ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ| ಉಮ್ಮಪ್ಪ ಪೂಜಾರಿ ಹಾಗೂ LIC ಉದ್ಯೋಗಿ ಶ್ರೀಮತಿ ರೇಖಾ ದಂಪತಿಗಳ ಪುತ್ರ ಕ್ಷಿಪ್ರಜ್ ಯು CBSE ಹತ್ತನೆಯ ತರಗತಿಯಲ್ಲಿ ಹತ್ತರಲ್ಲಿ ಹತ್ತು ಗ್ರೇಡ್ ಪಾಯಿಂಟ್ ಗಳಿಸಿರುತ್ತಾನೆ.
ಪ್ರತಿಭಾವಂತ ವಿದ್ಯಾರ್ಥಿಯಾದ ಈತ ಕೇಂದ್ರಿಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 21 ನೇ ಸ್ಥಾನ ಪಡೆದಿದ್ದು ದಕ್ಷಿಣ ಭಾರತ ಹಿಂದಿ ಪ್ರಚಾರ್ ಸಭಾ ಇವರು ನಡೆಸಿದ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದಿದ್ದಾನೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಜೂನಿಯರ್ ಗ್ರೇಡ್ ಸಂಗೀತ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ.
ಕ್ವಿಜ್, ಭಾಷಣ, ಚೆಸ್ ಇತ್ಯಾದಿ ಪಠ್ಯೇತರ ಚಟುವಟಿಕೆಗಳಲ್ಲೂ ಉತ್ತಮ ಸಾಧನೆ ಮಾಡಿರುವ ಈತ ಮಂಗಳೂರು ಕೆನರಾ ಪ್ರೌಢ ಶಾಲೆಯ 2015-16ನೇ ಸಾಲಿನ ವಿದ್ಯಾರ್ಥಿ ನಾಯಕನೂ ಆಗಿರುವುದು ಉಲ್ಲೇಖನೀಯ. ಕ್ಷಿಪ್ರಜ್‌ನ ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಯೊಂದಿಗೆ ಯುವವಾಹಿನಿಯು ’ಅಕ್ಷರ ಪುರಸ್ಕಾರ’ ನೀಡಿ ಗೌರವಿಸಲು ತುಂಬಾ ಸಂತೋಷ ಪಡುತ್ತದೆ.