ಕೊಲ್ಯ :- ದಿನಾಂಕ 26 ಜುಲೈ 2022 ರ ಗುರುವಾರದಂದು ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಸೋಮೇಶ್ವರ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕ ಇದರ ಆಶ್ರಯದಲ್ಲಿ ಧಾರ್ಮಿಕ ಶಿಕ್ಷಣ ಪದ್ಧತಿ ಹಾಗೂ ಭಜನಾ ತರಬೇತಿ ಕಮ್ಮಟವು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ದಲ್ಲಿ ಗುರುಗಳಾದ ಡಾ. ಅರುಣ್ ಉಳ್ಳಾಲ್ ರವರಿಂದ ಓಂಕಾರದೊಂದಿಗೆ ಆರಂಭಗೊಂಡು ಗಣಪತಿ ಸ್ತುತಿ, ಗುರುಸ್ತುತಿ ಮುಖೇನ ತರಗತಿಯನ್ನು ಪ್ರಾರಂಭಿಸಲಾಯಿತು. ಗಣಪತಿ ಭಜನೆಯನ್ನು ಎಲ್ಲಾ ವಿದ್ಯಾರ್ಥಿಗಳು ಸೇರಿ ಹಾಡಿದರು.ತುಳುವಿನ 12 ತಿಂಗಳುಗಳ ಹೆಸರನ್ನು ವಿದ್ಯಾರ್ಥಿಗಳು ಕಂಠಪಾಠವಾಗಿ ಹೇಳಿದರು. ಹೊಸ ವಿಷಯವಾಗಿ, ತುಳು ತಿಂಗೊಲು ,ಆರತಿ ಸ್ವೀಕಾರ , ಆಟಿ ನಿಷೇಧ ಸ್ಪಷ್ಟೀಕರಣ , ಆರತಿ ಮಾಡಿ ಆರತಿ ಸ್ವೀಕಾರ , ಕುಂಕುಮ ಸ್ವೀಕಾರ , ಆಟಿ ತಿಂಗಳ ಮಹತ್ವ , ಆಟಿ ಅಮವಾಸೆ ದಿನ ಹಾಲೇ ಮರದ ತೊಗಟೆ ತೆಗೆಯುವ ಬಗ್ಗೆ
ಇಂದಿನ ತರಗತಿಯಲ್ಲಿ ಗುರುಗಳು ತಿಳಿಸಿಕೊಟ್ಟರು. ಈ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡವರಿಗೆ ಆರತಿ ಬೆಳಗಿ ಶುಭ ಹಾರೈಸಲಾಯಿತು. ತರಗತಿಯ ಕೊನೆಯ ಭಾಗವಾಗಿ ಸಂವಾದ ನಡೆಯಿತು. ಶಾಂತಿ ಮಂತ್ರದೊಂದಿಗೆ ತರಗತಿ ಮಂಗಳವಾಯಿತು. ಪಾನಕದ ಸೇವೆಯನ್ನು ಇಂದು ಹುಟ್ಟು ಹಬ್ಬ ಆಚರಿಕೊಂಡ ಮಾ| ಮನಿತ್ ಪ್ರಸಾದ್ ಇವರು ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು