ಯುವವಾಹಿನಿ (ರಿ) ಪಡುಬಿದ್ರೆ ಘಟಕ

ಯುವವಾಹಿನಿ ಪಡುಬಿದ್ರೆ ಘಟಕದ ಅಧ್ಯಕ್ಷರಾಗಿ ಸಂತೋಷ್ ಅಧಿಕಾರ ಸ್ವೀಕಾರ

 

ಯುವವಾಹಿನಿ (ರಿ) ಪಡುಬಿದ್ರೆ ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ನಂದಿಕೂರು ಆಯ್ಕೆಯಾಗಿದ್ದಾರೆ.
ದಿನಾಂಕ 18.06.2017 ನೇ ಆದಿತ್ಯವಾರ ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಜರುಗಿದ ಪದಗ್ರಹಣ ಸಮಾರಂಭದಲ್ಲಿ ಸಂತೋಷ್ ಕುಮಾರ್ ನಂದಿಕೂರು ನೇತ್ರತ್ವದ 13 ಜನರ ತಂಡವು ಪ್ರತಿಜ್ಷಾ ವಿಧಿ ಸ್ವೀಕರಿಸಿದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ ಪ್ರತಿಜ್ಷಾ ವಿಧಿ ಬೋಧಿಸಿದರು.ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಪಡುಬಿದ್ರೆ ನಾರಾಯಣಗುರು ಮಹಿಳಾ ಮಂಡಳಿ ಅಧ್ಯಕ್ಷೆ ಸರೋಜಿನಿ ಸಿ.ಅಂಚನ್,ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕಿಶೋರ್ ಕೆ.ಬಿಜೈ,ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ,ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಯುವವಾಹಿನಿ ಪಡುಬಿದ್ರೆ ಘಟಕದ ಅಧ್ಯಕ್ಷ ವಿರೇಂದ್ರ ಕುಮಾರ್ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು.
ಮುಂದಿನ ಒಂದು ವರ್ಷದಲ್ಲಿ ಹಿರಿಯರ ಮಾರ್ಗದರ್ಶನ ಪಡೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯುವವಾಹಿನಿ ಪಡುಬಿದ್ರೆ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸ ತನಗಿದೆ ಎಂದು ನೂತನ ಅಧ್ಯಕ್ಷರಾದ ಸಂತೋಷ್ ಕುಮಾರ್ ನಂದಿಕೂರು ತಿಳಿಸಿದರು.
ಯುವವಾಹಿನಿ ಪಡುಬಿದ್ರೆ ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ಪ್ರಸ್ತಾವನೆ ಮಾಡಿದರು.ಮಾಜಿ ಅಧ್ಯಕ್ಷರಾದ ಅಶೋಕ್ ಪೂಜಾರಿ ಸ್ವಾಗತಿಸಿದರು.  ಶ್ರೀಮತಿ ಚೈತ್ರಾ ಧನ್ಯವಾದ ನೀಡಿದರು.ಸುಜಾತ ಪಿ.ಕೋಟ್ಯಾನ್ ಹಾಗೂ ನಿಶ್ಮಿತಾ ಪಿ. ಎಚ್  ಕಾರ್ಯಕ್ರಮ ನಿರ್ವಹಿಸಿದರು.

2017-18 ನೇ ಸಾಲಿನ ಕಾರ್ಯಕಾರಿ ಸಮಿತಿ
ಅಧ್ಯಕ್ಷರು : ಸಂತೋಷ್ ಕುಮಾರ್ ನಂದಿಕೂರು
ಉಪಾಧ್ಯಕ್ಷರು : ದೀಪಕ್ ಕೆ.ಬೀರ
ಕಾರ್ಯದರ್ಶಿ : ಕು.ನಿಶ್ಮಿತಾ ಎಚ್
ಜತೆ ಕಾರ್ಯದರ್ಶಿ : ಅಶ್ವತ್
ಕೋಶಾಧಿಕಾರಿ : ಕು.ಶೈಲಜಾ
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ನಿಖಿಲ್ ಪೂಜಾರಿ
ಕಲೆ ಮತ್ತು ಸಾಹಿತ್ಯ ನಿರ್ದೇಶಕರು : ಶಾಶ್ವತ್ ನಂದಿಕೂರು
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ಹೇಮಂತ್
ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸುಧೀರ್ ಕುಮಾರ್
ಸಮಾಜ ಸೇವೆ ನಿರ್ದೇಶಕರು : ಶ್ರವಣ್ ಕುಮಾರ್
ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರು : ಚಿತ್ರಾಕ್ಷಿ
ವಿದ್ಯಾರ್ಥಿ ಸಂಘಟನೆ : ದಿನೇಶ್ ಕುಮಾರ್
ಸಂಘಟನಾ ಕಾರ್ಯದರ್ಶಿ : ಪ್ರಜ್ವಲ್ ಕುಮಾರ್

ಸಂತೋಷ್ ಕುಮಾರ್ ನಂದಿಕೂರು ಅಧ್ಯಕ್ಷರು,ಯುವವಾಹಿನಿ (ರಿ) ಪಡುಬಿದ್ರೆ ಘಟಕ
ಕು.ನಿಶ್ಮಿತಾ ಎಚ್ ಕಾರ್ಯದರ್ಶಿ ಯುವವಾಹಿನಿ (ರಿ) ಪಡುಬಿದ್ರೆ ಘಟಕ

 

4 thoughts on “ಯುವವಾಹಿನಿ ಪಡುಬಿದ್ರೆ ಘಟಕದ ಅಧ್ಯಕ್ಷರಾಗಿ ಸಂತೋಷ್ ಅಧಿಕಾರ ಸ್ವೀಕಾರ

Leave a Reply to Thammaya Cancel reply

Your email address will not be published. Required fields are marked *

error: Content is protected !!