Yuvavahini

MAY 30, 2024 2.54 PM IST

ಯುವವಾಹಿನಿ(ರಿ.) ಪುತ್ತೂರು ಘಟಕ

ವಿದ್ಯಾರ್ಥಿ ಅಭಿನಂದನೆ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ರಾಜ್ಯ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ 2023-24 ನೇ ಸಾಲಿನಲ್ಲಿ 625ಕ್ಕೆ 600ಕ್ಕಿಂತ ಅಧಿಕ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುತ್ತೂರು ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವು ದಿನಾಂಕ 30-05-2024 ರಂದು ಆಯಾಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲುಸುವ ಮೂಲಕ ವಿಶಿಷ್ಟವಾಗಿ ನಡೆಯಿತು.
ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡಿನ ಪರಕಮೆ ನಿವಾಸಿಗಳಾದ ಶ್ರೀ ಸತೀಶ್ ಪೂಜಾರಿ ಪರಕಮೆ ಹಾಗೂ ಶ್ರೀಮತಿ ರೂಪಲತಾ ಸತೀಶ್ ದಂಪತಿಗಳ ಸುಪುತ್ರನಾದ ಮೋಕ್ಷಿತ್ ಪಿ. ಎಸ್ 614 ಅಂಕಗಳನ್ನು ಗಳಿಸಿದ್ದು, ಇವರನ್ನು ಇವರ ಸ್ವಗೃಹದಲ್ಲಿ ಹೆತ್ತವರ ಹಾಗೂ ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಕೆದಂಬಾಡಿ ಗ್ರಾಮ ಸಮಿತಿಯ ಶ್ರೀ ನಾರಾಯಣ ಪೂಜಾರಿ ಕುರಿಕ್ಕಾರ ಹಾಗೂ ಶ್ರೀಮತಿ ದಿವ್ಯ ದಂಪತಿಗಳ ಸುಪುತ್ರಿ ಕು. ಸನ್ನಿಧಿ ಇವರು 610 ಅಂಕಗಳನ್ನು ಗಳಿಸಿದ್ದು ಇವರನ್ನು ಹೆತ್ತವರ ಹಾಗೂ ಬಂಧುಗಳ ಸಮ್ಮುಖದಲ್ಲಿ ಅವರ ಸ್ವಗೃಹದಲ್ಲಿ ಅಭಿನಂದಿಸಲಾಯಿತು.

ಒಳಮೊಗ್ರು ಗ್ರಾಮಸಮಿತಿಯ ಶ್ರೀ ಸತೀಶ್ ಪೂಜಾರಿ ಹಾಗೂ ಶ್ರೀಮತಿ ದಿವ್ಯಜ್ಯೋತಿ ದಂಪತಿಗಳ ಸುಪುತ್ರಿ ಕು. ಸೃಷ್ಟಿ ಇವರು 608 ಅಂಕ ಗಳಿಸಿದ್ದು, ಇವರನ್ನು ಸಹ ಅವರ ಹೆತ್ತವರ ಹಾಗೂ ಮನೆಯ ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಯುವ ವಾಹಿನಿ (ರಿ.) ಪುತ್ತೂರು ಘಟಕದ ಅಧ್ಯಕ್ಷರಾದ ಜಯರಾಮ್ ಬಿ. ಎನ್. ಸರ್ವರನ್ನೂ ಸ್ವಾಗತಿಸಿ ಮಾತಾನ್ನಾಡುತ್ತಾ ಅಧಿಕ ಅಂಕಗಳಿಸಿ ನಮ್ಮ ಸಮಾಜಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರ ವಿದ್ಯಾಸಾಧನೆಯು ಉತ್ತಮ ರೀತಿಯಲ್ಲಿ ಸಾಗಿ ಭವಿಷ್ಯದಲ್ಲಿ ಅವರು ಹೆತ್ತವರಿಗೂ, ಊರಿಗೂ, ನಮ್ಮ ಸಮಾಜಕ್ಕೂ ಒಳ್ಳೆಯ ಹೆಸರನ್ನು ತರುವಲ್ಲಿಯೂ, ಅದೇ ರೀತಿಯಲ್ಲಿ ದೇಶದಲ್ಲಿ ಸತ್ಪ್ರಜೆಯಾಗಿ ಬಾಳುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಶುಭಾರೈಸಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷರಾದ ಜಯರಾಮ ಬಿ. ಎನ್. ಉಪಾಧ್ಯಕ್ಷರಾದ ಅಣ್ಣಿ ಪೂಜಾರಿ ಚಿಕ್ಕಮುಡ್ನೂರು, ನಿಕಟಪೂರ್ವ ಅಧ್ಯಕ್ಷರಾದ ಉಮೇಶ್ ಬಾಯಾರ್, ಕಾರ್ಯದರ್ಶಿ ಶಮಿತ್ ಪರ್ಪುಂಜ, ಕೋಶಾಧಿಕಾರಿ ಶ್ರೀ ಶರತ್ ಕೈಪಂಗಳ ದೋಳ, ಘಟಕದ ಮಾಜಿ ಅಧ್ಯಕ್ಷರಾದ ಉದಯ ಪೂಜಾರಿ ಕೋಲಾಡಿ, ನಿರ್ದೇಶಕರುಗಳಾದ ದಾಮೋದರ ಸುವರ್ಣ ಶಾಂತಿಗೋಡು, ಶಿವಪ್ರಸಾದ್ ಕುಂಬ್ರ, ಹರೀಶ್ ಎಂ. ಕೆ, ಮೋಹನ್ ಶಿಬರ, ನವ್ಯದಾಮೋದರ್ ಶಾಂತಿಗೋಡು, ಕೋಚಣ್ಣ ಪೂಜಾರಿ ಎಂಡೆಸಾಗು, ಬಾಳಪ್ಪ ಸುವರ್ಣ ಬಾಲಯ, ವಸಂತ ಪೂಜಾರಿ ಕಲ್ಲರ್ಪೆ, ಕು. ವೈಷ್ಣವಿ ಶಾಂತಿಗೋಡು ಹಾಗೂ ಎಲ್ಲಾ ವಿದ್ಯಾರ್ಥಿಗಳ ಹೆತ್ತವರು ಹಾಗೂ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!