ಯುವವಾಹಿನಿ (ರಿ) ಮುಲ್ಕಿ ಘಟಕ

ಬಡ ಕುಟುಂಬಕ್ಕೆ ಯುವವಾಹಿನಿ ಆಸರೆ

ಮುಲ್ಕಿ : ಇತ್ತೀಚೆಗೆ ಸುರಿದ ಗಾಳಿ ಮಳೆಯಿಂದಾಗಿ ಮುಲ್ಕಿ ಸಮೀಪದ ಕೊಳಚಿಕಂಬ್ಳದ ಕೇಶವ ಪೂಜಾರಿ ಹಾಗೂ ಮೀನಾಕ್ಷಿ ದಂಪತಿಗಳ ಬಡ ಕುಟುಂಬದ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಈ ಮನೆಯಲ್ಲಿ ವಾಸಿಸಲು‌ ಸಾಧ್ಯವಾಗದೆ ಕೇಶವ ಪೂಜಾರಿ ಯವರ ಬಡ ಕುಟುಂಬಕ್ಕೆ ದಿಕ್ಕೇ ತೋಚದಂತಾಯಿತು.

ಈ‌ ಸಂದರ್ಭದಲ್ಲಿ ‌ಯುವವಾಹಿನಿ‌ ಮುಲ್ಕಿ ಘಟಕವು ಸುಮಾರು ‌ರೂಪಾಯಿ‌ 60,000/- ವೆಚ್ಚದಲ್ಲಿ ಈ ಮನೆಯನ್ನು ರಿಪೇರಿಗೊಳಿಸಿ‌ ವಾಸಿಸಲು ಯೋಗ್ಯವಾಗುವಂತೆ ಮಾಡಿ ದಿನಾಂಕ‌ ‌15.06.2018 ರಂದು‌ ಮನೆಯನ್ನು ಹಸ್ತಾಂತರಿಸಲಾಯಿತು

ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷೆ ರಕ್ಷಿತಾ ಯೋಗೀಶ್ ಕೋಟ್ಯಾನ್, ಕಾರ್ಯದರ್ಶಿ ಸತೀಶ್ ಕುಲ್ಪಾಡಿ, ಮಾಜಿ ಅಧ್ಯಕ್ಷರಾದ ಯೋಗೀಶ್ ಕೋಟ್ಯಾನ್, ಹರೀಂದ್ರ ಸುವರ್ಣ, ಉದಯ ಅಮೀನ್ ಮಟ್ಟು, ಸಲಹೆಗಾರರ ಪರಮೇಶ್ವರ ಪೂಜಾರಿ , ನಿಯೋಜಿತ ಅಧ್ಯಕ್ಷೆ ಕುಶಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು

2 thoughts on “ಬಡ ಕುಟುಂಬಕ್ಕೆ ಯುವವಾಹಿನಿ ಆಸರೆ

Leave a Reply to Rajith Kumar Cancel reply

Your email address will not be published. Required fields are marked *

error: Content is protected !!