ಯುವವಾಹಿನಿ (ರಿ) ಮುಲ್ಕಿ ಘಟಕದ ಪದಗ್ರಹಣ

ಯುವ ಸಮುದಾಯಕ್ಕೆ ಯುವವಾಹಿನಿಯೇ ದಾರೀ ದೀಪ : ಸುಮಲತಾ ಸುವರ್ಣ

ಮೂಲ್ಕಿ: ಇಂದು ಯುವ ಸಮುದಾಯವು ಹಾದಿ ತಪ್ಪುತ್ತಿದ್ದಾರೆ ಎಂದು ಹೇಳುವ ಬದಲು ಅವರನ್ನು ಯುವವಾಹಿನಿಯಂತಹ ಸಮಾಜ ಮುಖಿ ಚಿಂತನೆಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜವನ್ನು ಸೃಷ್ಟಿಸುವಲ್ಲಿ ಪ್ರಯತ್ನ ನಡೆಸಬೇಕು. ಹೆಣ್ಣು ಮಕ್ಕಳು ವಿದ್ಯೆಯ ಮೂಲಕ ಸದೃಢರಾಗುತ್ತಿರುವ ಇಂದಿನ ದಿನದಲ್ಲಿ ಯುವಕರು ಯಾಕಾಗಿ ಹಿನ್ನೆಡೆಯಾಗಿದ್ದಾರೆ ಎಂದು ಹೆತ್ತವರು ಚಿಂತಿಸಬೇಕಾಗಿದೆ ಎಂದು ಮಂಗಳೂರು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಹೇಳಿದರು.
ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶನಿವಾರ ನಡೆದ ಮೂಲ್ಕಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಮೂಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷೆ ರಕ್ಷಿತಾ ಯೋಗೀಶ್ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿ, ತಮ್ಮ ಅವಧಿಯಲ್ಲಿ ಸಹಕರಿಸಿದವರನ್ನು ಗೌರಿವಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಕುಶಲಾ ಎಸ್. ಕುಕ್ಯಾನ್ ಅವರ ತಂಡಕ್ಕೆ ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಅವರು ಪ್ರತಿಜ್ಞಾವಿಧಿಯನ್ನು ಭೋಧಿಸಿ, ಮಾತನಾಡಿ ಯುವವಾಹಿನಿ ಸಂಸ್ಥೆಯನ್ನು ಇನ್ನಷ್ಟು ಘಟಕಗಳ ಮೂಲಕ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಲು ಎಲ್ಲಾ ಸಮಾಜದವರು ಪ್ರೋತ್ಸಾಹ ನೀಡಿದ್ದಾರೆ. ಸಂಸ್ಥೆಯ ಮೇಲಿನ ಜವಬ್ದಾರಿ ಹೆಚ್ಚಾಗಿದೆ. ಯುವ ಜನತೆಯನ್ನು ಭವಿಷ್ಯದ ಚಿಂತನೆ ಮಾಡುವಂತಹ ವಾತಾವರಣವನ್ನು ಯುವವಾಹಿನಿ ನಿರ್ಮಿಸಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದರು.

ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪರಮೇಶ್ವರ ಪೂಜಾರಿ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ಉದ್ಯಮಿ ಪ್ರವೀಣ್‍ಕುಮಾರ್ ಬೊಳ್ಳೂರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ 11 ಮಂದಿ ಹೊಸ ಸದಸ್ಯರಾಗಿ ಘಟಕಕ್ಕೆ ಸೇರ್ಪಡೆಗೊಂಡರು.
ಕೋಶಾಧಿಕಾರಿಗಳಾದ ಭಾರತೀ ಭಾಸ್ಕರ ಕೋಟ್ಯಾನ್, ದಿವಾಕರ ಕೋಟ್ಯಾನ್, ದಾನಿಗಳಾದ ವಾಸು ಪೂಜಾರಿ ಚಿತ್ರಾಪು, ಯೋಗೀಶ್ ಕೋಟ್ಯಾನ್ ಚಿತ್ರಾಪು, ಅಶೋಕ್ ಕರ್ಕೇರ ಎಸ್.ಕೋಡಿ. ನವೀನ್‍ಚಂದ್ರ ಸುವರ್ಣ, ಮಾಜಿ ಅಧ್ಯಕ್ಷರುಗಳಾದ ಹರೀಂದ್ರ ಸುವರ್ಣ, ಉದಯ ಅಮೀನ್ ಮಟ್ಟು, ಜಯಕುಮಾರ್ ಕುಬೆವೂರು, ರಾಮಚಂದ್ರ ಟಿ. ಕೋಟ್ಯಾನ್, ರಮೇಶ್ ಬಂಗೇರ, ಜಯ ಸಿ. ಪೂಜಾರಿ, ಪ್ರಕಾಶ್ ಸುವರ್ಣ ಉಪಸ್ಥಿತರಿದ್ದರು.
ಘಟಕದ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವರದಿ ನೀಡಿದರು, ನೂತನ ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್ ವಂದಿಸಿದರು, ಚುನಾವಣಾಧಿಕಾರಿ ಚೇತನ್‍ಕುಮಾರ್ ಹಾಗೂ ಮಾಜಿ ಅಧ್ಯಕ್ಷ ವಿಜಯಕುಮಾರ್ ಕುಬೆವೂರು ಪರಿಚಯಿಸಿದರು, ಮಾಜಿ ಅಧ್ಯಕ್ಷ ಮೋಹನ್ ಸುವರ್ಣ ಪ್ರಸ್ತಾವನೆಗೈದರು. ಮಾಜಿ ಅಧ್ಯಕ್ಷ ನರೇಂದ್ರ ಕೆರೆಕಾಡು ಮತ್ತು ಸದಸ್ಯೆ ಜಾಹ್ನವಿ ಮೋಹನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.


ಸನ್ಮಾನ..ಪುರಸ್ಕಾರ..ಗೌರವ..ಸಮಾಜ ಸೇವೆ
ಕಾರ್ಯಕ್ರಮದಲ್ಲಿ ಯುವವಾಹಿನಿ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಪ್ರೇರಣೆಯಾದ ನೆಲೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಹಾಗೂ ಮೂಲ್ಕಿ ಘಟಕಕ್ಕೆ ವಿಶೇಷ ಸಹಕಾರ ನೀಡಿದ ಮಾಜಿ ಸಲಹೆಗಾರ ವಿಶ್ವನಾಥ್‍ರನ್ನು ಗೌರವಿಸಲಾಯಿತು.
ವಾಸು ಪೂಜಾರಿ ಚಿತ್ರಾಪು ಸಹಕಾರದಲ್ಲಿ ಧ್ಯಾನ್ ಹೆಜಮಾಡಿ, ಯಶ್ವಿತ್ ಹೆಜಮಾಡಿ, ಮೇಘಶ್ರೀ ಮೂಲ್ಕಿ, ಕಾವ್ಯ ನಡಿಕುದ್ರು, ಅಶ್ವಿನ್ ನಡಿಕುದ್ರ, ಪ್ರಣೀತ್ ಚಿತ್ರಾಪು, ಅಶೋಕ್ ಕರ್ಕೇರ ಸಹಕಾರದಲ್ಲಿ ಅಭಿಜಿತ್ ಮಟ್ಟು, ಪಲ್ಲವಿ, ನವೀನ್‍ಚಂದ್ರ ಸುವರ್ಣರ ಸಹಾಕಾರದಲ್ಲಿ ದೀಪಕ್‍ಕುಮಾರ್ ಕುಬೆವೂರು, ಯೋಗೀಶ್ ಕೋಟ್ಯಾನ್ ಅವರ ಸಹಕಾರದಲ್ಲಿ ಕಲ್ಪಿತ ಕಕ್ವ, ಮನಿಷ್ ಕೋಟ್ಯಾನ್ ಚಿತ್ರಾಪು ಅವರಿಗೆ ವಿದ್ಯಾ ನಿಧಿಯನ್ನು ಹಾಗೂ ಭವಾನಿ ಕಕ್ವ ಅವರಿಗೆ ನಿರಂತರ 5ನೇ ವರ್ಷದ ಅಕ್ಕಿ, ಬೊಮ್ಮಿ ಪೂಜಾರಿ ತೋಕೂರು ಅವರ ಮನೆಗೆ ವಿದ್ಯುತ್ ಸಂಪರ್ಕ, ಕೇಶವ ಪೂಜಾರಿ ಕೊಳಚಿಕಂಬಳ ಅವರ ಮನೆಯ ಪುನರ್ ನಿರ್ಮಾಣಕ್ಕೆ ಸಂಪೂರ್ಣ ಸಹಾಯವನ್ನು ನೀಡಲಾಯಿತು.

ವರದಿ : ನರೇಂದ್ರ ಕೆರೆಕಾಡು
ಚಿತ್ರ : ಪ್ರಕಾಶ್ ಸುವರ್ಣ

One thought on “ಯುವ ಸಮುದಾಯಕ್ಕೆ ಯುವವಾಹಿನಿಯೇ ದಾರೀ ದೀಪ : ಸುಮಲತಾ ಸುವರ್ಣ

Leave a Reply to Sadhu Poojary Cancel reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!