ಬಂಟ್ವಾಳ : ತುಳು ಭಾಷೆ ಮತ್ತು ಲಿಪಿಯನ್ನು ಪ್ರಚಾರ ಮಾಡುವ ಕೆಲಸ ಬಹಳ ಮುಖ್ಯ. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲು ಇಂತಹಾ ರಚನಾತ್ಮಕ ಕೆಲಸದ ಅಗತ್ಯ ಇದೆ ಎಂದು ತುಳು ಒಕ್ಕೂಟದ ಅಧ್ಯಕ್ಷ ಮಾಜಿ ಜಿ.ಪಂ.ಸದಸ್ಯ ಎ.ಸಿ.ಭಂಡಾರಿ ನುಡಿದರು.
ಅವರು ಬಿ.ಸಿ.ರೊಡ್ ಯುವವಾಹಿನಿ ಭವನದಲ್ಲಿ ಜರಗಿದ ತುಳು ಸಾಹಿತ್ಯ ಅಕಾಡಮಿ ಮತ್ತು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ತುಳು ಲಿಪಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಬಿ.ತಮ್ಮಯ್ಯನವರ 6ನೇ ತುಳು ಸಂಚಿಕೆ ’ತುಳುವೆರ್’ ತುಳು ಲಿಪಿ ಕೈಬರಹದ ಪತ್ರಿಕೆಯನ್ನು ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಬಿಡುಗಡೆಗೊಳಿಸಿದರು. ಯುವವಾಹಿನಿ ಅಧ್ಯಕ್ಷ ರಾಜೇಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತುಳು ಲಿಪಿ ಶಿಕ್ಷಕ ಬಿ.ತಮ್ಮಯ್ಯ , ಎಂ.ಡಿ.ದಿನಕರ್ ಉಪಸ್ಥಿತರಿದ್ದರು. ರಾಜೇಶ್ ಮೆಸ್ಕಾಂ ವಂದಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷ ಪ್ರೇಮ್ ನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಮಾರು 20 ಮಂದಿ ತುಳು ಲಿಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.