ಮೂಲ್ಕಿ: ಯುವವಾಹಿನಿ ಸದಸ್ಯ ರೊಳಗೆ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬ ದೊಂದಿಗೆ ಬೆರೆಯಲು ದಿನಾಂಕ 19/08/2023 ರಿಂದ 09/03/2024 ರವರೆಗೆ ಮನೆ ಮನೆ ಭಜನೆ ಭಜನಾ ಸಂಕೀರ್ತನೆ ಜರಗಿತು.
ಒಟ್ಟು 24 ಸದಸ್ಯರುಗಳ ಮನೆಯಲ್ಲಿ ಭಜನಾ ಸಂಕೀರ್ತನೆ ನಡೆಸಿ ಸಮಾರೋಪವಾಗಿ ದಿನಾಂಕ 14/03/2024 ರಂದು ಮೂಲ್ಕಿ ಬಿಲ್ಲವ ಸಂಘದ ಗುರು ಮಂದಿರದಲ್ಲಿ ಭಜನೆ ಹಾಗೂ ವಿಶೇಷ ಗುರುಪೂಜೆ ನಡೆಯಿತು. ಅರ್ಚಕರಾದ ಕೃಷ್ಣ ಶಾಂತಿರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಅನ್ನಪ್ರಸಾದ ವಿತರಿಸಲಾಯ್ತು.
ಈ ಸಂದರ್ಭದಲ್ಲಿ ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಒಳ್ಳೆಯ ಉದ್ಧೇಶ, ಉದಾತ್ತ ದ್ಯೇಯ.
ಅಭಿನಂದನೆಗಳು