24-07-2016, 5:56 AM
ಯುವವಾಹಿನಿ(ರಿ) ಹಳೆಯಂಗಡಿ ವತಿಯಿಂದ ದಿನಾಂಕ 24-7-2016 ರಂದು ಆಟಿದ ಆಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕೋಟಿ ಚೆನ್ನಯರು ಆರಾಧಿಸಿದ ಕೆಮ್ಮಲೆಜೆಯ ನಾಗಬ್ರಹ್ಮ ಗುಡಿಯ ಆಕರ್ಷಕ ರಂಗ ವಿನ್ಯಾಸದ ವೇದಿಯಲ್ಲಿ ಹಳೆಯಂಗಡಿ ಯುವವಾಹಿನಿಯ ಅವಳಿ ಸದಸ್ಯರ ಕೋಟಿ-ಚೆನ್ನಯ ಕಿರು ರೂಪಕದೊಂದಿಗೆ ಕಾರ್ಯಕ್ರಮ ಆರಂಭ. ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ ಹಾಗೂ ತುಳು ಚಿತ್ರನಟ, ರಂಗಭೂಮಿ ಕಲಾವಿದ ಶ್ರೀ ಅರವಿಂದ ಬೋಳಾರ್ ಇವರು ನಾಗಬ್ರಹ್ಮ ಗುಡಿಯ ಜೋಡು ನಂದಾ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಠವಾಗಿ […]
Read More
18-07-2016, 8:18 AM
ಘಟಕದ ವತಿಯಿಂದ ತಾ. 16-7-2016 ರಂದು ಕೋಡಿಕಲ್ ದ.ಕ. ಜಿಲ್ಲಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ, ಸಸಿ ವಿತರಣೆ ಹಾಗೂ ಶಾಲೆಯ 30 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿರುತ್ತದೆ. ಕಾರ್ಯಕ್ರಮವನ್ನು ಕೋಡಿಕಲ್ ಬಿಲ್ಲವ ಸಂಘ ಇದರ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ ದೇವೇಂದ್ರ ಕೋಟ್ಯಾನ್‌ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಯ ಜಯಪ್ಪ ಅದ್ಯಪಾಡಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೀಣಾ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾ ರಾಕೇಶ್, ಘಟಕದ ಸಲಹೆಗಾರರ ಸಾಧು ಪೂಜಾರಿ ಹಾಗೂ […]
Read More
10-07-2016, 7:36 AM
ಯುವವಾಹಿನಿ (ರಿ) ಅಡ್ವೆ ಘಟಕದ ಪದಗ್ರಹಣ ಕಾರ್ಯಕ್ರಮವು ದಿನಾಂಕ 10-7-2016 ರಂದು ಅಡ್ವೆ ಆನಂದಿ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ವಹಿಸಿದ್ದರು. ಡಾ. ಎನ್.ಟಿ. ಅಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 2016-17 ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್, ಕಾರ್ಯದರ್ಶಿಯಾಗಿ ಶಶಿಧರ್ ಟಿ. ಪೂಜಾರಿ ಆಯ್ಕೆಗೊಂಡರು. ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಕೇಂದ್ರ ಸಮಿತಿ ಉಪಾಧ್ಯಕ್ಷ ಪದ್ಮನಾಭ ಮರೋಳಿ ಭೋದಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. ಅಲ್ಲದೇ ಅಂದು ಪರಿಸರದ ಸುತ್ತಮುತ್ತಲಿನ ಶಾಲಾ ಕಾಲೇಜುಗಳಲ್ಲಿ […]
Read More
21-06-2016, 11:43 AM
ಪೊಲೀಸ್ ಇಲಾಖೆಯಲ್ಲಿನ ತಮ್ಮ ವಿಶೇಷ ಸೇವೆಗಾಗಿ 2015-16 ನೇ ಸಾಲಿನ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪ್ರಾಮಾಣಿಕ, ನಿಷ್ಠಾವಂತ ದಕ್ಷ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್ ಇವರನ್ನು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ಕೋಟ್ಯಾನ್, ಯುವವಾಹಿನಿ ಸಲಹೆಗಾರರಾದ ಬಿ. ತಮ್ಮಯ, ಅಣ್ಣು ಪೂಜಾರಿ, ಅಧ್ಯಕ್ಷರಾದ ರಾಜೇಶ್ ಸುವರ್ಣ, ಕೋಶಾಧಿಕಾರಿ […]
Read More
09-08-2015, 7:35 AM
ಯುವವಾಹಿನಿ ಕೇಂದ್ರ ಸಮಿತಿಯ 2015-16 ನೇ ಸಾಲಿನ ಪದಗ್ರಹಣ ಸಮಾರಂಭವು ಬಂಟ್ವಾಳ ಮೆಲ್ಕಾರಿನ ಬಿರ್ವ ಆಡಿಟೋರಿಯಂ ಇಲ್ಲಿ 09.08.2015 ರಂದು ಜರಗಿತು. ಚುನಾವಣಾಧಿಕಾರಿ ರವಿಚಂದ್ರ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು. ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಉಡುಪಿ ನೇತೃತ್ವದ ತಂಡವು ಪ್ರಮಾಣ ವಚನ ಸ್ವೀಕರಿಸಿತು.
Read More
09-08-2015, 7:30 AM
ಆಗಸ್ಟ್ 9, 2015 ರಂದು ಮೆಲ್ಕಾರ್ ಬಿರ್ವ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 28ನೇ ವಾರ್ಷಿಕ ಸಮಾವೇಶದಲ್ಲಿ ಬಿಲ್ಲವಾನ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ಸಂಸ್ಥೆಗೆ ಸಾಮಾಜಿಕ ಕ್ಷೇತ್ರದ ಸಮಗ್ರ ಸಾಧನೆಯನ್ನು ಗುರುತಿಸಿ ಯುವವಾಹಿನಿ ಸಾಧನಾ ಶ್ರೇಷ್ಟ ಪ್ರಶಸ್ತಿ – 2015 ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ. ಸೇಸಪ್ಪ ಕೋಟ್ಯಾನ್, ಮುಂಬಯಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷರಾದ ನಿತ್ಯಾನಂದ ಡಿ. ಕೊಟ್ಯಾನ್, ದ.ಕ.ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾದ […]
Read More
09-08-2015, 7:24 AM
ಕೈ ಒಂದು ಆದರೂ ಕೈ ಬೆರಳುಗಳು ಒಮದೇ ರಿತಿ ಆಗಿರುವುದಿಲ್ಲ. ಆದರೆ ಮುಷ್ಠಿ ಬಿಗಿದರೆ ಎಲ್ಲಾ ಬೆರಳು ಒಂದೇ ಆಗಿರುತ್ತದೆ. ಅದೇ ರೀತಿ ನಮ್ಮಲ್ಲಿ ಸಂಘಟನೆಗಳು ಹತ್ತಾರು ಇದ್ದರೂ ಒಗ್ಗಟ್ಟಿನ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಇರಬೇಕು. ಯುವವಾಹಿನಿ ಸಮಾಜದಲ್ಲಿ ಶಿಸ್ತನ್ನು ಕಲಿಸುತ್ತದೆ. ಶಿಸ್ತು ಪ್ರತಿಯೊಬ್ಬರ ಮನೆಯಲ್ಲೂ ನೆಲೆಗೊಳ್ಳಬೇಕು ಎಂದು ಮುಂಬಾಯಿ ಬಿಲ್ಲವರ ಎಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೊಟ್ಯಾನ್ ತಿಳಿಸಿದರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ […]
Read More
21-06-2015, 11:27 AM
ಬಂಟ್ವಾಳ: ಸಂಘಟನೆಯ ಬೆಳವಣಿಗೆಯಿಂದ ಸಾಮಾಜಿಕ ಜಾಗೃತಿ ಉಂಟಾಗುತ್ತದೆ. ನಿಸ್ವಾರ್ಥ ಮನೋಭಾವದ ಸಮಾಜ ಸೇವಕರು ಸಂಘಟಿತರಾದಾಗ ಸಾಮಾಜಿಕ, ಧಾರ್ಮಿಕ, ರಾಜಕೀಯ ಮಾತ್ರವಲ್ಲ ಆಧ್ಯಾತ್ಮಿಕ ಭಾವನೆಗಳು ಜಾಗೃತಗೊಳ್ಳುತ್ತದೆ. ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಿ.ಸಿ.ರೋಡಿನಲ್ಲಿ ಯುವವಾಹಿನಿಯ ಕಛೇರಿ ಯುವವಾಹಿನಿ ಭವನ ನಿರ್ಮಾಣವಾಗಿ ಸಂಘಟನೆಯು ಇನ್ನಷ್ಟು ಬಲಿಷ್ಠಗೊಂಡಿರುವುದು ಶ್ಲಾಘನೀಯ ಎಂದು ದ.ಕ.ಜಿಲ್ಲಾ ಮೂರ್ತೆದಾರರ ಮಹಾ ಮಂಡಲದ ಅಧ್ಯಕ್ಷರಾದ ಕೆ. ಸಂಜೀವ ಪೂಜಾರಿ ತಿಳಿಸಿದರು. ಅವರು ದಿನಾಂಕ 21-6-2015 ರಂದು ಬಿ.ಸಿ.ರೋಡಿನಲ್ಲಿ ನೂತನವಾಗಿ ನಿರ್ಮಾಣವಾದ ಯುವವಾಹಿನಿಯು ಬಂಟ್ವಾಳ ತಾಲೂಕು ಘಟಕದ ಕಛೇರಿ ಯುವವಾಹಿನಿ ಭವನದ ಉದ್ಘಾಟನಾ ಸಮಾರಂಭದಲ್ಲಿ […]
Read More
23-10-2014, 12:44 PM
ಬೆಳಕಿನ ಹಬ್ಬವು ಸಮಾಜ ಮುಖಿಯಾಗಿ ಅರಳುವ, ಬೆಳಗುವ ಪರಿಯಿಂದ ಭವ್ಯವಾಗಿ ಅನಾವರಣಗೊಳ್ಳುತ್ತದೆ. ನಮಗೆ ಹಬ್ಬ ಅಥವಾ ಪರ್ಬ ಎಂದರೆ ದೀಪಾವಳಿ ಅದೇ ದೀಪಗಳ ಹಬ್ಬ ತುಳುವೆರೆ ತುಡಾರ ಪರ್ಬ. ಸ್ವತಃ ತಯಾರಿಸಿದ ಗೂಡುದೀಪಗಳು, ವೈವಿದ್ಯಮಯ ರಂಗೋಲಿಯ ಚಿತ್ತಾರ, ದೀಪಗಳ ಬೆಳಗಿನ ನೋಟದ ಮೂಲಕ ಹಬ್ಬವನ್ನು ಆಚರಿಸಿ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಯುವವಾಹಿನಿಯ ಶ್ರಮ ಶ್ಲಾಘನೀಯ ಎಂದು ತುಳು ಭಾಷಾ ವಿದ್ವಾಂಸರಾದ ಕೆ.ಕೆ. ಪೇಜಾವರ ತಿಳಿಸಿದರು. ಅವರು ಯುವವಾಹಿನಿ ಬಂಟ್ವಾಳ ಘಟಕ ಹಾಗೂ ಕರ್ನಾಟಕ ತುಳು ಸಾಹಿತ್ಯ […]
Read More
10-08-2014, 2:40 PM
ಸಮಾಜದ ಜನರ ಆರ್ಥಿಕ ವ್ಯವಸ್ಥೆಗೊಂದು ಭದ್ರ ಬುನಾದಿಯನ್ನು ಹಾಕಿಕೊಡಬೇಕು, ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸಮಾಜದ ಹೆಸರು ಅಗ್ರಸ್ಥಾನದಲ್ಲಿ ಬರಬೇಕು ಎನ್ನುವ ಉದಾತ್ತ ಚಿಂತನೆಯಿಂದ ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಪ್ರಾಯೋಜಿತವಾಗಿ ಹುಟ್ಟಿ ಕೊಂಡ ದಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಇಂದು ಮಲ್ಟಿ-ಸ್ಟೇಟ್ ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ. ಭವಿಷ್ಯದ ದೃಷ್ಠಿಯಲ್ಲಿ ಸ್ಪಷ್ಟವಾದ ಗುರಿ ಇದ್ದರೂ ಆ ಗುರಿಯನ್ನು ಮುಟ್ಟುವುದು ಸುಲಭದ ಕೆಲಸ ಅಲ್ಲ ಎನ್ನುವ ಸತ್ಯ ಸ್ಪಷ್ಟವಾಗಿ ತಿಳಿದಿದ್ದರೂ ಕೆಲವೇ ವರುಷದ ಸೀಮಿತ ಅವಧಿಯಲ್ಲಿ ಮುಂಬೈಯ ಗಡಿ […]
Read More