ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ - 2016

ಬಿಲ್ಲವ ಎಸೋಸಿಯೇಶನ್ ಬೆಂಗಳೂರು ಸಂಸ್ಥೆಗೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ – 2016

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಪುರಭವನದಲ್ಲಿ ದಿನಾಂಕ 31.07.2016 ರಂದು ಜರುಗಿದ ಯುವವಾಹಿನಿಯ 29ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆ ಗುರುತಿಸಿ ಬಿಲ್ಲವ ಎಸೋಸಿಯೇಶನ್ ಬೆಂಗಳೂರು ಸಂಸ್ಥೆಗೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ 2016 ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅದ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ,ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ,ಮುಂಬಯಿ ಬಿಲ್ಲವ ಜಾಗೃತಿ ಬಳಗದ ಅದ್ಯಕ್ಷರಾದ ಎನ್.ಟಿ.ಪೂಜಾರಿ ಮುಂಬಯಿ, ಉದ್ಯಮಿ ಸಂತೋಷ್ ಪೂಜಾರಿ ಉಗ್ಗೆಲ್ ಬೆಟ್ಟು,  ನಾವುಂದ ಸುಭೋದ ಸ್ಕೂಲ್ ಸಂಸ್ಥಾಪಕರಾದ ಎನ್.ಕೆ.ಬಿಲ್ಲವ ನಾವುಂದ,  ಮೂಡಬಿದ್ರೆ ಎಕ್ಸಲೆಂಟ್ ಪಿ.ಯು.ಕಾಲೇಜು ಉಪನ್ಯಾಸಕರಾದ ಡಾ.ನವೀನ್ ಕುಮಾರ್ ಸೂರಿಂಜೆ, ಯುವವಾಹಿನಿ ಕೇಂದ್ರ ಸಮಿತಿ ಅದ್ಯಕ್ಷರಾದ ಸಂತೋಷ್ ಕುಮಾರ್, ಸಮಾವೇಶ ನಿರ್ದೇಶಕರಾದ ಪ್ರವೀಣ್ ಕುಮಾರ್  ,  ಪ್ರಧಾನ   ಕಾರ್ಯದರ್ಶಿ ಕೇಶವ ಸುವರ್ಣ ಉಪಸ್ಥಿತರಿದ್ದರು.

’ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ’ ಪುರಸ್ಕೃತ ಬಿಲ್ಲವ ಎಸೋಸಿಯೇಶನ್ ಬೆಂಗಳೂರು

1975 ರಲ್ಲಿ ಕೆಲವೇ ಮಂದಿ ಹಿರಿಯರಿಂದ ಬೆಂಗಳೂರಿನಲ್ಲಿ ಶ್ರೀ ಸುಂದರ್‌ರವರ ಕೆನರಾ ವಾಚ್ ವರ್ಕ್ಸ್ ಆವರಣದಲ್ಲಿ ಆರಂಭವಾದ ಬಿಲ್ಲವ ಸಮಾಜದ ಸಂಘಟನೆ ಬಿಲ್ಲವ ಎಸೋಸಿಯೇಶನ್ ಬೆಂಗಳೂರು ಸಂಸ್ಥೆಯು 1976 ರಲ್ಲಿ ನೋಂದಾಯಿತ ಗೊಂಡಿತು. ಮುಂದೆ ಹಂತಹಂತವಾಗಿ ಬೆಳೆದು 40 ವರ್ಷಗಳ ಸಾರ್ಥಕ ಸೇವೆ, ಸಾಧನೆಯ ಪ್ರತೀಕವಾಗಿ ಬಿಲ್ಲವ ಭವನವನ್ನು ತನ್ನ ಸ್ವಂತ ನೆಲೆಯಲ್ಲಿ ಕಂಡುಕೊಂಡಿದೆ. ಬ್ರಹ್ಮಶ್ರೀ ನಾರಾಯಣಗುರುಗಳ ವಿಶ್ವಮಾನವ ತತ್ವದ ಬೆಳಕಲ್ಲಿ ಬಿಲ್ಲವ ಸಮಾಜದ ಸಂಘಟನಾತ್ಮಕ ಅಭಿವೃದ್ಧಿಗೆ ದುಡಿಯುತ್ತಿದೆ.

ಶಿಕ್ಷಣ: ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಪ್ರಸ್ತುತ ವಾರ್ಷಿಕ 5-8 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಿ ಸಹಕರಿಸುತ್ತಿದೆ. ಸಂಘದ ಆವರಣದಲ್ಲಿ ಸಹೃದಯಿ ಸದಸ್ಯರ ಸಹಕಾರದಿಂದ ಸುಮಾರು 1.25 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಮಾಡಿ ಸುಮಾರು ವಾರ್ಷಿಕ 30 ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿಯ ವ್ಯವಸ್ಥೆ ಮಾಡಿರುವುದಲ್ಲದೆ ಪ್ರತಿ ವರ್ಷ ಅವರಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ.

ಆರೋಗ್ಯ: ಆರ್ಥಿಕವಾಗಿ ಹಿಂದುಳಿದ ಸದಸ್ಯರು ಅವರ ಅವಲಂಭಿತರಿಗೆ ಅಗತ್ಯವಾದಾಗ ಚಿಕಿತ್ಸೆಗೆ ಸಹಕರಿಸುವುದು, ವರ್ಷಂಪ್ರತಿ ಆರೋಗ್ಯ ತಪಾಸಣಾ ಶಿಬಿರ ನಡೆಸುವುದು, ಉಚಿತವಾಗಿ ಔಷಧಿಯನ್ನು ವ್ಯವಸ್ಥೆಗೊಳಿಸುವಂತಹ ವೈದ್ಯಕೀಯ ವಿಭಾಗ ಕಾರ್ಯಾಚರಣೆ ನಿರಂತರ ನಡೆಯುತ್ತಿದೆ.

ಸಂಘಟನೆ: ಸುಮಾರು 100 ಕ್ಕೂ ಮಿಕ್ಕಿದ ಯುವ ಸದಸ್ಯರನ್ನೊಳಗೊಂಡ ಸೇವಾದಳ, ಮಹಿಳಾ ವಿಭಾಗ, ವಧು-ವರಾನ್ವೇಷಣಾ ಘಟಕ ಇತ್ಯಾದಿಗಳನ್ನು ಆರಂಭಿಸಿ ಸಾಮೂಹಿಕ ಕಾರ್ಯಕ್ರಮ ಜರಗುತ್ತಿವೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಸುಧಾರಣಾ ಹಾಗೂ ಸ್ಫೂರ್ತಿದಾಯಕ ಕಾರ್ಯಕ್ರಮಗಳ ಕೇಂದ್ರವಾಗಿ ಗುರುಮಂದಿರ ಕಾರ್ಯಾಚರಿಸುತ್ತಿದೆ. ಹಾಗೆಯೇ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಳ ಹಾಗೂ ಅವರ ಕಾರ್ಯಕ್ಷೇತ್ರಗಳಾದ ಶಿವಗಿರಿ, ವರ್ಕಳ, ಅರವೀಪುರಂಗಳ ದರ್ಶನ, ಸದಸ್ಯರ ಕುಟುಂಬ ಸದಸ್ಯರುಗಳ ಸಂಪರ್ಕ ಬಲಪಡಿಸುವರೇ ಏಕದಿನ ಪ್ರವಾಸ, ಸಂತೋಷ ಕೂಟ, ಕ್ರೀಡಾಕೂಟ ನಡೆಸಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಪ್ರತಿಭಾವಂತ ಕ್ರೀಡಾಪಟುಗಳನ್ನು ಸನ್ಮಾನಿಸುವುದು ನಿರಂತರವಾಗಿ ನಡೆಯುತ್ತಿರುತ್ತವೆ. ಹಾಗೆಯೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಕ್ಷಗಾನದಂತಹ ಕಲೆಯ ಅಭ್ಯಾಸವನ್ನು ಮಕ್ಕಳಿಗೆ ಸಂಸ್ಥೆಯು ನೀಡುತ್ತಿದೆ.

ಸ್ಪಾರ್ಕ್ (ವೃತ್ತಿಪರ ಘಟಕ): ಈ ನೆಲೆಯಲ್ಲಿ ವಿದ್ಯಾವಂತ ಯುವಕರಿಗೆ ಉದ್ಯೋಗ ಪಡೆಯಲು ಮಾಹಿತಿ ಸೌಲಭ್ಯ ಒದಗಿಸುವುದು, ವ್ಯಕ್ತಿತ್ವ ವಿಕಸನದಂತಹ ಶಿಬಿರಗಳನ್ನು ನಡೆಸುತ್ತಿದ್ದು ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಸಂಘಟನೆಯಲ್ಲಿ ವಿವಿಧ ಸಲಹಾ ಸಮಿತಿಗಳು, ಉಪಸಮಿತಿಗಳು ಕಾರ್ಯಾಚರಿಸುತ್ತಿದ್ದು ಸಂಘದ ಬೆಳವಣಿಗೆಗೆ ಸಹಕರಿಸುತ್ತಿವೆ. ಸಂಘದ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ಸುಮಾರು 17 ಕೋಟಿ ರೂಪಾಯಿ ವೆಚ್ಚದಿಂದ ನಿರ್ಮಿಸಲಾದ ಭವ್ಯ ಕಟ್ಟಡ ಬಿಲ್ಲವ ಭವನವು ಸುಮಾರು 1200 ಆಸನಗಳುಳ್ಳ ಹವಾನಿಯಂತ್ರಿತ ಸುಸಜ್ಜಿತ ಸಮುದಾಯ ಭವನ, ಬ್ಯಾಂಕ್‌ಗಳ ಎಟಿಎಮ್, ಎಕ್ಸೆಟೆನ್‌ಶನ್ ಕೌಂಟರುಗಳು ಎಪ್ರಿಲ್ 2016 ರಿಂದ ಕಾರ್ಯಾಚರಿಸುತ್ತಿವೆ. ವಿವಿಧ ಮಹನೀಯರುಗಳ, ಸಂಘ-ಸಂಸ್ಥೆಗಳ, ಬ್ಯಾಂಕಿನ, ದಾನಿಗಳ ಆರ್ಥಿಕ ನೆರವಿನಿಂದ ನಿರ್ಮಾಣಗೊಂಡು ವ್ಯವಹರಿಸುತ್ತಿರುವ ಈ ಮಹಾಕಟ್ಟಡವು ಪ್ರಸ್ತುತ ಅಧ್ಯಕ್ಷರಾದ ಶ್ರೀ ಎಮ್. ವೇದಕುಮಾರ್ ಹಾಗೂ ಅವರ ತಂಡದ ಶ್ರದ್ಧಾಮಯ ಶ್ರಮವನ್ನು ಸಾಕ್ಷೀ ಸಮೇತ ಸಾರುತ್ತದೆ.

1975 ರಲ್ಲಿ ಶ್ರೀ ಎಂ.ಆರ್. ಸುವರ್ಣ ಸ್ಥಾಪಕಾಧ್ಯಕ್ಷರಾಗಿ ಕಾರ್ಯಾಚರಣೆ ಆರಂಭವಾಗಿ ಮುಂದೆ ಶ್ರೀಯುತ ಯು. ಭೋಜರಾಜ್, ಶ್ರೀ ಬಿ.ಟಿ. ಸಾಲಿಯಾನ್, ಶ್ರೀ ವಸಂತ, ಡಾ. ಅನಸೂಯ ಸಾಲಿಯಾನ್, ಶ್ರೀ ಸೋಮಶೇಖರ ಅಮೀನ್, ಶ್ರೀ ವಾಸುದೇವ ಕೋಟ್ಯಾನ್, ಶ್ರೀ ಎಂ. ಪ್ರಕಾಶ್, ಶ್ರೀ ಕೆ. ಸುವರ್ಣ, ಶ್ರೀ ಪಿತಾಂಬರ ಹೆರಾಜೆ ಹಾಗೆಯೇ ಪ್ರಸ್ತುತ ಅಧ್ಯಕ್ಷರಾದ ಶ್ರೀ ಎಂ. ವೇದಕುಮಾರ್‌ರಂತಹ ಧೀಮಂತ ನಾಯಕರ ನಿರಂತರ ಶ್ರಮ, ಸೇವೆ, ದೂರಗಾಮಿ ಚಿಂತನೆಯೊಂದಿಗಿನ ರಚನಾತ್ಮಕ, ಅಭಿವೃದ್ದಿಪರ ಕಾರ್ಯಾಚರಣೆ ಬಿಲ್ಲವ ಎಸೋಸಿಯೇಶನ್, ಬೆಂಗಳೂರು ಇದರ ಬೆಳವಣಿಗೆಯಲ್ಲಿ ಮೈಲಿಗಲ್ಲಾಗಿವೆ. ಮುಂದೆಯೂ ಸಮಾಜದ ಅಭಿವೃದ್ಧಿಯ ಮಹದುದ್ದೇಶದಿಂದ ಅನೇಕ ಯೋಚನೆಗಳು ಯೋಜನೆಗಳು ಸಂಘದಲ್ಲಿದ್ದು ಬ್ರಹ್ಮಶ್ರೀ ನಾರಾಯಣಗುರುವರ್ಯರು ಈ ಸಂಘವನ್ನು ಇನ್ನೂ ಬೆಳೆಸುವಲ್ಲಿ ಸಂಘದ ಅಧ್ಯಕ್ಷ ಹಾಗೂ ಸರ್ವಸದಸ್ಯರುಗಳಿಗೆ ಹರಸಲೆಂದು ಆಶಿಸುತ್ತಾ ಬಿಲ್ಲವ ಎಸೋಸಿಯೇಶನ್ ಬೆಂಗಳೂರು (ರಿ) ಈ ಸಂಸ್ಥೆಯನ್ನು ಅದರ ಶ್ರದ್ಧಾಮಯ ಸಾಧನೆಗಳನ್ನು ಗುರುತಿಸಿ ಯುವವಾಹಿನಿ ’ಸಾಧನ ಶ್ರೇಷ್ಠ ಪ್ರಶಸ್ತಿ’ ನೀಡಿ ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ತನ್ನ ೨೯ನೇ ವಾಷಿಕ ಸಮಾವೇಶದ ಈ ಶುಭದಿನ, ಶುಭವಸರದಲ್ಲಿ ಗೌರವಿಸುತ್ತದೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!