ಪುತ್ತೂರು : ವಿದ್ಯೆ-ಉದ್ಯೋಗ -ಸಂಪರ್ಕ ಎಂಬ ದ್ಯೇಯವಾಕ್ಯದಡಿಯಲ್ಲಿ ಕರ್ತವ್ಯ ನಿರ್ವಹಿಸುವ ಯುವವಾಹಿನಿ ಸಂಘಟನೆಂಯು ಕಷ್ಟದಲ್ಲಿರುವವರೆಗೆ ಸದಾ ಸ್ವಂದಿಸುವ ಸಂಘಟನೆಯಾಗಿ ಹೆಸರು ಗಳಿಸಿದೆ ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಜಯಂತ ನಡುಬೈಲುರವರು ಹೇಳಿದರು.
ಅವರು ಜು .೨೨ ರಂದು ಬಪ್ಪಳಿಗೆ ಬ್ರಹ್ಮಶ್ರಿ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಯುವವಾಹಿನಿ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಯುವವಾಹಿನಿ ಘಟಕದಲ್ಲಿ ಕಳೆದ ಒಂಬತ್ತು ವರ್ಷದಿಂದ ಸತತವಾಗಿ ದುಡಿದರ ಪರಿಣಾಮ ಇಂದು ನನಗೆ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷನಾಗುವ ಯೋಗ ಬಂದಿದೆ. ಯುವವಾಹಿನಿ ಸಂಘಟನೆಯ ಯುವಕರಿಗೆ ಸಮಾಜದಲ್ಲಿ ಮುಂದೆ ಬರಲು ಒಂದು ವೇದಿಕೆಯಾಗಿದೆ ನಿಜ ಎಂದರು. ಪುತ್ತೂರು ಯುವವಾಹಿನಿ ಘಟಕದ ಸದಸ್ಯರು ರಕ್ತದಾನಕ್ಕೆ ಬಹಳ ಮಹತ್ವ ನೀಡುತ್ತಿದ್ದಾರೆ. ವ್ಯಕ್ತಿಗೆ ರಕ್ತದ ಅವಶ್ಯಕತೆ ಇದ್ದಲ್ಲಿ ಯುವವಾಹಿನಿ ಸದಸ್ಯರು ಕೂಡಲೇ ಸ್ವಂದಿಸುತ್ತಾರೆ ಮಾತ್ರವಲ್ಲದೆ ರಕ್ತದ ಅವಶ್ಯಕತೆಯಿದ್ದಲ್ಲಿ ವರ್ಷದ ೩೬೫ ದಿನವೂ ಕೂಡಲೇ ಸ್ವಂದಿಸುವ ಏಕೈಕ ಸಂಘಟನೆ ಆಗಿದ್ದರೆ ಅದು ಯುವವಾಹಿನಿ ಸಂಘಟನೆಯಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಯುವವಾಹಿನಿ ಸಂಘಟನೆಯು ಮತ್ತಷ್ಟು ಅಭಿವೃಧ್ದಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷ ಡಾ . ಸದಾನಂದ ಕುಂದರ್ ರವರು ಮಾತನಾಡಿ ದಾನದಲ್ಲಿ ಶ್ರೇಷ್ಟವಾದ ದಾನ ಎಂದರೆ ಅದು ರಕ್ತದಾನ .ಈ ನಿಟ್ಟಿನಲ್ಲಿ ಜೀವನದ ಗರಿಷ್ಟ ಪ್ರಮಾಂದಲ್ಲಿ ರಕ್ತದಾನ ಮಾಡಿದ ಮತ್ತು ಬ್ಲಡ್ ಬ್ಯಾಂಕ್ ನಲ್ಲಿ ಅವಿರತ ಸೇವೆ ಸಲ್ಲಿಸುವ ವೈದ್ಯರೋರ್ವರನ್ನು ಗುರುತಿಸಿ ಸನ್ಮಾನಿಸಿರುವುದು ಸಂಘಟನೆಯ ಹೆಗ್ಗಳಿಕೆಯಾಗಿದೆ. ರಕ್ತದಾನದ ಪ್ರಾಮುಖ್ಯತೆಯನ್ನು ತಿಳಿದುಕೊಂಡು ರಕ್ತದಾನ ಮಾಡುವಲ್ಲಿ ಯುವಕರು ಮುಂದೆ ಬರಬೇಕಾಗಿದೆ. ಯುವವಾಹಿನಿ ಘಟನೆಯು ಘಟಕವು ಪ್ರತೀ ವರ್ಷ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಹರೀಶ್ ಶಾಂತಿರವರು ಮಾತನಾಡಿ ,ಮನುಷ್ಯನ ಜೀವನವು ಹುಟ್ಟು-ಸಾವಿನ ಮಧ್ಯೆ ನಿಂತಿದೆ. ಈ ಹುಟ್ಟು-ಸಾವಿನ ನಡುವೆ ಮಾನವ ಯಾವ ರೀತಿ ಜೀವಿಸುತ್ತಾನೆ ಮತ್ತು ಯಾವೆಲ್ಲಾ ಸೇವಾ ಕೈಂರ್ಯವನ್ನು ಮಾಡುತ್ತಾನೆ. ಎಂಬುದು ಮಾತ್ರ ಮುಖ್ಯವಾಗಿದೆ.ನಾರಾಯಣಗುರುಗಳ ಧ್ಯೇಯ ವಾಕ್ಯದಡಿಯಲ್ಲಿ ಸೇವೆಗ್ಯೆಯುವ ಪ್ರತಿಷ್ಠಿತ ಸಂಸ್ಧೆಯಾಗಿರುವ ಯುವವಾಹಿನಿ ಸಂಘಟನೆಯಲ್ಲಿ ಸೇವೆ ಮಾಡಲು ಹೆಚ್ಚು ಉತ್ಸುಕನಾಗಿದ್ದೇನೆ. ಸಂಘಟನೆಗಳು ಸಮಾಜಮುಖಿಯಾಗಿ ಇದ್ದಾಗ ಮಾತ್ರ ಸಂಘಟನೆಗಳು ಹೆಚ್ಚು ಕಾಲ ಬಾಳ್ವಿಕೆ ಹೊಂದಬಲ್ಲವು. ಈ ನಿಟ್ಟಿನಲ್ಲಿ ನಾರಾಯಣಗುರುಗಳು ಪ್ರತಿಪಾದಿಸಿದ ತತ್ವಗಳು ಅನುಷ್ಠಾನಗೊಳ್ಳಬೇಕಾಗಿದೆ ಎಂದು ಹೇಳಿ ಸರ್ವರ ಸಹಕಾರ ಕೋರಿದರು.
ಗುರುತಿಸುವಿಕೆ : ಯುವವಾಹಿನಿ ಸಂಘಟನೆಯಲ್ಲಿದ್ದು ಇತರೆ ಸೇವಾಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಸಂಘಟನೆಯ ಸದಸ್ಯರಾದ ನೂತನ ಅಧ್ಯಕ್ಷ ಹರೀಶ್ ಶಾಂತಿ , ಯುವವಾಹಿತಿ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ (ರೋಟರಿ ಕ್ಲಬ್ ಪುತ್ತೂರು ಸಿಟಿ ), ರಾಜೇಶ್ ಬೆಜ್ಜಂಗಳ (ಜೇಸಿಐ ,ರೋಟರಿ ಕ್ಲಬ್ ಪುತ್ತೂರು ಸಿಟಿ ), ಯುವವಾಹಿನಿ ಮಾಜಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ,ನವೀನ್ ಕಲ್ಲುಗುಡ್ಡೆ ,ಸಂತೋಷ್ ಕೆಯ್ಯೂರು ( ರೋಟರಿ ಕ್ಲಬ್ ಪುತ್ತೂರು ಪೂರ್ವ ), ಪ್ರಶಾಂತ್ ಪಲ್ಲತ್ತಡ್ಕ (ರೋಟರಿ ಕ್ಲಬ್ ತಿಂಗಳಾಡಿ , ರೋಟರಿ ಕ್ಲಬ್ ಪುತ್ತೂರು ಪೂರ್ವ), ಶಿಲ್ಪಾ ಕೋಟ್ಯಾನ್ ಅಭಿಷೇಕ್ ಕೋಟ್ಯಾನ್ (ಜೇಸಿ ಐ ಸದಸ್ಯರು ) ರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಪೂಜಾ ವಸಂತ್ ,ಬಿಲ್ಲವ ವಿದ್ಯಾರ್ಧಿ ಸಂಘದ ಅಧ್ಯಕ್ಷ ಕೌಶಿಕ್ ಸುವರ್ಣ ,ಯುವವಾಯಿನಿ ನಮಾಜ ಸೇವೆ ನಿರ್ದೇಶಕರಾದ ತಿಮ್ಮಪ್ಪ ಸುವರ್ಣ ಬಲ್ನಾಡುರವರು ವೇದಿಕೆಯಲ್ಲಿ ಉಪಸ್ಧಿತರಿದ್ದರು. ಶಿವತೇಜ್ ಬಲ್ನಾಡು ಪ್ರಾರ್ಥಿಸಿದರು.ಯುವವಾಹಿನಿ ಪುತ್ತೂರು ಘಟಕದ ಸಂಚಾಲಕ ನಾಗೇಶ್ ಬಲ್ನಾಡುರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಉದಯಕುಮರ್ ಕೋಲಾಡಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅನೂಪ್ ಕುಮಾರ್ ಎಸ್ ವಂದಿಸಿದರು.ಯುವವಾಹಿನಿ ಮಾಜಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಹಾಗೂ ಯುವವಾಹಿನಿ ಕಲೆ ಮತ್ತು ಸಾಹಿತ್ಯ ಇದರ ನಿರ್ದೇಶಕ ಅವಿನಾಶ್ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು.