ಯುವವಾಹಿನಿ ಪುತ್ತೂರು ಘಟಕ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ದಸರಾ ಪ್ರಯುಕ್ತ ದಿನಾಂಕ 15.10.2018 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರವಿಚಂದ್ರ ಕನ್ನಡಿಕಟ್ಟೆ ಇವರ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಿತು. ಕ್ಷೇತ್ರಾಡಳಿತದ ಕೋಶಾಧಿಕಾರಿ ಪದ್ಮರಾಜ್, ದೇವೆಂದ್ರ ಪೂಜಾರಿ ಶ್ರೀ ಕ್ಷೇತ್ರ ಕಂಕನಾಡಿ ಗರಡಿಯ ಚಿತ್ತರಂಜನ್, ಯುವವಾಹಿನಿ ( ರಿ ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್, ಮಾಜಿ ಅಧ್ಯಕ್ಷ ಪರಮೇಶ್ವರ ಪೂಜಾರಿ ಇವರುಗಳು ಪ್ರಧಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ. ಪಟ್ಲ ಸತೀಶ್ ಶೆಟ್ಟಿ , ಭವ್ಯ ಶ್ರೀ ಮಂಡೆಕೋಲು, ಚಂಡೆವಾದಕ ಪದ್ಯಾಣ ಚೈತನ್ಯ ಕ್ರಷ್ಣ ,
ಮದ್ದಲೆವಾದಕ ವಿನಯ ಆಚಾರ್ಯ, ಚಕ್ರತಾಳ ರಾಜೇಂದ್ರ ಕ್ರಷ್ಣ , ನಿರೂಪಕ ವಾದಿರಾಜ ಕಲ್ಲುರಾಯ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ನಂತರ ವಿಶೇಷ ಆಕರ್ಷಣೆಯಾಗಿ ನಾಟ್ಯ ವೈಭವ ಕಾರ್ಯಕ್ರಮ ನಡೆಯಿತು. ಪುಂಡು ವೇಷ ಕಲಾವಿದೆ ಸ್ವಾತಿ. ಎಂ. ಪೂಜಾರಿ ಪುತ್ತೂರು ಬೆಟ್ಟಂಪಾಡಿ. ಇವರ ನಾಟ್ಯ ಪ್ರೇಕ್ಷಕರ ಮನ ಸೂರೆಗೊಂಡಿತು. ಅಕ್ಷಯ್ ಮಾರ್ನಾಡ್, ರಕ್ಷಿತ್ ಶೆಟ್ಟಿ ಪಡ್ರೆ, ಚಂದ್ರಶೇಖರ್ ಧರ್ಮಸ್ಥಳ, ಲೋಕೇಶ್ ಮುಚ್ಚೂರು. ಇವರುಗಳು ಯಕ್ಷಗಾನದ ನೈಜ ನಾಟ್ಯವನ್ನು ಪ್ರದರ್ಶಿಸಿದರು. ಎಲ್ಲರಿಂದಲೂ ಪ್ರಶಂಸಿಲ್ಪಟ್ಟ ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಹರೀಶ ಶಾಂತಿ ಪುತ್ತೂರು ಹಾಗೂ ಕಲೆ ಮತ್ತು ಸಾಂಸ್ಕೃತಿಕ ನಿರ್ದೇಶಕ ಅವಿನಾಶ್ ಉಪಸ್ಥಿತರಿದ್ದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ದ ಸಂಘಟಕರು ಅಭಿನಂದಿಸಿದರು. ಅದೇ ದಿನ ಸಂಜೆ 7 ಗಂಟೆಗೆ ಯುವವಾಹಿನಿ ಪುತ್ತೂರು ಪ್ರಾಯೋಜಕತ್ವದಲ್ಲಿ ಶ್ರೀ ಭಟ್ಟಿ ವಿನಾಯಕ ಭಜನ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನಡೆಸಿಕೊಡಲಾಯಿತು.