ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಶಿಕ್ಷಣ ಸುಧಾರಣಾ ಅಭಿಯಾನ ನಡೆಸುತ್ತಿರುವ ಹಾಗೂ ಬಂಟ್ವಾಳ ದಡ್ಡಲಕಾಡು ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅದ್ಯಕ್ಷ ಶ್ರೀ ಪ್ರಕಾಶ್ ಅಂಚನ್ ಅವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಗಣನೀಯ ಸಾಧನೆಯನ್ನು ಗುರುತಿಸಿ ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ದಿನಾಂಕ 03.03.2017 ನೇ ಶುಕ್ರವಾರದಂದು ಜರುಗಿದ ಹುಟ್ಟೂರ ಅಭಿನಂದನಾ ಸಮಾರಂಭದಲ್ಲಿ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್, ಮಾಣಿಲಾ ಶ್ರೀಗಳು, ಸಂಸದ ನಳೀನ್ ಕುಮಾರ್ ಕಟೀಲ್, ಪ್ರಗತಿಪರ ಕೃಷಿಕ ರಾಜೇಶ್ ಉಳಿಪ್ಪಾಡಿಗುತ್ತು, ಬಂಟ್ವಾಳ ಯುವವಾಹಿನಿ ಅದ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷ ಶಿವಾನಂದ ಎಂ., ಕೋಶಾಧಿಕಾರಿ ಸತೀಶ್ ಪೂಜಾರಿ ಬಾಯಿಲ, ಮಾಜಿ ಅದ್ಯಕ್ಷರಾದ ನಾಗೇಶ್ ಪೊನ್ನೋಡಿ, ರಾಜೇಶ್ ಸುವರ್ಣ, ಪದಾಧಿಕಾರಿಗಳಾದ ನಾಗೇಶ್ ಎಂ,ಹರೀಶ್ ಸಾಲ್ಯಾನ್ ಅಜಕಳ, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಹರೀಶ್ ಕೋಟ್ಯಾನ್ ಕುದನೆ, ಸುನೀಲ್ ಕಾಯರ್ ಮಾರ್, ವಿಜಿತ್ ಕೋಟ್ಯಾನ್, ಕಿರಣ್ ರಾಜ್ ಪೂಂಜರೆಕೋಡಿ, ಸುಧೀರ್ ಪೂಂಜರೆಕೋಡಿ, ರಾಜೇಶ್ ಪೂಂಜರೆಕೋಡಿ, ನಾರಾಯಣ ಪೂಜಾರಿ, ವಿಠಲ ದಡ್ಡಲಕಾಡು, ಚಂದ್ರಶೇಖರ ಪೂಜಾರಿ ಪೂಂಜರೆಕೋಡಿ, ಯಶೋಧರ ಕರೆಂಕಿ, ಪ್ರಸಾದ್ ಪೂಜಾರಿ ಬಾಯಿಲ, ಗಣೇಶ್ ಪೂಜಾರಿ, ಯತೀಶ್ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು
ಯುವವಾಹಿನಿ ಸದಸ್ಯ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು