Yuvavahini

ಘಟಕಗಳು

ಹೊಲಿಗೆ ತರಬೇತಿ ಶಿಬಿರ ಸಮಾರೋಪ

ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ 11/04/2017 ರಿಂದ 11.05.2017 ರವರೆಗೆ ಯುವವಾಹಿನಿ ಸಂಚಾಲನ ಸಮಿತಿ ಮೂಡುಕೋಡಿ ಮತ್ತು ಸೇವಾ ಭಾರತಿ ಮೂಡುಕೋಡಿ ಇದರ ಜಂಟಿ ಸಹಯೋಗದೊಂದಿಗೆ ಒಂದು ತಿಂಗಳ ಕಾಲ ಮೂಡುಕೋಡಿ ಶ್ರೀರಾಮ ಮಂದಿರದಲ್ಲಿ  ಹೊಲಿಗೆ ತರಬೇತಿ ಶಿಬಿರವು ಜರುಗಿತು. ದಿನಾಂಕ 11.05.2017 ರಂದು ಸಮಾರೋಪ ಸಮಾರಂಭವು ಯುವವಾಹಿನಿ ಸಂಚಾಲನ ಮೂಡುಕೋಡಿಯ ಕಾರ್ಯದರ್ಶಿ ಯೋಗೀಶ್ ಬಿಕ್ರೊಟ್ಟು ಇವರ ಅಧ್ಯಕ್ಷತೆಯಲ್ಲಿ ಜರುಗಿತು..ಮುಖ್ಯ ಅತಿಥಿಗಳಾಗಿ ಸೇವಾ ಭಾರತಿ ಕನ್ಯಾಡಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ […]

Read More

ಹಗ್ಗಜಗ್ಗಾಟ : ಕಟಪಾಡಿ ಹಾಗೂ ಮಂಗಳೂರು ಮಹಿಳಾ ತಂಡಗಳಿಗೆ ಪ್ರಶಸ್ತಿಯ ಗರಿ

ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ  ಯುವವಾಹಿನಿ ಅಂತರ್ ಘಟಕ ಹಗ್ಗಜಗ್ಗಾಟ ಸ್ಪರ್ಧೆ ಜರುಗಿತು. ಈ ಕ್ರೀಡಾಕೂಟದಲ್ಲಿ ಒಟ್ಟು  16 ಯುವವಾಹಿನಿ ತಂಡಗಳು ಭಾಗವಹಿಸಿದ್ದವು ಪುರುಷರ ವಿಭಾಗದಲ್ಲಿ ಯುವವಾಹಿನಿ ಕಟಪಾಡಿ ಪ್ರಥಮ, ಬಂಟ್ವಾಳ ದ್ವಿತೀಯ, ಪುತ್ತೂರು ತೃತೀಯ   ಹಾಗೂ ಮಹಿಳಾ ವಿಭಾಗದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಪ್ರಥಮ, ಉಡುಪಿ ದ್ವಿತೀಯ, ಬಂಟ್ವಾಳ ತೃತೀಯ  ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಬಹುಮಾನ ವಿಜೇತ ತಂಡಗಳು […]

Read More

ಯುವವಾಹಿನಿ ಬಿಲ್ಲವ ಸಮಾಜದ ಕಣ್ಣುಗಳು – ಡಾ. ರಾಜಶೇಖರ ಕೋಟ್ಯಾನ್

ಯುವವಾಹಿನಿಯು ಬಿಲ್ಲವ ಸಮಾಜದ ಕಣ್ಣುಗಳು,  ವಜ್ರದಂತೆ ಬಲಿಷ್ಠವಾಗಿರುವ   ಬಿಲ್ಲವ ಸಮಾಜವನ್ನು ಪರಸ್ಪರ ಪ್ರೀತಿ, ವಿಶ್ವಾಸ, ಸಂಪರ್ಕದ ಮೂಲಕ ಹೊಳಪು ನೀಡುವ ಕಾರ್ಯವನ್ನು ಯುವವಾಹಿನಿ ಮಾಡುತ್ತಿದೆ ಎಂದು ರಾಜ್ಯಪ್ರಶಸ್ತಿ ಪುರಸ್ಕ್ರತ ಚಲನಚಿತ್ರ ನಟ,ನಿರ್ಮಾಪಕ ರಾಜಶೇಖರ ಕೋಟ್ಯಾನ್ ತಿಳಿಸಿದರು. ಅವರು ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಯುವಕ್ರೀಡಾ ಸಂಗಮ 2017 […]

Read More

ಯುವವಾಹಿನಿಯ ಯುವಕ್ರೀಡಾ ಸಂಗಮ -2017 ಉದ್ಘಾಟನೆ

  ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ,ನೆಮ್ಮದಿಯನ್ನು ಬಲಪಡಿಸುವಲ್ಲಿ ಯುವಕರ ಪಾತ್ರ ಮಹತ್ತರವಾದುದು, ಈ ನಿಟ್ಟಿನಲ್ಲಿ ಯುವಕರನ್ನು ಕ್ರೀಡೆಯ ಮೂಲಕ ಸಂಘಟಿಸುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾದುದು ಎಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅದ್ಯಕ್ಷರಾದ ಶ್ರೀ ಅಶೋಕ್ ಎಂ.ಸುವರ್ಣ ತಿಳಿಸಿದರು. ಅವರು ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ […]

Read More

ಸಾರ್ವಜನಿಕ ಶನಿಪೂಜೆ

ಯುವವಾಹಿನಿ (ರಿ) ಹೆಜಮಾಡಿ ಘಟಕ ಹಾಗೂ ಹೆಜಮಾಡಿ ಬಿಲ್ಲವ ಸಂಘದ ಆಶ್ರಯದಲ್ಲಿ ದಿನಾಂಕ 06.05.2017 ನೇ ಶನಿವಾರ ಹೆಜಮಾಡಿ ಬಿಲ್ಲವ ಸಂಘದಲ್ಲಿ 19ನೇ ವರ್ಷದ  ಸಾರ್ವಜನಿಕ ಶನಿ ಪೂಜೆ ಜರಗಿತು. ಹೆಜಮಾಡಿ ಯುವವಾಹಿನಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು

Read More

ಮೂಲ್ಕಿ ಯುವವಾಹಿನಿಯಿಂದ ಧಾರ್ಮಿಕ ಸೇವಾ ಕಾರ್ಯ

ದಿನಾಂಕ 30.04.2017 ರಿಂದ 05.05.2017 ರವರಗೆ ಮೂಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥವಾಗಿ ಜರುಗಿದ ಶ್ರೀ ಶತಚಂಡಿಕಾದ್ವರದಲ್ಲಿ ಹೊರೆ ಕಾಣಿಕೆಯನ್ನು ಮೂಲ್ಕಿ ಯುವವಾಹಿನಿ ವತಿಯಿಂದ ಸಮರ್ಪಿಸಲಾಯಿತು. ಹಾಗೂ ಆರು ದಿನಗಳ ಕಾಲ ಜರುಗಿದ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಲು ಯುವವಾಹಿನಿ ಸದಸ್ಯರು ಸಹಕಾರ ನೀಡಿದರು ಮೂಲ್ಕಿ ಯುವವಾಹಿನಿ ಅದ್ಯಕ್ಷ ಚೇತನ್ ಕುಮಾರ್, ಪದಾದಿಕಾರಿಗಳು,ಮಾಜಿ ಅಧ್ಯಕ್ಷರುಗಳು ಸದಸ್ಯರು ಉಪಸ್ಥಿತರಿದ್ದರು

Read More

ನಮ್ಮ ಮನೆ :- ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ತೀರಾ ಬಡ ಕುಟುಂಬ ಪೋಂಕ್ರ ಪೂಜಾರಿ  ಇವರಿಗೆ ಸುಮಾರು ರೂಪಾಯಿ ಮೂರುವರೆ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಯಿತು. ಹೆಜಮಾಡಿ ಯುವವಾಹಿನಿಯ ಯಶಸ್ವೀ ಸಮಾಜಮುಖಿ ಕಾರ್ಯ ಮನೆ ನಿರ್ಮಾಣ ಯೋಜನೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕೇವಲ ಮೂರು ತಿಂಗಳ ಅವಧಿಯಲ್ಲಿ ದಾನಿಗಳ ಸಹಾಯ ಹಾಗೂ ಹೆಜಮಾಡಿ ಯುವವಾಹಿನಿ ಸದಸ್ಯರ ಶ್ರಮದ ಫಲವಾಗಿ ನಮ್ಮ ಮನೆ ನಿರ್ಮಾಣ ಯೋಜನೆ ಯಶಸ್ವಿಯಾಗಿದೆ ಎಂದು ಹೆಜಮಾಡಿ ಯುವವಾಹಿನಿ ಅಧ್ಯಕ್ಷರಾದ ಲೋಕೇಶ್ ಅಮೀನ್ ತಿಳಿಸಿದರು. […]

Read More

ಶಿವಪ್ರಸಾದ್ ನೇತ್ರತ್ವದ ಸುಳ್ಯ ಯುವವಾಹಿನಿ ಪದಗ್ರಹಣ

ದಿನಾಂಕ 30.04.2017ನೇ ಆದಿತ್ಯವಾರ ಸುಳ್ಯ ಕಾಯರ್ತೋಡಿ ಮಹಾವಿಷ್ಣುವಿನ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) ಸುಳ್ಯ ಘಟಕದ 2017-18 ನೇ ಸಾಲಿನ ಪದಾದಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು ಯುವವಾಹಿನಿ ಕೇಂದ್ರ ಸಮಿತಿಯ 25ನೇ ಘಟಕ ಯುವವಾಹಿನಿ (ರಿ) ಸುಳ್ಯ ಘಟಕದ ನೂತನ ಅದ್ಯಕ್ಷರಾಗಿ ಶಿವಪ್ರಸಾದ್.ಕೆ.ವಿ ಹಾಗೂ ಇತರ 16 ಕಾರ್ಯಕಾರಿ ಸಮಿತಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಸುಳ್ಯ ತಾಲೂಕು ಸಂಘಟನಾ ಕಾರ್ಯದರ್ಶಿ ಮಹೇಶ್ಚಂದ್ರ ಬಿ.ಟಿ. ನೂತನ ಪದಾದಿಕಾರಿಗಳ ಆಯ್ಕೆ ಪ್ರಕಟಿಸಿದರು. ಯುವವಾಹಿನಿ […]

Read More

ಸುಳ್ಯ ಯುವವಾಹಿನಿ ಅಸ್ತಿತ್ವಕ್ಕೆ

ಯುವವಾಹಿನಿಯು ಕೇವಲ ಸಾಮಾಜಿಕ ಸಂಘಟನೆಯಲ್ಲ ಪ್ರೀತಿ,ವಿಶ್ವಾಸ, ಮಾನವೀಯತೆಯನ್ನು ಪರಸ್ಪರ ಬೆಸೆಯುವ ಸಂಸ್ಥೆ, ಯುವವಾಹಿನಿಯು ನಾಯಕತ್ವ, ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ರೂಪಿಸಿ ಬಿಲ್ಲವ ಸಮಾಜದಲ್ಲಿ ಆದರ್ಶ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅದ್ಯಕ್ಷ ಸಂಪತ್ ಬಿ.ಸುವರ್ಣ ತಿಳಿಸಿದರು ದಿನಾಂಕ 30.04.2017 ಆದಿತ್ಯವಾರ  ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ (ರಿ) ಸುಳ್ಯ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಗಿ ಭಾಗವಹಿಸಿ ಮಾತನಾಡಿದರು ಸುಳ್ಯ ತಾಲೂಕು ಬ್ರಹ್ಮಶ್ರೀ ಗುರುನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ […]

Read More

ಮಂಗಳೂರು ಯುವವಾಹಿನಿಯಿಂದ ಸಂಚಾರಿ ಮಾಹಿತಿ ಕಾರ್ಯಾಗಾರ

ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 25.04.2017 ನೇ ಮಂಗಳವಾರದಂದು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ಕಛೇರಿಯಲ್ಲಿ   ಸಂಚಾರಿ ನಿಯಮಗಳ ಮಾಹಿತಿ ಕಾರ್ಯಾಗಾರ ಜರುಗಿತು. ಮಂಗಳೂರು ಉತ್ತರ ವಲಯದ ಟ್ರಾಫಿಕ್ ಇನ್ಸ್‌ಪೆಕ್ಟರ್ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು ಸಂಚಾರಿ ನಿಯಮಗಳ ಪಾಲನೆ,ಅನಾಹುತಗಳನ್ನು ತಡೆಗಟ್ಟುವ  ಮುಂಜಾಗೃತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು ಯುವವಾಹಿನಿ ಮಂಗಳೂರು ಘಟಕದ ವಾರದ ಸಾಪ್ತಾಹಿಕ ಸಭೆಯಲ್ಲಿ ಜರುಗಿದ ಈ ಮಾಹಿತಿ ಕಾರ್ಯಾಗಾರದಲ್ಲಿ ಸುಮಾರು 75ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!