ಗ್ರಾಮಚಾವಡಿ : ಬ್ರಹಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಸಭಾಂಗಣದಲ್ಲಿ ದಿನಾಂಕ : 14-07-2024 ರವಿವಾರ ನಡೆದ ಯುವವಾಹಿನಿ 34 ನೇ ನೂತನ ಘಟಕ ಉದ್ಘಾಟನೆಗೊಂಡಿತು.
ನೂತನ ಘಟಕದ ಉದ್ಘಾಟನೆ ಸಮಾರಂಭದಲ್ಲಿ ನಾಯಕನಾದವನು ತಮ್ಮೊಂದಿಗೆ ಇರುವವರನ್ನು ಬಳಸಿಕೊಳ್ಳುವುದಲ್ಲ, ಬೆಳೆಸುವುದು ನಿಜವಾದ ಗುಣ. ಯುವವಾಹಿನಿ ಯಲ್ಲಿ ಅಧ್ಯಕ್ಷ ಪದವಿ ಕೇವಲ ಒಂದು ವರ್ಷ ಅವಧಿಗೆ ಸೀಮಿತವಾಗಿದ್ದು, ವರ್ಷದಲ್ಲಿ ಅಧ್ಯಕ್ಷ ತನ್ನ ತಂಡದೊಂದಿಗೆ ಎಷ್ಟು ಸಾಧನೆ ಮಾಡಲು ಸಾಧ್ಯವೋ ಅಷ್ಟು ಸಾಧನೆ ಮಾಡಲು ಅವಕಾಶ ಕೊಡುತ್ತದೆ. ಹೊರತು ಇನ್ನಷ್ಟು ವರ್ಷ ಪದವಿಯಲ್ಲಿ ಇರಬೇಕು ಎಂದು ಅಧಿಕಾರದಲ್ಲಿ ಜೋತು ಬೀಳಲು ಅವಕಾಶ ನೀಡಲಾರದು ಎಂದು ದಿಕ್ಸೂಚಿ ಭಾಷಣಕಾರರಾಗಿ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾಪನ ಅಧ್ಯಕ್ಷರು ಸಂಪತ್ ಸುವರ್ಣ ನುಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕರು ಕೆ. ಟಿ. ಸುವರ್ಣ ಯುವಸಿಂಚನ ಸಂಚಿಕೆ ಬಿಡುಗಡೆಗೊಳಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರು ಹರೀಶ್ ಕೆ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ (ರಿ) ಗ್ರಾಮ ಚಾವಡಿ ನೂತನ ತಂಡದ ಪರಿಚಯವನ್ನು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ್ ಸುವರ್ಣ ಕೊಲ್ಯ ನಡೆಸಿಕೊಟ್ಟರು.
ಕೇಂದ್ರ ಸಮಿತಿ ಅಧ್ಯಕ್ಷರು ಘಟಕದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿಧಿ ಬೋಧಿಸುತ್ತಾ ಪದಗ್ರಹಣಗೈದರು.
ನೂತನ ಘಟಕಕ್ಕೆ ಕಾರಣಿಕರ್ತರಾದ ಯುವವಾಹಿನಿ (ರಿ) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸುಂದರ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಖ್ಯಾತ ಕ್ರೀಡಾಪಟು , ಪ್ರತಿಭಾವಂತ ವಿದ್ಯಾರ್ಥಿನಿ ರೀಕ್ರಾ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಮಂಗಳೂರು ವಿ.ವಿ. ಉಪನ್ಯಾಸಕ ಡಾ। ಭೋಜ ಪೂಜಾರಿ, ಬೆಂಗಳೂರಿನ ಉಪನ್ಯಾಸಕಿ
ಡಾ। ವಿನುತಾ ಸಾಲ್ಯಾನ್, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ
ಜಗದೀಶಚಂದ್ರ ಡಿ.ಕೆ ಹಾಗೂ ಕೊಲ್ಯ
ಘಟಕಾಧ್ಯಕ್ಷ లತೀಶ್ ಸಂಕೋಳಿಗೆ ಉಪಸ್ಥಿತರಿದ್ದರು.
ಯುವವಾಹಿನಿಯ ನೂತನ 34ನೇ ಗ್ರಾಮಚಾವಡಿ ಘಟಕ ಅಧ್ಯಕ್ಷರು ಹರೀಶ್ ಪೂಜಾರಿ ಕೊಣಾಜೆ ನೂತನ ಘಟಕದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಸುರೇಖಾ ಎಚ್.ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿದರು. ಗ್ರಾಮ ಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ರವೀಂದ್ರ ಬಂಗೇರ ಘಟಕಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ಸ್ವಾಗತಗೈದರು ಹಾಗೂ ಪ್ರಥಮ ಉಪಾಧ್ಯಕ್ಷರು ಶ್ರೀ ಲೋಕೇಶ್ ಆಮೀನ್ ಪ್ರಸ್ತಾವನೆಗೈದರು .
ದಯಾನಂದ್ ಉಪ್ಪಾರ್ ಹಾಗೂ ರಶ್ಮಿ ಸನಿಲ್ ನಿರೂಪಿಸಿದರು. ನೂತನ ಕಾರ್ಯದರ್ಶಿ ಅಜಿತ್ ಪೂಜಾರಿ ವಂದಿಸಿದರು.