ಯುವವಾಹಿನಿಯು ಪ್ರೀತಿ, ವಾತ್ಸಲ್ಯವನ್ನು ಯುವ ಮನಸುಗಳಿಗೆ ರವಾನಿಸುವ ಕಾರ್ಯವನ್ನು ಸಮಾಜದಲ್ಲಿ ಮಾಡುತ್ತುದೆ. ಯುವ ಪ್ರತಿಭೆಗಳಿಗೆ ವೇದಿಕೆಯಾಗಿ, ರೋಗಿಗಳಿಗೆ ಸಂಜೀವಿನಿಯಾಗಿ, ವಿದ್ಯಾರ್ಥಿಗಳಿಗೆ ಸರಸ್ವತಿಯಾಗಿ, ಅಮಾಯಕರಿಗೆ ಕರುಣಾಮಯಿಯಾಗಿ ಯುವವಾಹಿನಿ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು.
ಅವರು ದಿನಾಂಕ 21.04.2018 ರಂದು ಯಡ್ತಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಯುವವಾಹಿನಿ (ರಿ) ಯಡ್ತಾಡಿ ಘಟಕದ 2018-19 ನೇ ಸಾಲಿನ ಪದಸ್ವೀಕಾರ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಕೋಟ ಹೊಬಳಿಯ ಬಿಲ್ಲವ ಒಕ್ಕೂಟದ ಅಧ್ಯಕ್ಷು ಹಾಗೂ ಯುವವಾಹಿನಿ ಯಡ್ತಾಡಿ ಘಟಕದ ಮಾಜಿ ಅಧ್ಯಕ್ಷರು ಪ್ರಕಾಶ್ ಪೂಜಾರಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸೋಮಪ್ಪ ಸುವರ್ಣ ಹಾಗೂ ಚಲನಚಿತ್ರ ನಟ , ರಂಗ ಕಲಾವಿದರಾದ ರಘು ಪಾಂಡೇಶ್ವರ್ ಇವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಯಡ್ತಾಡಿ ಘಟಕದ ಅಧ್ಯಕ್ಷರಾದ ಶಂಕರ ಪೂಜಾರಿ ಮಾತನಾಡಿ ಕಳೆದ ಒಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವಿಕಸನ 2018 ರ ಸಂಚಾಲಕರಾದ ನರೇಂದ್ರ ಕುಮಾರ್ ಕೋಟ, ಶಿಕ್ಷಕಿ ಜ್ಯೋತಿ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸತೀಶ್ ಪೂಜಾರಿ ಸರ್ವರ ಸಹಕಾರದ ಮೂಲಕ ಯುವವಾಹಿನಿ ಯಡ್ತಾಡಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಲು ಪ್ರಯತ್ನಿಸುವುದಾಗಿ ತಿಳಿಸುದರು.
ಯುವವಾಹಿನಿ ಯಡ್ತಾಡಿ ಘಟಕದ ಕಾರ್ಯದರ್ಶಿ ಮಂಜುನಾಥ್ ಪೂಜಾರಿ 2017-18 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಯುವವಾಹಿನಿ ಯಡ್ತಾಡಿ ಘಟಕದ ಸಲಹೆಗಾರರಾದ ರಾಜು ಪೂಜಾರಿ ಪ್ರಸ್ತಾವನೆ ಮಾಡಿದರು. ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಪೂಜಾರಿ ಸ್ವಾಗತಿಸಿದರು, ನೂತನ ಕಾರ್ಯದರ್ಶಿ ಚಂದ್ರ ಪಿ.ಯಡ್ತಾಡಿ ವಂದಿಸಿದರು