ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಅಭಿವ್ಯಕ್ತಿ – ಅಭಿಪ್ರಾಯಗಳ ನಿರೂಪಣೆ ಕಾರ್ಯಕ್ರಮವು ದಿನಾಂಕ 12.03.2017 ನೇ ಆದಿತ್ಯವಾರ ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದಲ್ಲಿ ಜರುಗಿತು.
ಅಭಿಪ್ರಾಯಗಳ ನಿರೂಪಣೆ ಮಾಡಿದ ಸಹನಾ ಕುಂದರ್ – ಈ ಜಗತ್ತು ಗಂಡು ಹೆಣ್ಣು ಇಬ್ಬರನ್ನೂ ಅವಲಂಬಿಸಿದೆ. ಟಿವಿ ಸೀರಿಯಲ್ಗಳ ಭ್ರಮೆಯಿಂದ ಮಹಿಳೆಯರು ಹೊರ ಬರಬೇಕು. ನಮ್ಮ ರಕ್ತದಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಗೆ ನಾವು ಬಲಿಯಾಗಿದ್ದೇವೆ. ಮಹಿಳೆಯರು ಸಂಸ್ಕೃತಿ ಸಂಸ್ಕಾರದ ಬಗ್ಗೆ ಜಾಗೃತರಾದಾಗ ಮಾತ್ರ ವಿಶ್ವ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು
ಸ್ರೀ ಸಂವೇದನೆಯನ್ನೇ ದೌರ್ಬಲ್ಯ ಎಂದು ಚಿತ್ರಿಸಿರುವುದು ಸರಿಯಲ್ಲ ಹೆಣ್ಣು ಮಕ್ಕಳಿಗೆ ಸಹಿಷ್ಣುತೆಯ ಪಾಠ ಅಗತ್ಯವಿಲ್ಲ ಅದು ಅವರಿಗೆ ಸಂವೇದನೆಯಲ್ಲಿಯೇ ಬಂದಿದೆ. ಹೆಣ್ಣು ಎಷ್ಟು ಕಷ್ಟ ಅನುಭವಿಸಿದರೂ ಆತ್ಮಹತ್ಯೆ ಮಾಡುಕೊಳ್ಳುವುದಿಲ್ಲ. ದಕ್ಷಿಣ ಭಾರತದ ಮದುವೆಯ ಬಗ್ಗೆ ಇರುವ ಸೌಂದರ್ಯದ ಕಲ್ಪನೆ ಅತಿಯಾಗಿದೆ. ಹೆಣ್ಣನ್ನು ಮನುಷ್ಯರಂತೆ ಕಾಣಬೇಕು ಎಂದು ಅಭಿಪ್ರಾಯಗಳ ನಿರೂಪಣೆ ಮಾಡಿದ ಕುಮಾರಿ ಮಹಾಲಕ್ಷ್ಮಿ ಉಪ್ಪಿನ ಕುದ್ರು ತಿಳಿಸಿದರು.
ಅಭಿವ್ಯಕ್ತಿ 2017 ಸಂವಾದ ನಿರ್ವಹಣೆ ಮಾಡಿದ ಹಿರಿಯ ಸಾಹಿತಿ ಬಿ.ಎಂ. ರೋಹಿಣಿ ಮಾತನಾಡಿ ಸಂಸ್ಕೃತಿ ಉಳಿವಿಗೆ ಕ್ರಮ ತೆಗೆದುಕೊಳ್ಳುವ ಹೊಣೆಯನ್ನು ಮಹಿಳೆಯರ ಮೇಲಷ್ಟೆ ಹೊರಿಸಬಾರದು ಇದರಲ್ಲಿ ಪುರುಷರೂ ಸಮಾನ ಹೊಣೆಗಾರಿಕೆ ವಹಿಸಿಕೊಂಡಾಗ ಮಾತ್ರ ಪರಿಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶ್ರೀಮತಿ ವಸಂತಿ ಎಸ್ ಸುವರ್ಣ ಸಮಾರಂಭ ಉದ್ಘಾಟಿಸಿದರು. ಯುವವಾಹಿನಿ ಕೇಂದ್ರ ಸಮಿತಿ ಅದ್ಯಕ್ಷ ಪದ್ಮನಾಭ ಮರೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷ ಯಶವಂತ ಪೂಜಾರಿ, ಕೂಳೂರು ಯುವವಾಹಿನಿ ಸಲಹೆಗಾರರಾದ ಪರಮೇಶ್ವರ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಗುಣವತಿ ರಮೇಶ್, ಕಾರ್ಯದರ್ಶಿ ದೀಕ್ಷಿತ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕರಾದ ಮಧುಶ್ರೀ ವಂದಿಸಿದರು.
ಕೂಳೂರು ಯುವವಾಹಿನಿಯ ಅದ್ಯಕ್ಷ ಸುಜಿತ್ ರಾಜ್ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕಿ ಸುಶೀಲಾ ಐ, ಸುಮತಿ, ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.