Yuvavahini

JUN 30, 2024 4.55 PM IST

ಯುವವಾಹಿನಿ (ರಿ) ಕೊಲ್ಯ ಘಟಕ

ಕೆಸರ್ದ ಕಂಡೊಡು ಗೊಬ್ಬು

ಕೊಲ್ಯ: ಅಂದು ರವಿವಾರ, ಮೂಡಣದ ಆಗಸದ ತುಂಬಾ ಕರಿಮುಗಿಲು ಮುಸುಕಿತ್ತು. ಬಾನ ಭಾಸ್ಕರ ಮೋಡಗಳ ಮರೆಯಲ್ಲಿ ಎಲ್ಲೋ ಮರೆಯಾಗಿದ್ದ. ಧೋ….ಎಂದು ಸುರಿಯುತ್ತ ವರುಣ ದೇವ ವಸುಂಧರೆಯ ಮಡಿಲಿನಲ್ಲಿ ಜೋರಾಗಿ ಆರ್ಭಟಿಸುತ್ತಿದ್ದ. ಕೆಸರುಗದ್ದೆಯಲ್ಲಿ ಆಡಲು ಅಣಿಯಾಗಿದ್ದ ಯುವವಾಹಿನಿ ಸದಸ್ಯರು ಹಾಗೂ ಸದಸ್ಯರ ಮಕ್ಕಳಲ್ಲಿ ವರ್ಷಧಾರೆ ನಿಲ್ಲಬಹುದೆ ಎನ್ನುವ ಒಂದು ರೀತಿಯ ಆತಂಕ ಮನೆಮಾಡಿತ್ತು. ಕೊನೆಗೂ ಹತ್ತು ಗಂಟೆಯ ನಂತರ ವರುಣದೇವ ಶಾಂತನಾಗಿ ನಮ್ಮೆಲ್ಲರಲ್ಲೂ ಭರವಸೆಯ ಆಶಾಕಿರಣ ಮೂಡಿಸಿದ.

ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 30/06/2024 ಭಾನುವಾರದಂದು ಮಾಡೂರಿನ ಹಚ್ಚ ಹಸುರಿನ ಪ್ರಕೃತಿಯ ನಡುವೆ, ಜುಳು ಜುಳು ಹರಿಯುವ ತೊರೆಯ ಬದಿಯ ಪಾಪುದಡಿಯ ನಮ್ಮ ಸದಸ್ಯರ ತಂದೆಯವರಾದ ಶ್ರೀ ರಾಮ ಪೂಜಾರಿಯವರ ಕೊಳಕೆ ಗದ್ದೆಯಲ್ಲಿ ಕೆಸರು ಗದ್ದೆಯಲ್ಲಿ ಆಟದ ಚಾಲನೆಗೆ ನಾವೆಲ್ಲರು ಸಜ್ಜಾದೆವು. ಪ್ರಗತಿಪರ ಕೃಷಿಕರಾದ ಶ್ರೀ ರಾಮ ಪೂಜಾರಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಪ್ರತಿಯೊಬ್ಬರ ಮೈ ಕೈ ಒಮ್ಮೆ ಕೆಸರಾಗಬೇಕು, ಕೆಸರಿನಲ್ಲಿ ಇರುವ ಔಷಧಿಯ ಗುಣಗಳು ಚರ್ಮ ವ್ಯಾಧಿ ತಡೆಗಟ್ಟಲು ಸಹಕಾರಿ, ಮಕ್ಕಳಿಗೆ ಗದ್ದೆ ಕೆಸರಿನ ಮಹತ್ವ ತಿಳಿಸಬೇಕು, ಹಳ್ಳಿಯ ಕೃಷಿ ವಿಚಾರಗಳು, ಹಳ್ಳಿಯ ಆಟಗಳ ಬಗ್ಗೆ ಮಕ್ಕಳಿಗೆ ವಿವರಿಸಬೇಕು ಎಂದು ತಿಳಿಸಿದರು.

ಯುವವಾಹಿನಿ (ರಿ) ಕೊಲ್ಯ ಘಟಕದ ಸದಸ್ಯರು, ಸದಸ್ಯರ ಕುಟುಂಬ ಬಂಧುಗಳು, ಸದಸ್ಯರ ಮಕ್ಕಳು ಹೀಗೆ ಹಿರಿಯ ಕಿರಿಯರೆಲ್ಲರೂ ಕೆಸರಿನಲ್ಲಿ ಎದ್ದು, ಬಿದ್ದು ಆಟವಾಡಿ ಪುಳಕಿತರಾದರು. ಮುಮ್ಮುಖ ಓಟ, ಹಿಮ್ಮುಖ ಓಟ, ಪಾಲೆ ಓಟ, ತೆಂಗಿನ ಕಾಯಿ ರಿಲೇ, ಹಗ್ಗ ಜಗ್ಗಾಟ, ತಿಪ್ಪಿ ಓಟ, ಉಪ್ಪು ಮೂಟೆ ಹೀಗೆ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ವಿಭಾಗಗಳಲ್ಲಿ ಆಟೋಟಗಳನ್ನು ನಡೆಸಲಾಯಿತು. ನಮ್ಮ ಘಟಕದ ಸದಸ್ಯರಾದ ಶ್ರೀ ಲತೀಶ್ ಪಾಪುದಡಿ ಇವರ ಹಗಲಿರುಳ ಶ್ರಮದಿಂದ ಸಿದ್ಧಗೊಂಡ ಕೆಸರಿನ ಗದ್ದೆಯಲ್ಲಿ ಓಡಾಡಿದ ಕ್ಷಣಗಳು ಅವಿಸ್ಮರಣೀಯ ಅನುಭವವನ್ನು ನೀಡಿತು.

ಭಾಗವಹಿಸಿದ ಸರ್ವರೂ ಕೇಸರ್ಡೊಂಜಿ ಗೊಬ್ಬು ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು , ಘಟಕದ ಸದಸ್ಯರಾದ ಶ್ರೀ ಮಹೇಶ್ ಕನೀರುತೋಟ ಸಿದ್ಧಪಡಿಸಿದ ಕೃತಕ ಮಳೆಯ ಚಪ್ಪರದಡಿ ನೃತ್ಯ ಮಾಡಿ ಕುಣಿದು ಕುಪ್ಪಳಿಸಿದರು.

ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಲತೀಶ್ ಎಂ.ಸಂಕೋಳಿಗೆ ಸರ್ವರಿಗೂ ಸ್ವಾಗತ ಕೋರಿದರು, ಕಾರ್ಯದರ್ಶಿ ಶ್ರೀ ಜೀವನ್ ಕೊಲ್ಯ ಧನ್ಯವಾದ ಗೈದರು. ಘಟಕದ ಕ್ರೀಡಾ ನಿರ್ದೇಶಕರಾದ ಶ್ರೀಮತಿ ಸಾರಿಕಾ ಜೀವನ್ ಸ್ಪರ್ಧೆಯ ರೂಪು ರೇಷೆ ಸಿದ್ದಪಡಿಸಿದರು. ಘಟಕದ ಸದಸ್ಯರಾದ ಶ್ರೀ ಸಚಿನ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಶ್ರೀಮತಿ ಸವಿತಾ ಸಂತೋಷ್, ಶಿರಲ್ ಕೊಲ್ಯ, ಶಶಿಕಾಂತ್ ಪರ್ಯತ್ತೂರು, ಶಶಿಧರ್ ಮಾಡೂರು ಶೇಖರ್ ಮಾಡೂರು ಹಾಗೂ ಸರ್ವ ಸದಸ್ಯರು , ಸದಸ್ಯ ಬಂಧುಗಳು ಮತ್ತು ಮಾಜಿ ಅಧ್ಯಕ್ಷರುಗಳು ಸಹಕಾರ ನೀಡಿದರು.

ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕರು ಹಾಗೂ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ, ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರು ಮತ್ತು ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ್ ಮಾಡೂರ್, ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀ ಸುರೇಶ್ ಬಿಲ್ಲವ, ಘಟಕದ ಪ್ರಥಮ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಸುರೇಶ್, ದ್ವಿತೀಯ ಉಪಾಧ್ಯಕ್ಷರಾದ ಶ್ರೀ ನಿತಿನ್ ಕರ್ಕೇರ, ಘಟಕದ ಪದಾಧಿಕಾರಿಗಳು, ಸದಸ್ಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಘಟಕದ ಸಂಘಟನಾ ನಿರ್ದೇಶಕರಾದ ಶ್ರೀ ಭಾಸ್ಕರ್ ಮಡ್ಯಾರ್ ಇವರ ನೇತೃತ್ವದಲ್ಲಿ, ಶಶಿಧರ್ ಮಾಡೂರು ಮತ್ತು ಮನೆಯವರ ಸಹಕಾರದೊಂದಿಗೆ ಶುಚಿ ರುಚಿಯಾದ ಮುಂಜಾನೆಯ ಉಪಹಾರ ಮತ್ತು ಮಧ್ಯಾಹ್ನದ ಸವಿ ಭೋಜನ ಮೈ ಮನಕ್ಕೆ ಖುಷಿ ನೀಡಿತು.

ಒಟ್ಟಿನಲ್ಲಿ ದಿನನಿತ್ಯ ಯಾಂತ್ರಿಕ ಜೀವನದಿಂದ ಬೇಸತ್ತು ದಣಿದಿದ್ದ ನಮ್ಮ ಸದಸ್ಯರಿಗೆ ಮತ್ತು ಸದಸ್ಯ ಬಂಧುಗಳಿಗೆ ಈ ಕೆಸರು ಗದ್ದೆಯ ಆಟದ ಹಳ್ಳಿಯ ಜನಪದ ಕ್ರೀಡೆಯಲಿ ಮಿಂದೆದ್ದು ಮತ್ತೆ ನಮ್ಮನ್ನು ಬಾಲ್ಯಕ್ಕೆ ಕರೆದೊಯ್ಯಿತು, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮನದ ನೋವನ್ನು ಮರೆಸಿ ಸಂತಸದ ಕಡಲಲ್ಲಿ ತೇಲಾಡಿಸಿತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!