ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ತೀರಾ ಬಡ ಕುಟುಂಬ ಪೋಂಕ್ರ ಪೂಜಾರಿ ಇವರಿಗೆ ಸುಮಾರು ರೂಪಾಯಿ ಮೂರುವರೆ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಯಿತು.
ಹೆಜಮಾಡಿ ಯುವವಾಹಿನಿಯ ಯಶಸ್ವೀ ಸಮಾಜಮುಖಿ ಕಾರ್ಯ ಮನೆ ನಿರ್ಮಾಣ ಯೋಜನೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಕೇವಲ ಮೂರು ತಿಂಗಳ ಅವಧಿಯಲ್ಲಿ ದಾನಿಗಳ ಸಹಾಯ ಹಾಗೂ ಹೆಜಮಾಡಿ ಯುವವಾಹಿನಿ ಸದಸ್ಯರ ಶ್ರಮದ ಫಲವಾಗಿ ನಮ್ಮ ಮನೆ ನಿರ್ಮಾಣ ಯೋಜನೆ ಯಶಸ್ವಿಯಾಗಿದೆ ಎಂದು ಹೆಜಮಾಡಿ ಯುವವಾಹಿನಿ ಅಧ್ಯಕ್ಷರಾದ ಲೋಕೇಶ್ ಅಮೀನ್ ತಿಳಿಸಿದರು.
ದಿನಾಂಕ 05.05.2017ರಂದು ಸರಳ ಹಾಗೂ ಶಾಸ್ರೋಕ್ತವಾಗಿ ಗೃಹಪ್ರವೇಶ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಮರೋಳಿ, ಮಾಜಿ ಅಧ್ಯಕ್ಷರಾದ ಶ್ರೀ ತಾರಾನಾಥ ಎಚ್.ಬಿ,ಭಾರತ್ ಬ್ಯಾಂಕ್ ನಿರ್ದೇಶಕರಾದ ಶ್ರೀ ವಾಸುದೇವ ಅರ್.ಕೋಟ್ಟಾನ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಜಿನರಾಜ್ ಬಂಗೇರ, ಕಾರ್ಯದರ್ಶಿ ಶ್ರೀ ಪ್ರಭೋದ್ ಚಂದ್ರ, ಹೆಜಮಾಡಿ ಯುವವಾಹಿನಿ ಕಾರ್ಯದರ್ಶಿ ಸುನೀತಾ ಕರ್ಕೇರಾ ಹಾಗೂ ಹೆಜಮಾಡಿ ಯುವವಾಹಿನಿ ಸದಸ್ಯರು ,ಹೆಜಮಾಡಿ ಬಿಲ್ಲವ ಸಂಘದ ಸದಸ್ಯರು ಹಾಗೂ ಹೆಜಮಾಡಿ ಗ್ರಾಮಸ್ಥರು ಉಪಸ್ಥಿತರಿದ್ದು ಶುಭ ಹಾರೈಕೆ ಮಾಡಿದರು
Well done ,one of tgr best work by hejamadi chapter
Good work. Hejamadi chapter.
Good Job.