ಕರಾಟೆ – ಆತ್ಮರಕ್ಷಣೆಯ ಕಲೆ. ವಿದ್ಯಾರ್ಥಿ ಜೀನದಲ್ಲಿ ಕಲಿಕೆಯೊಂದಿಗೆ ಈ ಕ್ರೀಡೆಯಲ್ಲಿ ತನ್ನನ್ನು ಪರಿಪೂರ್ಣವಾಗಿ ಸಮರ್ಪಿಸಿ ಮಾರ್ಗದರ್ಶಕ ಶ್ರೀ ಸತೀಶ್ ಪೂಜಾರಿ ಬೆಳ್ಮಣ್ ಇವರ ಗರಡಿಯಲ್ಲಿ ಪಳಗಿ ಉನ್ನತ ಕಪ್ಪು ಪಟ್ಟಿ ಪದವಿಗಳಸಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡು ತಂದೆ ತಾಯಿ, ಸಮಾಜ ಮಾತ್ರವಲ್ಲ ಜಿಲ್ಲೆಗೇ ಹೆಸರು ತಂದ ಕು| ಚೈತ್ರಾ ಸಾಲಿಯಾನ್ ಓರ್ವ ಉದಯೋನ್ಮುಖ ಪ್ರತಿಭೆ. ತಂದೆ ಶ್ರೀ ಅಶೋಕ್ ಸಾಲ್ಯಾನ್ -ತಾಯಿ ಶ್ರೀಮತಿ ಸಾಲ್ಯಾನ್ ದಂಪತಿಗಳಿಗೆ ಗೌರವ ಹೆಮ್ಮೆ ತಂದುಕೊಟ್ಟ ಬಿಲ್ಲವ ಸಮಾಜದ ಈ ಉದಯೋನ್ಮುಖ ತಾರೆ ಎಲ್ಲರ ಗಮನ ಸೆಳೆದಿದ್ದಾಳೆ.
ನೀವು ನಂಬಲಸಾಧ್ಯವಾದ ವಿವಿಧ ಕರಾಟೆ ಸ್ವರ್ಧೆಗಳಲ್ಲಿ 49 ಚಿನ್ನ, 43 ಬೆಳ್ಳಿ ಹಾಗೂ 32 ಕಂಚಿನ ಪದಕಗಳನ್ನೂ ಗಳಿಸಬೇಕಿದ್ದರೆ ಇದೊಂದು ಅತ್ಯಮೋಘ ಪ್ರತಿಭೆಯೇ ಸರಿ.
2016 ರ ಮೇ ತಿಂಗಳಲ್ಲಿ ದುಬಾಯಲ್ಲಿ ನಡೆದ ಅಂತಾರಾಷ್ಟ್ರೀಯ ಸ್ವರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಫೈಟಿಂಗ್ (ಕುಮಿಟೆ) ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕಗಳಸಿ ದೇಶದ ಕೀರ್ತಿಯನ್ನು ಮೆರೆಸಿದ ಸಾಧನೆ ಈ ಪ್ರತಿಭೆಯದ್ದು ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಸಿದ ಈ ಮಿಂಚಿನ ಪ್ರತಿಭೆಯನ್ನು ಯುವವಾಹಿನಿ ಹೆಮ್ಮೆಯಿಂದ ಗೌರವಿಸುತ್ತಾ ಯುವವಾಹಿನಿ ಪ್ರತಿಭಾ ಪುರಸ್ಕಾರವನ್ನು ನೀಡಿ ಅಭಿನಂದಿಸುತ್ತಿದೆ.