ಮೂಲ್ಕಿ: ಯುವವಾಹಿನಿ ಸದಸ್ಯ ರೊಳಗೆ ಬಾಂಧವ್ಯ ವೃದ್ಧಿಸಲು ಹಾಗೂ ಘಟಕದ ಸದಸ್ಯರ ಕುಟುಂಬ ದೊಂದಿಗೆ ಬೆರೆಯಲು ದಿನಾಂಕ 19/08/2023 ರಿಂದ 09/03/2024 ರವರೆಗೆ ಮನೆ ಮನೆ ಭಜನೆ ಭಜನಾ ಸಂಕೀರ್ತನೆ ಜರಗಿತು.ಒಟ್ಟು 24 ಸದಸ್ಯರುಗಳ ಮನೆಯಲ್ಲಿ ಭಜನಾ ಸಂಕೀರ್ತನೆ ನಡೆಸಿ ಸಮಾರೋಪವಾಗಿ ದಿನಾಂಕ 14/03/2024 ರಂದು ಮೂಲ್ಕಿ ಬಿಲ್ಲವ ಸಂಘದ ಗುರು ಮಂದಿರದಲ್ಲಿ ಭಜನೆ ಹಾಗೂ ವಿಶೇಷ ಗುರುಪೂಜೆ ನಡೆಯಿತು. ಅರ್ಚಕರಾದ ಕೃಷ್ಣ ಶಾಂತಿರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಅನ್ನಪ್ರಸಾದ ವಿತರಿಸಲಾಯ್ತು.ಈ ಸಂದರ್ಭದಲ್ಲಿ ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಒಳ್ಳೆಯ ಉದ್ಧೇಶ, ಉದಾತ್ತ ದ್ಯೇಯ.
ಅಭಿನಂದನೆಗಳು