ಕುಳಾಯಿ : ತುಳುನಾಡಿನ ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಹೊಣೆಗಾರಿಕೆ ಪ್ರಾಮುಖ್ಯವಾಗಿದೆ. ಯುವವಾಹಿನಿ ಸಂಘಟನೆ ಯುವಕರಲ್ಲಿ ಶಿಕ್ಷಣ, ಸಂಘಟನೆ ಬಗ್ಗೆ ಜಾಗ್ರತಿ ಮೂಡಿಸಿ ಸುಸಂಸ್ಕ್ರತ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆಟಿದ ಪೊನ್ನುಪೊಂಜೊವುಲು ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಪೆರ್ಮನ್ನೂರು ಸರಕಾರಿ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ತಿಳಿಸಿದರು.
ಅವರು ದಿನಾಂಕ 29-07-2018ನೇ ಆದಿತ್ಯವಾರದಂದು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ, ಯುವವಾಹಿನಿ(ರಿ) ಪಣಂಬೂರು ಘಟಕ ಮತ್ತು ಯುವವಾಹಿನಿ(ರಿ) ಸುರತ್ಕಲ್ ಘಟಕದ ಕೂಡುವಿಕೆಯಿಂದ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ ಇದರ ಸಭಾಂಗಣದಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿಗೆ ದೀಪ ಬೆಳಗಿಸುವುದರ ಮೂಲಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪಡೀಲ್ ದಿವಂಗತ ಜಗನ್ನಾಥ್ ಕೋಟ್ಯಾನ್ ವೇದಿಕೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಪ್ರಭಾಕರ ಕುಳಾಯಿಯವರು ಸ್ವಾಗತಿಸಿದರು. ಯುವವಾಹಿನಿ(ರಿ) ಪಣಂಬೂರು ಘಟಕದ ಅಧ್ಯಕ್ಷರಾದ ಜಗದೀಶ್ ಸುವರ್ಣ, ಸುರತ್ಕಲ್ ಘಟಕದ ಅಧ್ಯಕ್ಷರಾದ ಅಶೋಕ ಕುಳಾಯಿ ಮತ್ತು ಹಿರಿಯ ಕೃಷಿಕರಾದ ಅಣ್ಣಪ್ಪ ಸಾಲಿಯಾನ್ ಕುಳಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಕೃಷಿಕರಾದ ಅಣ್ಣಪ್ಪ ಸಾಲಿಯಾನ್ ಕುಳಾಯಿ ಇವರು ಹಾಲೆ ಮರದ ಕೆತ್ತೆಯನ್ನು ಬೊಳ್ಳುಕಲ್ಲಿನಿಂದ ಜಜ್ಜಿ ತೆಗಿಯುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ನರೇಶ್ ಕುಮಾರ್ ಸಸಿಹಿತ್ಲು ಆಟಿದ ಆಚರಣೆ ಬಗ್ಗೆ ಉಪನ್ಯಾಸ ನೀಡುತ್ತಾ ತುಳುನಾಡಿನ ಆಚರಣೆ, ಜೀವನ ಪದ್ದತಿ ಹಾಗೂ ಸಂಸ್ಕೃತಿಯನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ತಿಳಿಸಿ ಹೇಳುವ ಮೂಲಕ ಆಟಿ ತಿಂಗಳ ವಿಶೇಷತೆಯನ್ನು ಸಾರುವ ಆಟಿಡೊಂಜಿ ಕಾರ್ಯಕ್ರಮವನ್ನು ಹಮ್ಮಿಕೊಂಡಂತಹ ಬಿಲ್ಲವ ಸಂಘಟನೆಗಳ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತ ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್ ಮಾತನಾಡಿ ನಾಗರಾದನೆ, ದೈವರಾದನೆ, ತುಳುನಾಡಿನ ಸಂಸ್ಕೃತಿ ಮತ್ತು ಆಟಿ ತಿಂಗಳ ಆಚರಣೆಯ ಮಹತ್ವವನ್ನು ಆಟಿದ ಗೊಬ್ಬುಲು ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾದ ರೂಪಾ ಕೆ ಕುಳಾಯಿ, ಮೋಹಿತ್ ಸನಿಲ್, ತ್ರಿಶಿರ್ ಕುಳಾಯಿ, ತನುಶ್ರಿ, ವರ್ಷಿಣಿ ಅವರನ್ನು ಅವರ ವಿದ್ಯಾ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಅಭಿನಂದಿಸಲಾಯಿತು.
ಪಣಂಬೂರು ಘಟಕದ ಸದಸ್ಯರು ಆಟಿ ತಿಂಗಳ ಸಂಸ್ಕಾರವನ್ನು ಸಾರುವ ಕಿರು ನಾಟಕವನ್ನು ಪ್ರದರ್ಶಿಸಿದರು. ಸುರತ್ಕಲ್ ಘಟಕದ ಸದಸ್ಯರು ಜಾನಪದ ನೃತ್ಯ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಕಾರ್ಯಕ್ರಮ ಸಂಯೋಜಕ ಯೋಗೀಶ್ ಸನಿಲ್ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿಯವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.
ಆ ಬಳಿಕ ಆಗಮಿಸಿದ ಎಲ್ಲಾ ಸಭಿಕರಿಗೆ ಆಟಿ ತಿಂಗಳ ಅಡುಗೆಯನ್ನು ಉಣಬಡಿಸಲಾಯಿತು.
Stage setting is very meaningful.