Yuvavahini

ಬಜಪೆ

ಗುರು ಸಂದೇಶವನ್ನು ಸಮಾಜಕ್ಕೆ ತಲುಪಿಸುವಲ್ಲಿ ಯುವವಾಹಿನಿಯ ಪಾತ್ರ ಶ್ಲಾಘನೀಯ : ಯಾದವ ಸುವರ್ಣ

ಬಜಪೆ, ಆಗಸ್ಟ್ 10: ಶ್ರೀ ನಾರಾಯಣ ಗುರುಗಳ ತತ್ವ, ಆದರ್ಶ ಹಾಗೂ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಯುವವಾಹಿನಿ (ರಿ.) ಕೈಗೊಂಡಿರುವ ಮನೆ ಮನೆ ಭಜನಾ ಸಂಕೀರ್ತನೆಯ ಕಾರ್ಯ ಶ್ಲಾಘನೀಯ ಎಂದು ಹಿರಿಯ ಭಜಕ ಯಾದವ ಸುವರ್ಣ ಹೇಳಿದರು. ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಆಯೋಜಿಸಲಾದ ಮನೆ ಮನೆ ಭಜನಾ ಸಂಕೀರ್ತನೆಯು ಆ.10ರಂದು ಸಂಜೆ 6.30ರಿಂದ 7.30ರವರೆಗೆ ಸುಂಕದಕಟ್ಟೆ, ಬಜಪೆಯ ನಾರಾಯಣ ಸುವರ್ಣ ಅವರ ‘ಪ್ರಕೃತಿ ನಿಲಯ’ದಲ್ಲಿ ಭಕ್ತಿ ಹಾಗೂ ಶ್ರದ್ಧೆಯಿಂದ ನಡೆಯಿತು. ಭಜನಾ ಸಂಕೀರ್ತನೆಯ ಬಳಿಕ […]

Read More

ನಶಿಸುತ್ತಿರುವ ಕೃಷಿ ಪದ್ಧತಿಗೆ ಸಸ್ಯೋತ್ಸವ ಹಾಗೂ ಹಲಸು ಆಹಾರ ಮೇಳದ ಮೂಲಕ ಉತ್ತೇಜನ: ಲೋಕೇಶ್ ಪೂಜಾರಿ

ಬಜಪೆ, ಆಗಸ್ಟ್ 7: ನಶಿಸುತ್ತಿರುವ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಉತ್ತೇಜನ ನೀಡುವುದರೊಂದಿಗೆ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆಯೋಜಿಸಿರುವ ಸಸ್ಯೋತ್ಸವ ಹಾಗೂ ಹಲಸು ಆಹಾರ ಮೇಳ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಹೇಳಿದರು. ಯುವವಾಹಿನಿ (ರಿ.) ಬಜಪೆ ಘಟಕ ಹಾಗೂ ರೋಟರಿ ಕ್ಲಬ್ ಬಜಪೆ ಸಹಯೋಗದಲ್ಲಿ ರೈತ ಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ ಬಜಪೆಯ ಬಿ. ಸಂಜೀವ ಶೆಟ್ಟಿ ಸಭಾಂಗಣದಲ್ಲಿ ಆಗಸ್ಟ್ 7ರಿಂದ 9ರವರೆಗೆ ನಡೆಯುವ ‘ಸಸ್ಯೋತ್ಸವ ಹಾಗೂ ಹಲಸು ಆಹಾರ […]

Read More

ವಿಶೇಷ ಭಜನಾ ಸಂಕೀರ್ತನೆ

ಬಜಪೆ, ಜುಲೈ 29: ಗುರು ಪೂರ್ಣಿಮೆಯ ಪವಿತ್ರ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ–ಕರಂಬಾರು ಇಲ್ಲಿ ಜುಲೈ 29ರಂದು ಸಂಜೆ 4.30ರಿಂದ 6.00 ಗಂಟೆಯವರೆಗೆ ಯುವವಾಹಿನಿ (ರಿ.) ಬಜಪೆ ಘಟಕದ ಸದಸ್ಯರಿಂದ ವಿಶೇಷ ಭಜನಾ ಸಂಕೀರ್ತನೆ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು. ಭಜನಾ ಸಂಕೀರ್ತನೆಯ ಮೂಲಕ ಶ್ರೀ ನಾರಾಯಣ ಗುರುಗಳ ತತ್ವ-ಆದರ್ಶಗಳನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಸ್ಮರಣೆಯಲ್ಲಿ ತೊಡಗಿದರು. ಭಜನಾ ಸಂಕೀರ್ತನೆಯ ಬಳಿಕ ಗುರುವರ್ಯರಿಗೆ ವಿಶೇಷ ಗುರುಪೂಜೆ […]

Read More

ಆಟಿ ಅನಿಷ್ಟವಲ್ಲ ಆತ್ಮಸ್ಟೈರ್ಯ ತುಂಬುವ ಕಾಲ -ಪ್ರೋ. ಭಾಸ್ಕರ್ ರೈ ಕುಕ್ಕುವಲ್ಲಿ

ಬಜಪೆ ಜುಲೈ 19 : ಯುವವಾಹಿನಿ(ರಿ.) ಬಜಪೆ ಘಟಕದ ವತಿಯಿಂದ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ -ಕರಂಬಾರು ಇವರ ಸಹಕಾರದಲ್ಲಿ “ಆಟಿದ ನೆಂಪು -2026” ಕಾರ್ಯಕ್ರಮವು ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನ ಬಜಪೆ ಇಲ್ಲಿ 19.07.2026 ರಂದು ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಊರಿಗೆ ಬಂದ ಮಾರಿ ರೋಗದ ಕಳೆ ರುಜಿನದ ಕೊಳೆಯ ಕಳೆಯುತ್ತಾ ಮನೆಯಂಗಳಕ್ಕೆ […]

Read More

ಪರಿಸರ ಸಂರಕ್ಷಣೆಯಿಂದ ಮನುಕುಲ ಹಾಗೂ ಪ್ರಾಣಿ-ಪಕ್ಷಿಗಳು ಆರೋಗ್ಯವಾಗಿ ಉಸಿರಾಡಲು ಸಾಧ್ಯ: ಸುಕುಮಾರ್ ಸಾಲ್ಯಾನ್

ಬಜಪೆ, ಜೂನ್ 21 : ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಜೂನ್ 21ರಂದು ಸ್ವಾಮಿಲಪದವಿನ “ದೇಜಮ್ಮ” ನಿವಾಸದಲ್ಲಿ ಆಯೋಜಿಸಲಾಯಿತು. ಯುವವಾಹಿನಿ ಬಜಪೆ ಘಟಕದ ಮಾರ್ಗದರ್ಶಕರಾಗಿರುವ ಹಿರಿಯ ಸಮಾಜಸೇವಕ ಹಾಗೂ ಪರಿಸರ ಪ್ರೇಮಿಯಾದ ಸುಕುಮಾರ್ ಸಾಲ್ಯಾನ್ ಅವರ ನಿವಾಸದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುಕುಮಾರ್ ಸಾಲ್ಯಾನ್ ಅವರು, […]

Read More

ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಬಜಪೆ, ಜೂನ್ 21 : ಯುವವಾಹಿನಿ (ರಿ.) ಬಜಪೆ ಘಟಕ ಹಾಗೂ ಲೈಟ್ ಹೌಸ್ ರಾಜಯೋಗ ಮೆಡಿಟೇಶನ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಜೂನ್ 21ರಂದು ದುರ್ಗಾ ಬಜಪೆ,ರೆಸಿಡೆನ್ಸಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಯುವವಾಹಿನಿ (ರಿ.) ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಗ ಸಮಿತಿಯ ಸಂಚಾಲಕಿ ರೇವತಿ ಸನಿಲ್ ಅವರು, ಇಂದಿನ ಒತ್ತಡದ ಜೀವನಶೈಲಿಯಿಂದ ದೂರ […]

Read More

ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಜೂನ್ ತಿಂಗಳ ಮನೆ-ಮನೆ ಭಜನಾ ಸಂಕೀರ್ತನೆ

ಬಜಪೆ : ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಜೂನ್ ತಿಂಗಳ ಮನೆ-ಮನೆ ಭಜನಾ ಸಂಕೀರ್ತನೆಯು ದಿನಾಂಕ 08-06-2026 ರಂದು ಸಂಜೆ 6.30 ರಿಂದ 7.30 ಗಂಟೆಯವರೆಗೆ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಘಟಕದ ಸದಸ್ಯರಾದ ರೂಪಾ ಸತೀಶ್ ಹಾಗೂ ಕುಮಾರಿ ಜೀವಿತ ಅವರ ನಿವಾಸ “ಶ್ರೀ ವೈಭವ ಲಕ್ಷ್ಮೀ”, ಅಂಬಿಕಾ ನಗರ, ಸುಂಕದಕಟ್ಟೆ, ಬಜಪೆ ಇಲ್ಲಿ ಭಜನಾ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನಡೆಯಿತು. ಈ ಭಜನಾ ಸೇವೆಯಲ್ಲಿ ಘಟಕದ ಪ್ರಥಮ ಉಪಾಧ್ಯಕ್ಷರಾದ ಪೂಜಾ ಕಿರಣ್, ದ್ವಿತೀಯ ಉಪಾಧ್ಯಕ್ಷರಾದ ಶರ್ಮಿಳಾ ಚಂದ್ರಶೇಖರ್, […]

Read More

‘ಮನೆ ಮನೆ ಭಜನೆ’

ಬಜಪೆ: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ‘ಮನೆ ಮನೆ ಭಜನೆ’ ಸರಣಿಯ ಅಂಗವಾಗಿ ಘಟಕದ ಸಕ್ರಿಯ ಸದಸ್ಯರಾದ ರಾಘವೇಂದ್ರ ಪೂಜಾರಿ ಹಾಗೂ ತಾರಾವತಿ ದಂಪತಿಗಳ ರಜತ ಮಹೋತ್ಸವದ (25ನೇ ವರ್ಷದ) ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಅವರ ನಿವಾಸದಲ್ಲಿ ಭಜನಾ ಸಂಕೀರ್ತನಾ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ನೆರವೇರಿತು. ​ಇದೇ ಸುಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅರ್ಚಕರಾದ ನವೀನ್ ಶಾಂತಿ ಅವರ ಪೌರೋಹಿತ್ಯದಲ್ಲಿ ಭಕ್ತಿಪೂರ್ವಕ “ದುರ್ಗಾ ನಮಸ್ಕಾರ ಪೂಜೆ”ಯು ಸಂಪನ್ನಗೊಂಡಿತು. ಧಾರ್ಮಿಕ ವಿಧಿವಿಧಾನಗಳ ನಂತರ ಯುವವಾಹಿನಿ ಘಟಕದ […]

Read More

ಅಂಚೆ ಜನಸಂಪರ್ಕ ಅಭಿಯಾನ ಹಾಗೂ ಆಧಾರ್ ನೋಂದಣಿ–ತಿದ್ದುಪಡಿ ಶಿಬಿರ

ಬಜಪೆ, ಮೇ 26: ಯುವವಾಹಿನಿ (ರಿ.) ಬಜಪೆ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ–ಕರಂಬಾರು ಹಾಗೂ ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವನ್ನು 26-05-2026 ರಂದು ನಾರಾಯಣ ಗುರು ಸಮುದಾಯ ಭವನ, ಬಜಪೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಗಳೊಂದಿಗೆ ಅಂಚೆ ಕಚೇರಿಯ […]

Read More

ಸ್ನೇಹ ಪ್ರವಾಸ

ಬಜಪೆ, ಮೇ 24: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಸದಸ್ಯರ ನಡುವಿನ ಬಾಂಧವ್ಯ ವೃದ್ಧಿ ಹಾಗೂ ಸಂಘಟನಾ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ತುಂಬುವ ಉದ್ದೇಶದಿಂದ 24-05-2026 ರಂದು ಒಂದು ದಿನದ ಸ್ನೇಹ ಪ್ರವಾಸವನ್ನು “ಕಿಂಗ್ ಆಫ್ ಕಿಂಗ್ಸ್” ವಾಟರ್ ಪಾರ್ಕ್‌ಗೆ ಆಯೋಜಿಸಲಾಯಿತು. ಪ್ರವಾಸದಲ್ಲಿ ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 33 ಮಂದಿ ಭಾಗವಹಿಸಿದ್ದರು. ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ವಿವಿಧ ಮನರಂಜನಾ ಚಟುವಟಿಕೆಗಳು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು

ದಿನಾಂಕ :
ಸ್ಥಳ :

ದಿನಾಂಕ : 2026ನೇ ಸೆಪ್ಟೆಂಬರ್ 6 ಬೆಳಗ್ಗೆ 11 ಗಂಟೆಗೆ
ಸ್ಥಳ : ಮೂಡುಮಾರ್ನಾಡು, ಮೂಡುಬಿದಿರೆ

ಯುವವಾಹಿನಿ (ರಿ) ಮೂಡುಬಿದಿರೆ ಘಟಕದ ವತಿಯಿಂದ

ದಿನಾಂಕ : 2026ನೇ ಅಗಸ್ಟ್16 ಬೆಳಗ್ಗೆ ಗಂಟೆ 09.30 ರಿಂದ
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಬಿ.ಸಿ.ರೋಡ್

ಯುವವಾಹಿನಿ (ರಿ) ಬಂಟ್ವಾಳ ಘಟಕದ ನಿರೆಲ್‌ಡ್

ದಿನಾಂಕ : 2026ನೇ ಅಗಸ್ಟ್ 23
ಸ್ಥಳ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ

ದಿನಾಂಕ :
ಸ್ಥಳ :

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!