ಯುವವಾಹಿನಿಯು ಬಿಲ್ಲವ ಸಮಾಜದ ಕಣ್ಣುಗಳು, ವಜ್ರದಂತೆ ಬಲಿಷ್ಠವಾಗಿರುವ ಬಿಲ್ಲವ ಸಮಾಜವನ್ನು ಪರಸ್ಪರ ಪ್ರೀತಿ, ವಿಶ್ವಾಸ, ಸಂಪರ್ಕದ ಮೂಲಕ ಹೊಳಪು ನೀಡುವ ಕಾರ್ಯವನ್ನು ಯುವವಾಹಿನಿ ಮಾಡುತ್ತಿದೆ ಎಂದು
ರಾಜ್ಯಪ್ರಶಸ್ತಿ ಪುರಸ್ಕ್ರತ ಚಲನಚಿತ್ರ ನಟ,ನಿರ್ಮಾಪಕ ರಾಜಶೇಖರ ಕೋಟ್ಯಾನ್ ತಿಳಿಸಿದರು.
ಅವರು ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಯುವಕ್ರೀಡಾ ಸಂಗಮ 2017 ಇದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಿವೃತ್ತ SP ಬಿಲ್ಲವ ಸಮಾಜದ ಮುಂದಾಳು ಶ್ರೀ ಪೀತಾಂಬರ ಹೇರಾಜೆ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಲ್ ಇದರ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು.
ಉಡುಪಿ ಯುವವಾಹಿನಿಗೆ ಅಭಿನಂದನೆ
ಯಶಸ್ವೀ, ಶಿಸ್ತುಬದ್ದ ಕ್ರೀಡಾಕೂಟ ಸಂಘಟಿಸಿದ ಉಡುಪಿ ಯುವವಾಹಿನಿ ಅತ್ಯಂತ ಕ್ರಿಯಾಶೀಲ ಘಟಕವಾಗಿ ಹೊರಹೊಮ್ಮಿದೆ. ವರ್ಷಂಪ್ರತಿ ಬಡಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆ, ಶೈಕ್ಷಣಿಕ ದತ್ತು ಸ್ವೀಕಾರ, ಹೀಗೆ ಹತ್ತು ಹಲವು ಸಮಾಜಿಕ ಶೈಕ್ಷಣಿಕ, ಕಾರ್ಯಕ್ರಗಳ
ಮೂಲಕ ಉಡುಪಿ ಯುವವಾಹಿನಿಯ ಸರ್ವ ಸದಸ್ಯರು ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಅಭಿಪ್ರಾಯ ಪಟ್ಟರು
ಸನ್ಮಾನ
ಗೌರವ ಡಾಕ್ಟರೇಟ್ ಪದವಿ ಸಾಧನೆಗಾಗಿ ಡಾ. ರಾಜಶೇಖರ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮನೀಷ್ ಪೂಜಾರಿ, ಅನಿಲ್ ಪೂಜಾರಿ,ಚರಿತ್ ಪೂಜಾರಿ,ಪ್ರತೀಕ್ಷಾ,ಹಾಗೂ ಪ್ರಸಿದ್ಧ್ ಕೋಟ್ಯಾನ್ ಇವರುಗಳನ್ನು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಶ್ರೀ ನಿತ್ಯಾನಂದ ಡಿ ಕೋಟ್ಯಾನ್, ಉಪ್ಪೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶ್ರೀಸಂತೋಷ್ ಕೋಟ್ಯಾನ್, ಮುಂಬೈ ಯುವ ಉದ್ಯಮಿ ನಿಲೇಶ್ ಪೂಜಾರಿ ಫಲಿಮಾರು,ನಾರಾಯಣಗುರು ಅರ್ಬನ್ ಕೊ -ಅಪ್,ಬ್ಯಾಂಕ್ ಅಧ್ಯಕ್ಷ ಹರಿಶ್ಚಂದ್ರ ಅಮೀನ್,ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ರಾಜೀವ್ ಕೋಟ್ಯಾನ್ ,ಬಿಲ್ಲವ ಏಕೀಕರಣದ ರವಿ ಪೂಜಾರಿ ಚಿಲಿಂಬಿ,ದೊಡ್ಡಣಗುಡ್ಡೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಂಜನ್ ಅಭ್ಯುದಯ ಬ್ಯಾಂಕ್ ಅದ್ಯಕ್ಷ ಸತೀಶ್ ಪೂಜಾರಿ, ಕತಾರ್ ಬಿಲ್ಲವ ಸಂಘದ ಅಧ್ಯಕ್ಷ ದಿವಾಕರ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ, ಉಡುಪಿ ಯುವವಾಹಿನಿ ಅಧ್ಯಕ್ಷ ರಮೇಶ್ ಕುಮಾರ್, ಯುವಕ್ರೀಡಾ ಸಂಗಮದ ಸಂಚಾಲಕ ಅಶೋಕ್ ಕೋಟ್ಯಾನ್ ಉಡುಪಿ ಯುವವಾಹಿನಿ ಕಾರ್ಯದರ್ಶಿ ಭಾರತಿ ಭಾಸ್ಕರ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಉದ್ಯಾವರ ಸ್ವಾಗತಿಸಿದರು, ಯುವವಾಹಿನಿ ಕೇಂದ್ರ ಸಮಿತಿಯ ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕ ರಘುನಾಥ ಮಾಬಿಯಾನ್ ಧನ್ಯವಾದ ನೀಡಿದರು.
ಉಡುಪಿ ಯುವವಾಹಿನಿ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಬೈಲೂರು ಕಾರ್ಯಕ್ರಮ ನಿರೂಪಿಸಿದರು