Yuvavahini

ಇತರೆ

ನಮ್ಮ ಮಾತುಗಳು ಕೇಳುಗರ ಹೃದಯವನ್ನು ತಲುಪಬೇಕು : ಅಭಿಜಿತ್ ಕರ್ಕೇರ

ಬಂಟ್ವಾಳ : ದಿನನಿತ್ಯದ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ವ್ಯವಹರಿಸುವಾಗ ಇತರರನ್ನು ಪ್ರೇರೇಪಿಸುವ ಮನವೊಪ್ಪಿಸುವ ಅಥವಾ ಒತ್ತಾಯಿಸುವ ಸಂದರ್ಭಗಳು ಸಹಜ, ಇಂತಹ ಸಂದರ್ಭಗಳಲ್ಲಿ ಸಂವಹನ ಅತ್ಯಂತ ಪರಿಣಾಮಕಾರಿಯಾಗಿದ್ದು , ಉದ್ದೇಶವನ್ನು ಸಾಧಿಸುವಂತೆ ಇರಬೇಕು. ಆದರೆ ಈ ಕೌಶಲ ಎಲ್ಲರಲ್ಲೂ ಒಂದೇ ಮಟ್ಟದಲ್ಲಿ ಇರುವುದಿಲ್ಲ ಉದಾಹರಣೆಗೆ ಜೀವನದಲ್ಲಿ ಯಾವ ಕೊರತೆ ಇಲ್ಲದಿದ್ದರೂ ಚೈತನ್ಯ ರಹಿತವಾದ ನಿರಾಶವಾದಿಗಳನ್ನು ನೋಡುತ್ತಿರುತ್ತೇವೆ. ಕೆಲವರು ಮಾತನಾಡುವ ಶೈಲಿಯಿಂದ ನಕಾರಾತ್ಮಕ ಅನಿಸಿಕೆ, ಅನುಭವಗಳು ಆಗುತ್ತವೆ. ನಾವು ಅಭಿಪ್ರಾಯವನ್ನು, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಇತರರಿಗೆ ಬೇಸರ ಕಿರಿಕಿರಿ […]

Read More

ಕುಟುಂಬ ಭಾಂದವ್ಯ ಸಡಿಲ : ಡಾ.ಮಧುಮಾಲ ಖೇದ

ಮೂಡಬಿದಿರೆ : ತುಳುನಾಡಿನ ಕೌಟುಂಬಿಕ ಭಾಂದವ್ಯ ಅತ್ಯಂತ ಶಕ್ತಿಯುತ ಆದರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಕೌಟುಂಬಿಕ ಭಾಂದವ್ಯವಾಗಲಿ, ನೆರೆ ಮನೆಯ ಸಂಬಂಧಗಳಲ್ಲಿ ದಿನೇ ದಿನೇ ಕುಸಿಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಯಂತ್ರ ಮತ್ತು ವಾಣಿಜ್ಯ ಪರತೆ ಮನುಷ್ಯನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ, ಇದು ಅನೇಕ ಅತೃಪ್ತಿ ಮತ್ತು ಅತಂಕಕ್ಕೆ ಕಾರಣವಾಗುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ತಿಳಿಸಿದರು. ಅವರು ಸಿದ್ದಕಟ್ಟೆ ಸಮೀಪದ ಪಡು ಪಾಲ್ಜಲ್ ಗುತ್ತು […]

Read More

ಪಾಠ ಹೇಳುವ ಆಟಗಳ ನಡುವೆ ಪ್ರಥಮ ಚಿಕಿತ್ಸೆಯ ಪ್ರಾಯೋಗಿಕ ಮಾಹಿತಿ : ನಮ್ಮ ನಡೆ ಕಂಬಳಕಟ್ಟು ಕಡೆ

ಯಡ್ತಾಡಿ : ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಒಂದಿಷ್ಟು ಮನರಂಜನೆಗೆ, ಒಂದಿಷ್ಟು ಸಂಘಟನೆಗೆ ಎಂಬ ಉದ್ದೇಶವನ್ನು ಮುಂದಿರಿಸಿಕೊಂಡು ಯುವವಾಹಿನಿ (ರಿ) ಯಡ್ತಾಡಿ ಘಟಕ ಆರಂಭಿಸಿದ ನಮ್ಮ ನಡೆಯ ಎರಡನೇ ಕಾರ್ಯಕ್ರಮ ನಮ್ಮ ನಡೆ, ಕಂಬಳಕಟ್ಟು ಕಡೆ, ಅಧ್ಯಕ್ಷರಾದ ಸತೀಶ ಪೂಜಾರಿಯವರ ಮನೆಯಲ್ಲಿ ದಿನಾಂಕ 21-10-2018 ರಂದು ನಡೆಸಲಾಯಿತು. ಸ್ವಯಂ ಪ್ರೇರಣೆಯಿಂದ ಸದಸ್ಯರು ಭಾಗವಹಿಸದೇ ಇದ್ದರೆ ಯಾವುದೇ ಸಂಘಟನೆಯನ್ನು ಮುನ್ನಡೆಸುವುದು ಕಷ್ಟ ಸಾಧ್ಯ. ಅದೂ ಅಲ್ಲದೆ ಅದು ವ್ಯರ್ಥ ಕೂಡ. ಈ ನಿಟ್ಟಿನಲ್ಲಿ ಹೊಸ ಚಿಂತನೆಯೊಂದಿಗೆ ಯುವವಾಹಿನಿ ಪ್ರಾರಂಭಿಸಿದ ಕಾರ್ಯಕ್ರಮ […]

Read More

ಮಂಗಳೂರು ದಸರಾ ಪ್ರಯುಕ್ತ ಯಕ್ಷಗಾನ ನಾಟ್ಯ ವೈಭವ

ಯುವವಾಹಿನಿ ಪುತ್ತೂರು ಘಟಕ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ದಸರಾ ಪ್ರಯುಕ್ತ ದಿನಾಂಕ 15.10.2018 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರವಿಚಂದ್ರ ಕನ್ನಡಿಕಟ್ಟೆ ಇವರ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಿತು. ಕ್ಷೇತ್ರಾಡಳಿತದ ಕೋಶಾಧಿಕಾರಿ ಪದ್ಮರಾಜ್, ದೇವೆಂದ್ರ ಪೂಜಾರಿ ಶ್ರೀ ಕ್ಷೇತ್ರ ಕಂಕನಾಡಿ ಗರಡಿಯ ಚಿತ್ತರಂಜನ್, ಯುವವಾಹಿನಿ ( ರಿ ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್, ಮಾಜಿ ಅಧ್ಯಕ್ಷ ಪರಮೇಶ್ವರ ಪೂಜಾರಿ ಇವರುಗಳು ಪ್ರಧಾನ ಭಾಗವತರಾದ […]

Read More

ಮಹಿಳೆ ಮತ್ತು ಆರೋಗ್ಯ ಮಾಹಿತಿ ಕಾರ್ಯಾಗಾರ

ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 07/10/2018 ರವಿವಾರ ಸoಜೆ 4 ಗoಟೆಗೆ ಮಹಿಳೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸಭಾಭವನದಲ್ಲಿ ಘಟಕದ ಮಹಿಳಾ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಯಿತು . ಸಂಪನ್ಮೂಲ ವ್ಯಕ್ತಿಯಾಗಿ ಸ್ತ್ರೀರೋಗ ತಜ್ಞೆ ಹಾಗೂ ಪ್ರಸೂತಿ ಶಾಸ್ತ್ರಜ್ಞರಾದ ಡಾ.ಲತಾ ಶರ್ಮಾ ಇವರು ಆಗಮಿಸಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಘಟಕದ ಸಲಹೆಗಾರರಾದ ನೇಮಿರಾಜ್, ಕೂಳೂರು ಬ್ರಹ್ಮಶ್ರೀ ನಾರಾಯಣಗುರು […]

Read More

ಯುವವಾಹಿನಿ (ರಿ) ಬೆಂಗಳೂರು ಘಟಕದಿಂದ ಒಂದು ದಿನದ ಪ್ರವಾಸ

ಬೆಂಗಳೂರು : ಯುವವಾಹಿನಿ (ರಿ) ಬೆಂಗಳೂರು ಘಟಕದಿಂದ ದಿನಾಂಕ 07-10-1018 ರಂದು ಒಂದು ದಿನದ ಪ್ರವಾಸ ಅನ್ವಯ ಕೋಟಿಲಿಂಗೇಶ್ವರ ಮತ್ತು ಅಂತರಗಂಗೆಗೆ ಹಮ್ಮಿಕೊಳ್ಳಲಾಗಿತ್ತು, ಒಟ್ಟು 43 ಬೆಂಗಳೂರಿನ ಯುವವಾಹಿನಿ ಬಂಧುಗಳು ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಪ್ರವಾಸ ಬೆಳಿಗ್ಗೆ 7.15 ಗೆ ಹೊರಟು ಹೊಸಕೋಟೆಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿ 12 ಗಂಟೆಗೆ ಮದ್ಯಾಹ್ನ ಕೋಟಿಲಿಂಗೇಶ್ವರ ಗೆ ತಲುಪಿ 2 ಗಂಟೆ ಹೊತ್ತಿಗೆ ಊಟ ಮುಗಿಸಿ ಅಂತರಗಂಗೆ ಗೆ ಪಯಣ ನಡೆಸಿ 3.30 ಗಂಟೆಗೆ ತಲುಪಿದ್ದೇವೆ, ಅಲ್ಲಿಯ ದರ್ಶನ ಮುಗಿಸಿ […]

Read More

ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ಭಜನಾ ಕಾರ್ಯಕ್ರಮ

ಶಕ್ತಿನಗರ : ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ದಿನಾಂಕ 30/09/2018 ರಂದು ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ಪ್ರಯುಕ್ತ ಭಜನಾ ಕಾರ್ಯಕ್ರಮ ಜರುಗಿತು.  ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕಿಶೋರ್ ಕೆ ಬಿಜೈ ಇವರಿಂದ ಭಜನಾ ಕಾರ್ಯಕ್ರಮವು ಉದ್ಘಾಟನೆಗೊಂಡು ನಂತರ ಘಟಕದ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು. ಸತ್ಯಜಿತ್ ಸುರತ್ಕಲ್ (ಅಧ್ಯಕ್ಷರು,ಯುವಮೋರ್ಚ ಬಿಜೆಪಿ) , ಸೂರಜ್ ಕುಮಾರ್ ಕಲ್ಯ(ಟ್ರಸ್ಟಿ ವಿಕಾಸ್ ಪಿಯು ಕಾಲೇಜ್), ಯುವವಾಹಿನಿ(ರಿ.)ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ ರಾಜೀವ ಪೂಜಾರಿ, ಕೇಂದ್ರ ಸಮಿತಿಯ ಮಾಜಿ […]

Read More

ಯುವದರ್ಪಣ : ಮಾಹಿತಿ ಕಾರ್ಯಾಗಾರ

ಉಪ್ಪಿನಂಗಡಿ : ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ‌ ಘಟಕದ ಸದಸ್ಯರಿಗೆ ಯುವದರ್ಪಣ ಮಾಹಿತಿ ಕಾರ್ಯಾಗಾರವು ರೋಟರಿ ಭವನ ರಾಮನಗರ ಉಪ್ಪಿನಂಗಡಿ ಇಲ್ಲಿ ದಿನಾಂಕ :30/09/18 ರಂದು ಆದಿತ್ಯವಾರ ನಡೆಯಿತು.ಯುವದರ್ಪಣ ಕಾರ್ಯಕ್ರಮದ ಮೂಲಕ ಹೊಸ ಮುಖಗಳನ್ನು ಪರಿಚಯಿಸುವ ಈ ಪ್ರಯತ್ನ ಶ್ಲಾಘನೀಯ ಎಂದು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ತಿಳಿಸಿದರು. ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಅದ್ಯಕ್ಷ ಅಜಿತ್ ಕುಮಾರ್ ಪಾಲೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ […]

Read More

ಉಚಿತ ಹೃದಯರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ

ಮಂಗಳೂರು : ವಿಶ್ವ ಹೃದ್ರೋಗ ದಿನಾಚರಣೆಯ ಅಂಗವಾಗಿ ಒಮೇಗಾ ಅಸ್ಪತ್ರೆ ಮಂಗಳೂರು, ಯುವವಾಹಿನಿ (ರಿ) ಮಂಗಳೂರು ಘಟಕ, ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ, ಅಶೋಕನಗರ ಲಯನ್ಸ್ ಕ್ಲಬ್, ಲಯನ್ಸ್ ಕ್ಲಬ್ ಕುಡ್ಲ. ಇವರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಹೃದ್ರೋಗ ತಜ್ಞರಾದ ಡಾ. ಕೆ.ಮುಕುಂದ್ ಇವರ ನೇತೃತ್ವದಲ್ಲಿ “ಉಚಿತ ಹೃದಯರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ” ದಿನಾಂಕ 29.09.2018 ರಂದು ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ಇಲ್ಲಿ ನಡೆಯಿತು. ಶಿಬಿರಾರ್ಥಿಗಳ ವೈದ್ಯಕೀಯ ತಪಾಸಣೆಯ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು […]

Read More

ಬಿಲ್ಲವ ಸಮಾಜ ಸಮೃದ್ದವಾದ ಇತಿಹಾಸ ಹೊಂದಿದೆ : ಶೈಲು ಬಿರ್ವ ಅಗತ್ತಾಡಿ

ಬೆಳುವಾಯಿ : ಬಿಲ್ಲವ ಸಮಾಜದ ಶ್ರೀಮಂತ ಇತಿಹಾಸದಲ್ಲಿ ಅದೆಷ್ಟೋ ಮಹಿಳೆಯರು ಮತ್ತು ಮಹನೀಯರು ದಳವಾಯಿಗಳಾಗಿ ಯೋಧರಾಗಿ ನಾಡು ಕಟ್ಟಿದವರು ಇದ್ದಾರೆ ಆದರೆ ಇತಿಹಾಸಕಾರರು ಅವರ ಬದುಕಿನ ಮೇಲೆ ಬೆಳಕು ಚೆಲ್ಲದ್ದು ವಿಷಾದನೀಯ. ಬಿಲ್ಲವರಲ್ಲಿ ಏನು ಇದೆ ಎಂದು ಕೇಳುವುದಕ್ಕಿಂತ ಏನು ಇಲ್ಲ ಎಂದು ಕೇಳುವುದೇ ಉತ್ತಮ. ಎಲ್ಲವು ಇದ್ದಂತಹ ಸಮಾಜ ಎಂದರೆ ಅದು ಬಿಲ್ಲವ ಸಮಾಜ ಮಾತ್ರ. ನಾಯಕರಾಗಿ, ಬಿಲ್ವಿದ್ದೆ ಪ್ರವೀಣರಾಗಿ, ದೈವಗಳ ಅರ್ಚಕಾಗಿ, ವೈದ್ಯರಾಗಿ, ಕೃಷಿ ಮಾಡುವ ಪ್ರತಿಷ್ಟಿತ ಮನೆಗಳಾಗಿ, ಯೋಧರಾಗಿ, ಬೇಟಗಾರರಾಗಿ ಜನಾನುರಾಗಿಯಾಗಿದ್ದವರು ಇದೇ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!