ಕೊಲ್ಯ :- ಯುವವಾಹಿನಿ (ರಿ.) ಕೊಲ್ಯ ಘಟಕದ 2022-23 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 14 ಆಗಸ್ಟ್ 2022 ರಂದು ಬ್ರಹ್ಮಶ್ರೀ ನಾರಾಯಣಗುರು ಸಭಾ ಮಂದಿರ ಕೊಲ್ಯದಲ್ಲಿ ಜರಗಿತು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್ ಕೊಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚುನಾವಣಾಧಿಕಾರಿ ಮತ್ತು ಕೊಲ್ಯ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ರವಿ ಕೊಂಡಾಣ 2022-23 ನೇ ಸಾಲಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೇರವೇರಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರಿನ ಅಧ್ಯಕ್ಷರಾದ ಶ್ರೀ ಉದಯ್ ಅಮೀನ್ ಮಟ್ಟು ಪ್ರತಿಜ್ಞಾ ವಿಧಿ ಬೋಧಿಸಿದರು. ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ, ನಾರಾಯಣ ಗುರು ಮಹಿಳಾ ಮಂಡಳಿ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ರವರಿಗೆ ಅರುಣಾಭಿನಂದನಾ ಭಸಮಾರಂಭವನ್ನು ಏರ್ಪಡಿಸಲಾಗಿತ್ತು. ತದನಂತರ ಡಾ.ಅರುಣ್ ಉಳ್ಳಾಲ್ ಅಭಿನಂದನಾ ಗೌರವಕ್ಕೆ ಆಶಯದ ನುಡಿಗಳನ್ನಾಡಿದರು.
ಶ್ರೀ ಮಹೇಶ್ ಕುಮಾರ್ ಎಸಿಪಿ, ಪಣಂಬೂರು ಮಂಗಳೂರು ಉತ್ತರ, ಹೈಕೋರ್ಟ್ ವಕೀಲರಾದ ಶ್ರೀಮತಿ ರಾಜಲಕ್ಷ್ಮಿ ಡಿ ಸುವರ್ಣ ಮತ್ತು ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಚಿನ್ನದ ಪದಕ ಪುರಸ್ಕೃತರಾದ ಶ್ರೀ ಶ್ರವಣ್ ಅಗ್ರಬೈಲು ಬಂಟ್ವಾಳ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾರಂಭಕ್ಕೆ ಶುಭನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರ ನೆಲೆಯಲ್ಲಿ ಶ್ರೀ ಉದಯ ಅಮೀನ್ ಮಟ್ಟು ಇವರನ್ನು ಅಭಿನಂದಿಸಲಾಯಿತು. ಯುವವಾಹಿನಿ (ರಿ.) ಕೊಲ್ಯ ಘಟಕದ ಕೊಂಡಾಟದ ಬಾಲೆ ಮತ್ತು ಹಣತೆ ಬೆಳಗಿದ ಅಂದದ ತುಳಸಿಕಟ್ಟೆ ಸ್ಪರ್ಧೆಗೆ ತೀರ್ಪುಗಾರರಾಗಿ ಸಹಕರಿಸಿದ ಶ್ರೀ ಶ್ರವಣ್ ಅಗ್ರಬೈಲು ಬಂಟ್ವಾಳರವರನ್ನು ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಯುವವಾಹಿನಿ (ರಿ.) ಕೊಲ್ಯ ಘಟಕದ ಸದಸ್ಯರ ಮಕ್ಕಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರಿನ ಆಶ್ರಯದಲ್ಲಿ, ಯುವವಾಹಿನಿ (ರಿ.) ಉಡುಪಿ ಘಟಕದ ಆತಿಥ್ಯದಲ್ಲಿ ನಡೆಯಲಿರುವ ಡೆನ್ನನ ಡೆನ್ನನ-2022 ರ ಸಾಹಿತ್ಯ ಸೌರಭದ ಪೂರ್ವಭಾವಿಯಾಗಿ ಜರಗಿದ ರೇಖಾಚಿತ್ರ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಯುವವಾಹಿನಿ (ರಿ.) ಸುಳ್ಯ ಘಟಕದ ಮಾಜಿ ಅಧ್ಯಕ್ಷರು ಅದೇ ರೀತಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ದಿ.ಪ್ರವೀಣ್ ನೆಟ್ಟಾರು ಕುಟುಂಬ ವರ್ಗಕ್ಕೆ ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ರೂ.5,000/-. ಧನಸಹಾಯವನ್ನು,ಕೊಲ್ಯ ಘಟಕದ ಅಧ್ಯಕ್ಷರಾದ ಮೋಹನ್ ಮಾಡೂರು ಇವರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರ ಮೂಲಕ ಹಸ್ತಾಂತರಿಸಲಾಯಿತು. ಯುವವಾಹಿನಿ ಕೊಲ್ಯ ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀ ಸುರೇಶ್ ಬಿಲ್ಲವ ಮತ್ತು ಯುವವಾಹಿನಿ ಕೊಲ್ಯ ಘಟಕದ 2021-22 ನೇ ಸಾಲಿನ ಅಧ್ಯಕ್ಷರಾದ ಶ್ರೀ ಮೋಹನ್ ಮಾಡೂರುರವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಕೊಲ್ಯ ಸೋಮೇಶ್ವರ ಇದರ ನೂತನ ಬಿಲ್ಲವ ಸಮುದಾಯ ಭವನಕ್ಕೆಂದು ಖರೀದಿಸಿದ ಸ್ವಂತ ಸ್ಥಳಕ್ಕೆ ಯುವವಾಹಿನಿ ರಿ ಕೊಲ್ಯ ಘಟಕದ ವತಿಯಿಂದ ರೂ.70,000/-ದ ದೇಣಿಗೆಯನ್ನು ಚೆಕ್ ಮುಖಾಂತರ ಈ ಸಂದರ್ಭದಲ್ಲಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಕೊಲ್ಯ ಇದರ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್ ಕೊಲ್ಯ ರವರಿಗೆ ಹಸ್ತಾಂತರಿಸಲಾಯಿತು.
ಯುವವಾಹಿನಿ ಕೊಲ್ಯ ಘಟಕದ ಶಾಶ್ವತ ವಿದ್ಯಾ ನಿಧಿ ಯೋಜನೆಗೆ ರೂ.25,000/- ದ ಚೆಕ್ಕನ್ನು ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಕೊಲ್ಯ ಘಟಕದ ಶಾಶ್ವತ ವಿದ್ಯಾನಿಧಿ ಯೋಜನೆಯ ಕೋಶಾಧಿಕಾರಿಯಾದ ರಘುರಾಮ ಸುವರ್ಣ ಇವರಿಗೆ ಹಸ್ತಾಂತರಿಸಿದರು. ಯುವವಾಹಿನಿ ಕೊಲ್ಯ ಘಟಕದ ನೂತನ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಮೋಹನ್ ಮಾಡೂರು ಸಭಾಧ್ಯಕ್ಷತೆಯ ಭಾಷಣಗೈದರು. ಘಟಕದ ಅಧ್ಯಕ್ಷರಾದ ಮೋಹನ್ ಮಾಡೂರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಲತೀಶ್ ಎಂ ಸಂಕೋಳಿಗೆ ಪ್ರಸ್ತಾವನೆಗೈದರು. ಕಾರ್ಯದರ್ಶಿ ಶಿರಲ್ ಕೊಲ್ಯ ವಾರ್ಷಿಕ ವರದಿಯನ್ನು ಮಂಡಿಸಿದರು. ಸದಸ್ಯರ ಮಕ್ಕಳಾದ ಕು.ಭೂಮಿಕ, ಯಶಿಕ, ಉನ್ನತಿ ಪ್ರಾರ್ಥನೆಗೈದರು. ಅರುಣಾಭಿನಂದನ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷರಾದ ಕುಸುಮಾಕರ ಕುಂಪಲ ಇವರು ನೆರವೇರಿಸಿದರು,ಮಾಜಿ ಅಧ್ಯಕ್ಷರಾದ ಆನಂದ ಮಲಯಾಲಕೋಡಿ ಇವರು ಅಭಿನಂದನಾ ನುಡಿ ವಾಚಿಸಿದರು.ನೂತನ ಕಾರ್ಯದರ್ಶಿ ನಿತಿನ್ ಕರ್ಕೇರ ಧನ್ಯವಾದ ಸಮರ್ಪಿಸಿದರು. ಘಟಕದ ಸದಸ್ಯರಾದ ಜಗಜೀವನ್ ಕೊಲ್ಯ ಮತ್ತು ಮುಕೇಶ್ ಕಿನ್ಯ ಕಾರ್ಯಕ್ರಮ ನಿರೂಪಿಸಿದರು