ಯುವವಾಹಿನಿ (ರಿ.) ಕೆಂಜಾರು - ಕರಂಬಾರು ಘಟಕದ

ಪದಪ್ರದಾನ ಸಮಾರಂಭ

ಮಂಗಳೂರು ದಿ.27.02.2022 ಯುವವಾಹಿನಿ (ರಿ.) ಕೆಂಜಾರು – ಕರಂಬಾರು ಘಟಕದ ಪದಗ್ರಹಣ ಸಮಾರಂಭವು ಶ್ರೀ ದೇವಿ ಭಜನಾ ಮಂದಿರ ಕೆಂಜಾರು ಕರಂಬಾರು ಇಲ್ಲಿ ಜರುಗಿತು. ಶ್ರೀ ರಾಮಾಂಜನೆಯ ಮಂದಿರ ಕೆಂಜಾರು ಇದರ‌ ಅಧ್ಯಕ್ಷರಾದ ಶ್ರೀ ಮಹಾಬಲ ಪೂಜಾರಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಆರತಿಗೈದು ದೀಪ ಪ್ರಜ್ವಲನೆ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಶೇಖರ್ ಬಂಗೇರ ಅವರು ಸಮಾರಂಭವನ್ನು ‌ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಜೀತೇಶ್ ಸಾಲ್ಯಾನ್ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಯಶವಂತ್ ಬಿ. ರವರು ಘಟಕವು ನಡೆದುಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಪ್ರೀತೇಶ್ ಅರ್ಬಿ ವಾರ್ಷಿಕ ವರದಿ ಮಂಡಿಸಿದರು. ಯುವವಾಹಿನಿ (ರಿ.‌) ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ‌ ಉದಯ್ ಅಮಿನ್ ಮಟ್ಟು ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಸಂಪ ರಾಜೀವ ಪೂಜಾ‌ರ್ತಿ, ಶ್ರೀ ಸೇಸಪ್ಪ ಅಮೀನ್ ಮತ್ತು ಶ್ರೀ ಕಾಂತಪ್ಪ ಪೂಜಾರಿ ಅವರುಗಳನ್ನು ಅವರ ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಗೌರವಿಸಲಾಯಿತು. 7 ಮಂದಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ‌ ಪ್ರೊತ್ಸಾಹಕ ವಿದ್ಯಾ ನಿಧಿ ವಿತರಿಸಲಾಯಿತು. ಪ್ರಧಾನ ಭಾಷಣಕಾರರಾಗಿ ಶ್ರೀ ಸತ್ಯಜಿತ್ ಸುರತ್ಕಲ್ (ರಾಜ್ಯಾಧ್ಯಕ್ಷರು, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಿ.) ಮಾತನಾಡಿ ನಮ್ಮ ಸಮಾಜದ ಮಕ್ಕಳನ್ನು ಹೆಚ್ಚಿನ ವಿದ್ಯಾಭಾಸಕ್ಕೆ ಅಣಿಗೊಳಿಸುವ ಮುಖೇನ ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಮಾಜಿಕ ಅಭಿವೃಧ್ದಿಯ ಚಿಂತನೆಯನ್ನು ಜಾಗೃತಗೊಳಿಸುವಲ್ಲಿ ನಾವುಗಳು ಮತ್ತಷ್ಟು ಸಕ್ರಿಯರಾಗಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವ್ರತ್ತರಾಗಬೇಕಿದೆ ಎಂದು ತಿಳಿಸಿದರು. ಜಗನ್ನಾಥ ಸಾಲ್ಯಾನ್, ಅಧ್ಯಕ್ಷರು ಶ್ರೀ ಮಾರಿಯಮ್ಮ ಕೋಟೆ ಬಬ್ಬು ಸ್ವಾಮಿ ದೈವಸ್ಥಾನ, ಕರಂಬಾರು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಪ್ರಸಾದ್ ಪಾಲನ್ ಘಟಕವನ್ನು ಮತ್ತಷ್ಟು ಸಕ್ರಿಯಗೊಳಿಸುವಲ್ಲಿ ಸದಸ್ಯರೆಲ್ಲರ ಸಹಕಾರ ಅಪೇಕ್ಷಿಸಿದರು. ಅಧ್ಯಕ್ಷರಾದ ಜೀತೇಶ್ ಸಾಲ್ಯಾನ್ ತನ್ನ‌ ಅಧ್ಯಕ್ಷಾವಧಿಯಲ್ಲಿ ಸಹಕಾರ ನೀಡಿದ ಪದಾಧಿಕಾರಿಗಳಿಗೆ , ಮಾಜಿ ಅಧ್ಯಕ್ಷರುಗಳಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಗೈದರು ಹಾಗೂ ಎಲ್ಲಾ ಆತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.ನೂತನ ಕಾರ್ಯದರ್ಶಿ ಸಂದೀಪ್ ಧನ್ಯವಾದ ಸಮರ್ಪಿಸಿದರು. ಸ್ಥಾಪಕಧ್ಯಕ್ಷರಾದ ಗಣೇಶ್ ಅರ್ಬಿ ನಿರೂಪಣೆಗೈದರು.

One thought on “ಪದಪ್ರದಾನ ಸಮಾರಂಭ

  1. ಸರ್ವ ಸದಸ್ಯರ ಸೌಹಾrಧಯುತ ಸಹಕಾರದಿಂದ ಸಂಪನ್ನಗೊಂಡ ಮಾದರಿ ಕಾರ್ಯಕ್ರಮ. ಎಲ್ಲರಿಗೂ ಅಭಿನಂದನೆಗಳು.

Leave a Reply to Sadhu poojary Cancel reply

Your email address will not be published. Required fields are marked *

error: Content is protected !!