Yuvavahini

ಇತರೆ

ಯುವವಾಹಿನಿ ಅಮಾಯಕರಿಗೆ ಕರುಣಾಮಯಿಯಾಗಿದೆ : ಯಶವಂತ ಪೂಜಾರಿ

ಯುವವಾಹಿನಿಯು ಪ್ರೀತಿ, ವಾತ್ಸಲ್ಯವನ್ನು ಯುವ ಮನಸುಗಳಿಗೆ ರವಾನಿಸುವ ಕಾರ್ಯವನ್ನು ಸಮಾಜದಲ್ಲಿ ಮಾಡುತ್ತುದೆ.  ಯುವ ಪ್ರತಿಭೆಗಳಿಗೆ ವೇದಿಕೆಯಾಗಿ, ರೋಗಿಗಳಿಗೆ ಸಂಜೀವಿನಿಯಾಗಿ, ವಿದ್ಯಾರ್ಥಿಗಳಿಗೆ ಸರಸ್ವತಿಯಾಗಿ, ಅಮಾಯಕರಿಗೆ ಕರುಣಾಮಯಿಯಾಗಿ ಯುವವಾಹಿನಿ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 21.04.2018 ರಂದು ಯಡ್ತಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಯುವವಾಹಿನಿ (ರಿ) ಯಡ್ತಾಡಿ ಘಟಕದ 2018-19 ನೇ ಸಾಲಿನ ಪದಸ್ವೀಕಾರ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಕೋಟ ಹೊಬಳಿಯ ಬಿಲ್ಲವ ಒಕ್ಕೂಟದ […]

Read More

ಸಮಾಜದಲ್ಲಿ ಪ್ರೀತಿ, ವಿಶ್ವಾಸ ,ಶಾಂತಿಯನ್ನು ಬಲಪಡಿಸುವಲ್ಲಿ ಹಬ್ಬಗಳು ದಾರಿದೀಪ : ಯಶವಂತ ಪೂಜಾರಿ

  ಬಜ್ಪೆ : ಜಾಗತೀಕರಣದ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳು ನಶಿಸಿಹೋಗುವ ಕಾಲಘಟ್ಟದಲ್ಲಿ ಯುವವಾಹಿನಿಯು ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮುಂದಿನ ಯುವಜನತೆಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸಿದೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿಯನ್ನು ಬಲಪಡಿಸುವಲ್ಲಿ ಹಬ್ಬಗಳು ದಾರಿದೀಪವಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ‌ 15.04.2018 ರಂದು ಬಜ್ಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಯುವವಾಹಿನಿ (ರಿ) ಬಜ್ಪೆ ಘಟಕದ ಆಶ್ರಯದಲ್ಲಿ ಜರುಗಿದ ಬಿಸು ಪರ್ಬ ಕಾರ್ಯಕ್ರಮದಲ್ಲಿ ಮುಖ್ಯ […]

Read More

ಯುವವಾಹಿನಿಯ ಸಾಧನೆ ಬಿಳಿ ಹಾಳೆಯಂತಿದೆ : ನಿರ್ಮಲಾ ಸಂಜೀವ್

ಮಂಗಳೂರು : ಪ್ರೀತಿ, ಅಕ್ಕರೆ ಹಾಗೂ ಕೌಟುಂಬಿಕ ಚೌಕಟ್ಟಿನ ಮೂಲಕ ಯುವವಾಹಿನಿ ಯುವಕರಿಗೆ ಪ್ರೇರಣೆ ನೀಡಿದೆ. 30 ವರ್ಷಗಳ ಇತಿಹಾಸವಿರುವ ಯುವವಾಹಿನಿಯ ಸಾಧನೆ ಯಾವುದೇ ಕಲ್ಮಶವಿಲ್ಲದೆ ಬಿಳಿ ಹಾಳೆಯಂತಿದೆ. ಯುವವಾಹಿನಿಯ ಆರಂಭದ ದಿನಗಳಿಂದಲೂ ತೀರಾ ಹತ್ತಿರದಿಂದ ಯುವವಾಹಿನಿಯನ್ನು ಕಂಡ ತನಗೆ ಯುವವಾಹಿನಿಯೇ ತನ್ನ ಮೊದಲ ಮಗು ಎಂದು ಗೋಕರ್ಣನಾಥ ಕೊ ಅಪರೇಟಿವ್ ಬ್ಯಾಂಕ್ ನ ಶಾಖಾ ಪ್ರಬಂಧಕರಾದ ನಿರ್ಮಲಾ ಸಂಜೀವ್ ತಿಳಿಸಿದರು. ಅವರು ದಿನಾಂಕ 11.04.2018 ರಂದು ಮಂಗಳೂರು ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) […]

Read More

ಅಧ್ಯಕ್ಷರಾಗಿ ರಶ್ಮಿ‌ ಸಿ.ಕರ್ಕೇರಾ ಆಯ್ಕೆ

ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ರಶ್ಮಿ ಸಿ.ಕರ್ಕೇರಾ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು : ರಶ್ಮಿ ಸಿ.ಕರ್ಕೇರಾ ಉಪಾಧ್ಯಕ್ಷರು : ಉಮಾವತಿ ಶ್ರೀಕಾಂತ್ ಕಾರ್ಯದರ್ಶಿ : ರವಿಕಲಾ ವೈ.ಅಮೀನ್ ಜತೆ ಕಾರ್ಯದರ್ಶಿ : ಶಕೀಲಾ ದಾಮೋದರ್ ಕೋಶಾಧಿಕಾರಿ : ಕುಶಾಲಾಕ್ಷಿ ಯಶವಂತ್ ಸಂಘಟನಾ ಕಾರ್ಯದರ್ಶಿ : ಸುನೀತಾ ನಿರ್ದೇಶಕರು :  ಸಮಾಜ ಸೇವೆ : ಲಲಿತಾ ವ್ಯಕ್ತಿತ್ವ ವಿಕಸನ : ರೇಖಾ ಗೋಪಾಲ್ ಕಲೆ ಮತ್ತು ಸಾಹಿತ್ಯ : ಅಮಿತಾ, ಪ್ರತಿಭಾ ನಾರಾಯಣಗುರು ತತ್ವ […]

Read More

ಅಂತರಂಗದಲ್ಲಿ ತಣ್ಣಗೆ ಹರಿದಾಡಿ ಮುದಗೊಳಿಸಿದ ಸಖೀ ಸಂವಾದ : ಪೂರ್ಣಿಮಾ ಸುರೇಶ್

ಸಖ್ಯ ಸುಖಕೆ ಪರಿಧಿ ಇದೆಯೇ? ಅಂತರಂಗದಲಿ ತಣ್ಣಗೆ ಹರಿದಾಡಿ ಮುದಗೊಳಿಸಿ,ಹಿತಾನುಭವ ಜೊತೆಜೊತೆಗೆ ಭದ್ರತೆಯ ಭಾವ ಉಣಿಸಿ ಸಮೃದ್ಧಗೊಳಿಸುವುದು.ಅಂತೇ ಸಖಿ- ಸಖ ಪದಗಳು ಪಂಚೇಂದ್ರಿಯಗಳ ಮುಟ್ಟಿದರೆ ಉಲ್ಲಾಸ. ತಂಗಾಳಿ ಸ್ಪರ್ಶಿಸಿದಂತೆ. ಈ ಭಾವ ನೆನಕೆಗೆ ದಿನಾಂಕ‌08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನೆನಪಿನಲ್ಲಿ ” ಸಖೀ ಸಂವಾದ” ಅರಳಿಸುವ ಜವಾಬ್ದಾರಿಯನ್ನ ನಿಭಾಯಿಸಿತ್ತು. ಹೆಸರಿನಲ್ಲೇ ಹೂವಿನಲಿ ಅಡಗಿಹ ಗಂಧದ ಸೆಳೆತ […]

Read More

ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ : ಸುಮತಿ

 ಉಡುಪಿ :  ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ ಹಾಗೂ ತನ್ನ ಸಾಧನೆಯ ಹಿಂದೆ ಕಷ್ಟದ ದಿನಗಳಿದ್ದವು ಅವೆಲ್ಲವನ್ನು ಸವಾಲಾಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ವೀಯಾಗಿದ್ದೇನೆ ಎಂದು ಶಾಲಾ ಮಕ್ಕಳ ಮಹಿಳಾ ವಾಹನ ಚಾಲಕಿ ಸುಮತಿ ತಿಳಿಸಿದರು. ಅವರು ದಿನಾಂಕ 08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ಜರುಗಿದ ತೊಟ್ಟಿಲು ತೂಗಿದ ಕೈ ಎಲ್ಲದಕ್ಕೂ ಸೈ ಎಂದು ತೋರಿಸಿಕೊಟ್ಟ ಸಾಧಕಿಯರೊಂದಿಗೆ ಸಖೀ […]

Read More

ಉದ್ಯಮ ಶೀಲತಾ ಕೌಶಲ್ಯ ಜಾಗೃತಿ ಶಿಬಿರ

 ಅಡ್ವೆ : ಸ್ವ-ಉದ್ಯೋಗದ ಮೂಲಕ ತಾನು ಬೆಳೆಯುವುದರೊಂದಿಗೆ ಇತರರ ಬೆಳವಣಿಗೆಗೆ ಸಹಕಾರಿಯಾಗಿದೆ.ಸ್ವ ಉದ್ಯೋಗದಿಂದ ಸಮಾಜದ ಹಿತ ಅಡಗಿದೆ ಸಾವಿರಾರು ಉದ್ಯೋಗದ ಸ್ರಷ್ಟಿಯಾಗಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಜಯಂತ ನಡುಬೈಲು ತಿಳಿಸಿದರು ಅವರು ದಿನಾಂಕ 01.04.2018 ರಂದು ಯುವವಾಹಿನಿ(ರಿ) ಅಡ್ವೆ ಘಟಕದ ಆಶ್ರಯದಲ್ಲಿ ಅಡ್ವೆಆನಂದಿ ಸಭಾಭವನದಲ್ಲಿ ಜರುಗಿದ ಉದ್ಯಮ ಶೀಲತಾ ಕೌಶಲ್ಯ ಜಾಗೃತಿ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು . ಯುವವಾಹಿನಿ ಸದಸ್ಯರು ಸ್ವಾವಲಂಬಿಯಾಗಿ ಬದುಕಲು ಕಲಿಯಿರಿ, ಅದಕ್ಕೆ ಬೇಕಾದ […]

Read More

ಯುವವಾಹಿನಿಯ ನಡೆ ಜಾಗೃತ ಸಮಾಜದ ಕಡೆ : ಜಯಾನಂದ

ಕಂಕನಾಡಿ: ಯುವವಾಹಿನಿ ಸ್ವಾಭಿಮಾನದ ಸ್ಪೂರ್ತಿ, ಸಮಾಜದಲ್ಲಿ ಸಂಘಟನೆಯ ಅರಿವು ಮೂಡಿಸಿದೆ, ಆತ್ಮವಿಶ್ವಾಸವನ್ನು ಬಿಟ್ಟು ಮಿಕ್ಕೆಲ್ಲವನ್ನೂ ಕಳಕೊಂಡರೂ ಚಿಂತೆ ಇಲ್ಲ ಎಂಬ ಗುರುವರ್ಯರ ಸಂದೇಶದಂತೆ ನಾವು ಕೀಳರಿಮೆ ಬಿಟ್ಟು ಕತ್ತಲೆಯಿಂದ ಜ್ಞಾನದ ಬೆಳಕಿನೆಡೆ ಮುನ್ನಡೆಯೋಣ , ಯುವವಾಹಿನಿಯ ನಡೆ ಜಾಗೃತ ಸಮಾಜದ ಕಡೆ ಮುಖ ಮಾಡಿದೆ ಇದು ನಿರಂತರ ಪ್ರಕ್ರಿಯೆಯಾಗಲಿ ಹಾಗೂ ಯುವವಾಹಿನಿ ಕಂಕನಾಡಿ ಘಟಕವು ಶ್ರೇಷ್ಠ ಘಟಕವಾಗಿ ಹೊರಹೊಮ್ಮಲಿ ಎಂದು ಮೆಸ್ಕಾಮ್ ಕಾರ್ಯಪಾಲಕ ಇಂಜಿನಿಯರ್ ಜಯಾನಂದ ಎಮ್ ತಿಳಿಸಿದರು ಅವರು ದಿನಾಂಕ 01.04.2018 ರಂದು ಉಜ್ಜೋಡಿ ಶ್ರೀ […]

Read More

ಯುವವಾಹಿನಿ ಆಶ್ರಯ ವಾಹಿನಿ : ಬಲ್ಯೊಟ್ಟು ಸ್ವಾಮೀಜಿ

ಕುಪ್ಪೆಪದವು : ಸತ್ ಚಿಂತನೆಯನ್ನು ರೂಪಿಸಿಕೊಳ್ಳುವ ಮೂಲಕ ಯುವ ಸಮುದಾಯದ ಶಕ್ತಿ ಸಾರ್ಥಕತೆಯನ್ನು ಪಡೆಯುತ್ತದೆ, ಸಮಾಜಮುಖಿ ಕಾರ್ಯಗಳ ಮೂಲಕ ಶೋಷಿತ ಜನಾಂಗವನ್ನು ಮುಖ್ಯ ವಾಹಿನಿಗೆ ತರುವಂತಹ ಯುವವಾಹಿನಿ ಸಮಾಜದ ಆಶ್ರಯ ವಾಹಿನಿಯಾಗಿದೆ, ಬಿಲ್ಲವ ಸಮಾಜದ ಆದರ್ಶದ ದಾರಿದೀಪವಾಗಿದೆ ಎಂದು ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ತಿಳಿಸಿದರು ಅವರು ದಿನಾಂಕ 01.04.2018 ರಂದು ಯುವವಾಹಿನಿಯ 30 ನೇ ನೂತನ ಘಟಕ ಯುವವಾಹಿನಿ (ರಿ) ಕುಪ್ಪೆಪದವು ಘಟಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶಗಳನ್ನು ಅಕ್ಷರಶಃ ಪಾಲಿಸುತ್ತಿರುವ […]

Read More

ಕೋಟಿ ಚೆನ್ನಯ ನಾಟಕಕ್ಕೆ ಹೊಸ ಛಾಪು ಮೂಡಿಸಿದ ಯುವವಾಹಿನಿ ಕಲಾವಿದರು

ಕಥೆಗಾರ,ಕಾದಂಬರಿಗಾರ,ನಾಟಕಗಾರ ದಿ.ವಿಶುಕುಮಾರ್‌ ಅವರ ಕೋಟಿ ಚೆನ್ನಯ ನಾಟಕಕ್ಕೆ ಮರ ಜೀವ ತುಂಬಿದ ಯುವವಾಹಿನಿ ಕಲಾವಿದರು ಇಂದು ತುಳು ನಾಟಕರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯಅಕಾಡೆಮಿ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಸಿದ ಎಂಟು ದಿನಗಳ ನಾಟಕ ಪರ್ಬದಲ್ಲಿ ಯುವವಾಹಿನಿನಿಯ ೫೧ ಮಂದಿ ಕಲಾವಿದರು ವಿಶುಕುಮಾರ್‌ ಅವರ ಕೋಟಿಚೆನ್ನಯ ನಾಟಕ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಐದು ದಶಕದ ಹಿಂದೆ ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ್ದ, ಬಳಿಕ ಸಿನಿಮವಾಗಿ ಪ್ರೇಕ್ಷಕರ ಮನ ಗೆದ್ದ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!