ಬಂಟ್ವಾಳ ತಾಲೂಕಿನ ನಾವೂರು ಹಳೆಗೇಟು ಬಳಿ ಗುರುವಾರ ರಾತ್ರಿ ಅಮಾಯಕ ಯುವಕ ಹರೀಶ್ ಪೂಜಾರಿಯನ್ನು ಹತ್ಯೆ ಮಾಡಿರುವುದು ಕ್ರೂರ ಹಾಗೂ ಸಹಿಸಲಸಾಧ್ಯವಾದ ಉಗ್ರ ಕೃತ್ಯ ಹಾಗೂ ಅಮಾಯಕ ಹರೀಶ್ ಪೂಜಾರಿಯನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಶೀಘ್ರದಲ್ಲಿ ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ರಾಜೇಶ್ ಸುವರ್ಣ ತಿಳಿಸಿದ್ದಾರೆ.
ದಿನಾಂಕ 15-11-2015 ನೇ ಆದಿತ್ಯವಾರದಿಂದ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಸುಮಾರು 40 ಸದಸ್ಯರು ಮೃತ ಹರೀಶ ಪೂಜಾರಿ ಮನೆಗೆ ತೆರಳಿ ಸಾಂತ್ವಾನ ಹೇಳಿ ಯುವವಾಹಿನಿ (ರಿ) ಬಂಟ್ವಾಳ ಹಾಗೂ ಘಟಕದ ವತಿಯಿಂದ ರೂ. 20,000/- ಸಹಾಯಧನ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿಯ ಅಧ್ಯಕ್ಷ ರಾಜೇಶ್ ಸುವರ್ಣ, ಕಾರ್ಯದರ್ಶಿ ಕು| ಸುಲತಾ, ಕೋಶಾಧಿಕಾರಿ ಹರೀಶ್ ಕೋಟ್ಯಾನ್ ಕುದನೆ, ಜತೆ ಕಾರ್ಯದರ್ಶಿ ಕಿರಣ್ ಪೂಂಜೆರೆಕೋಡಿ. ಸಲಹೆಗಾರರಾದ ಬಿ.ತಮ್ಮಯ, ಅಣ್ಣು ಪೂಜಾರಿ, ಮಾಜಿ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ರಾಜೇಶ್ ಮೆಸ್ಕಾಂ, ಯೋಗೀಶ್ ಪೂಜಾರಿ ಮೆಸ್ಕಾಂ, ನಾಗೇಶ್ ಪೋನ್ನೋಡಿ, ಸದಸ್ಯರಾದ ವೀರಪ್ಪ ಎಸ್. ಪೂಜಾರಿ, ಸುಂದರ ಪೂಜಾರಿ ಮೆಲ್ಕಾರ್, ಸುನಿಲ್ ಕಾಯರ್ಮಾರ್ , ಜಗದೀಶ್ ಸುವರ್ಣ, ಸುನಿಲ್ ಸುವರ್ಣ ಮರ್ದೊಳಿ, ದಯಾನಂದ ಕೊಟ್ಯಾನ್, ಪೃಥ್ವಿರಾಜ್ ಪೂಂಜೆರೆಕೋಡಿ, ಯಶೋಧರ, ಯೋಗೀಶ್ ಸುವರ್ಣ ಅಮ್ಟಾಡಿ, ಸತೀಶ್ ಪೂಜಾರಿ ಬಾಯಿಲ, ಶಂಕರ ಪೂಜಾರಿ, ಯೋಗೀಶ್ ಕಲ್ಲಡ್ಕ, ಮೋಹನ ಎಂ, ಕಲ್ಲಡ್ಕ, ವಿಜಿತ್ ಕೊಟ್ಯಾನ್ ಉಪಸ್ಥಿತರಿದ್ದರು.