ಶಕ್ತಿನಗರ:- ಯುವವಾಹಿನಿ ಶಕ್ತಿನಗರ ಘಟಕದ ವತಿಯಿಂದ ಯುವವಾಹಿನಿಯ ಮುಖ್ಯ ಧ್ಯೇಯಗಳಲ್ಲಿ ಒಂದಾದ “ಸಂಪರ್ಕ” ಎಂಬ ಪದಕ್ಕೆ ಅರ್ಥ ಬರುವಂತೆ ಘಟಕದ ಸದಸ್ಯರು ಸೇರಿ ಒಂದು ದಿನದ ಕಿರು ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸುಮಾರು 24 ಸದಸ್ಯರ ತಂಡವು ತಾರೀಕು 05 ನವೆಂಬರ್ 2022ರಂದು ಸಂಜೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ ಕೋಯoಬುತ್ತೂರು ತಲುಪಿ ಆಲ್ಲಿಂದ ಮಾರುತಮಲೈ ಷಣ್ಮುಗ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಾಯಿತು.
ನಂತರ ಸುಮಾರು 2000 ವರ್ಷಗಳ ಹಿಂದಿನ ಕಾಲದ ಶಿವಂ ದೇವಸ್ಥಾನ ಪೇರುರು ಮತ್ತು ಅಲ್ಲಿನ ವಾಸ್ತುಶಿಲ್ಪಕಲೆಯನ್ನು ವೀಕ್ಷಿಸಲಾಯಿತು. ನಂತರ ಕೋವಿ ಕುಲಯಿ ಎಂಬಲ್ಲಿನ ದಟ್ಟಾರಣ್ಯದಲ್ಲಿ ಫಾರೆಸ್ಟ್ ಬಸ್ಸಲ್ಲಿ ತೆರಳಿ ಸುಮಾರು 1 km ದೂರದಿಂದ ಕಾಲ್ನಡಿಗೆಯಲ್ಲಿ ಫಾಲ್ಸ್ ವೀಕ್ಷಿಸಿ , ನಂತರ ಮೈ ಜುಮ್ಮೆನ್ನುವ ಧ್ಯಾನಮಂದಿರದ ಆಳವಾದ ನೀರಲ್ಲಿ ದೇವರ ಮೂರ್ತಿಯನ್ನು ಮುಟ್ಟಿ ವೀಕ್ಷಿಸಿ ಈಶ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿ ಅಲ್ಲಿನ ಲೇಸರ್ ಕಿರಣದ ಸವಿಯನ್ನು ಕಣ್ತುಂಬ ಸವಿದು ಪರಿಸರ ವೀಕ್ಷಿಸಿ, ಅಲ್ಲಿಯೇ ಭೋಜನ ಮುಗಿಸಿ ತದನಂತರ ರೈಲ್ವೆ ಸ್ಟೇಷನ್ ಗೆ ಪಯಣ ಬೆಳೆಸಿ ಮರುದಿನ ಬೆಳಿಗ್ಗೆ 5.00 ಕ್ಕೆ ಮಂಗಳೂರು ರೈಲ್ವೆ ನಿಲ್ದಾಣ ತಲುಪುಲಾಯಿತು. ಸಹಕಾರ ಕೊಟ್ಟ ಎಲ್ಲರಿಗೂ ಘಟಕದ ಅಧ್ಯಕ್ಷರಾದ ಜಯರಾಮ್ ಧನ್ಯವಾದಗೈದರು.