ್ಷದಲ್ಲಿ ಯಶಸ್ವೀ ಕಾರ್ಯಕ್ರಮ ನೀಡಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗೌರವ ಅಭಿನಂದನೆ :
ಮಂಗಳೂರು ವಿಶ್ವವಿದ್ಯಾಲಯ ನಡೆಸಿದ 2017ನೇ ಸಾಲಿನ ಪಿ.ಜಿ.ಡಿಪ್ಲೊಮಾ ಇನ್ ಯೋಗಿಕ್ ಸೈನ್ಸ್ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಗಳಿಸಿದ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಕ್ರಿಯಾಶೀಲ ಸದಸ್ಯೆಯಾದ ಉಮಾವತಿ ಅವರ ಸಾಧನೆಯನ್ನು ಗುರುತಿಸಿ ಅಭಿನಂದಿಸಲಾಯಿತು.
ಹಿರಿಯರ ಸಲಹೆ ಮಾರ್ಗದರ್ಶನ ಮಹಿಳಾ ಘಟಕದ ಸರ್ವರ ಸಹಕಾರದ ಮೂಲಕ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸುವುದಾಗಿ 2018-19 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಶ್ಮೀ ಸಿ.ಕರ್ಕೇರಾ ತಿಳಿಸಿದರು .
ಮಂಗಳೂರು ವಿಕಾಸ್ ಕಾಲೇಜಿನ ಟ್ರಸ್ಟೀ ಸೂರಜ್ ಕಲ್ಯ ಹಾಗೂ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಲಹೆಗಾರರಾದ ಜಿ.ಪರಮೇಶ್ವರ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
ಕಾರ್ಯದರ್ಶಿ ಸುನಿತಾ 2017-18 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಸುಪ್ರೀತಾ ಪೂಜಾರಿ ಸ್ವಾಗತಿಸಿದರು . ಮಾಜಿ ಅಧ್ಯಕ್ಷರಾದ ಪಾರ್ವತಿ ಪ್ರಸ್ತಾವನೆ ಮಾಡಿದರು, ನೂತನ ಕಾರ್ಯದರ್ಶಿ ರವಿಕಲಾ ವಂದಿಸಿದರು. ಯುವಸಿಂಚನ ಪತ್ರಿಕೆಯ ಸಂಪಾದಕರಾದ ಶುಭಾರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು
Blessings of Lord Shree Krishna to Yuvavahini and Billava community