ಯುವವಾಹಿನಿ (ರಿ,) ಮುಲ್ಕಿ ಘಟಕದ ವತಿಯಿಂದ 14.11.2019ರಂದು ಮುಲ್ಕಿಯ ಸಿ.ಎಸ್ .ಐ ಬಾಲಿಕಾಶ್ರಮದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ವನ್ನು ಏರ್ಪಾಡಿಸಿಲಾಯಿತು.
ಘಟಾಕಧ್ಯಕ್ಷರಾದ ಸತೀಶ್ ಕಿಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮ ವನ್ನು ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ರಾದ ಲೋಕೇಶ್ ಅಮೀನ್ ರವರು ದೀಪ ಬೆಳಗಿಸಿ
ಉಧ್ಘಾಟಿಸಿದರು.
ಕಾರ್ಯ ಕ್ರಮ ದ ಪ್ರಾರಂಭದಲ್ಲಿ ಬಾಲಿಕಾಶ್ರಮದ ಮಕ್ಕಳು ಪ್ರಾರ್ಥನೆ ಗೈದರು, ಅಧ್ಯಕ್ಷರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು,
ಕಾರ್ಯ ಕ್ರಮ ವನ್ನು ಊಧ್ಘಾಟಿಸಿ ಮಾತಾನಾಡಿದ ಲೋಕೇಶ್ ಅಮೀನ್ ರು ತನ್ನ ನೆರೆಕರೆಯ ಊರಿನಲ್ಲಿ ಇಂತಹ ಒಂದು ಬಾಲಿಕಾಶ್ರಮವನ್ನು ಶಿಸ್ತು ಬದ್ಧವಾಗಿ ನಡೆಸಿಕೊಂಡು ಬರುತ್ತಿರುವುದು ಕಂಡು ಸಂತೋಷ ವಾಯಿತು. ನಾರಾಯಣ ಗುರುಗಳ ತತ್ವಾದರ್ಶ ಗಳಿಗೆ ಪೂರಕವಾಗಿ ಮುಲ್ಕಿ ಯುವವಾಹಿನಿ ಘಟಕವು ಇಲ್ಲಿನ ಮಕ್ಕಳ ಜೊತೆಯಲ್ಲಿ ಕಾರ್ಯ ಕ್ರಮ ವನ್ನು ಹಮ್ಮಿಕೊಂಡಿರುವುದು ದೇವರು ಸಂಪ್ರೀತಗೊಳ್ಳುವಂತಹ ಕಾರ್ಯ ವೆಂದರು,ಯುವವಾಹಿನಿಯ ಇಂತಹ ಕಾರ್ಯ ಗಳಿಗೆ ನಾನು ನೆರವಿನ ಹಸ್ತ ಚಾಚಲು ಸದಾ ಸಿದ್ಧ ವೆಂದರು.ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿ ಯ ದ್ವಿತೀಯ ಉಪಾಧ್ಯಕ್ಷರುಹಾಗೂ ಘಟಕದ ಮಾಜಿ ಅಧ್ಯಕ್ಷ ರಾಗಿರುವ ಉದಯ ಅಮೀನ್ ಮಟ್ಟು”ದೇಶಾದದ್ಯಂತ ನವೆಂಬರ್ 14, ನೆಹರೂ ರವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಿಕೊಂಡು ಬರುತ್ತಿರುವಾಗ ನಾವು ಹಲವಾರು ವರುಷ ಗಳಿಂದ ಈ ದಿನವನ್ನು ಈ ಬಾಲಿಕಾಶ್ರಮದ ಮಕ್ಕಳ ಜತೆಗೂಡಿ ಸಂಭ್ರಮಿಸಿಕೊಂಡು ಬಂದಿರುವುದಾಗಿ ತಿಳಿಸಿದರು ,
ಈ ಬಾಲಿಕಾಶ್ರಮದ ಪಾಲಕರು ನಾನಾ ಕಡೆಯಿಂದ ಬಂದಿರುವ ಇಲ್ಲಿನ ಮಕ್ಕಳಿಗೆ ಮನೆಯ ವಾತಾವರಣದಲ್ಲಿ ತಂದೆ ತಾಯಂದಿರಪ್ರೀತಿವಾತ್ಸಲ್ಯ ದಲ್ಲಿ ಬೆಳೆವ ಮಕ್ಕಳಿಗಿ಼ತಲೂ ಹೆಚ್ಚಿನ ಪ್ರೀತಿ ವಾತ್ಸಲ್ಯ ನೀಡಿ ಅವರ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿ ಉತ್ತಮ ಶಿಕ್ಷಣವನ್ನು ನೀಡಿ ದೇಶದ ಸತ್ಪ್ರಜೆ ಗಳಾಗಿ ರೂಪಿಸುತ್ತಿರುವುದನ್ನು ಕಂಡು ಹೆಮ್ಮೆ ಯೆನಿಸುತಿದೆಯೆಂದರು.
ಯುವವಾಹಿನಿಯ ಆಮಂತ್ರಣಕ್ಕೆ ಓಗೊಟ್ಟು ಬಂದಿರುವ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಸ್ ,ಆರ್ ಶುಭಾಸಂಸನೆಗೈದರು,
ಘಟಕದ ಕಾರ್ಯದರ್ಶಿ ಯಾಗಿರುವ ಭರತೇಶ್ ಅಮೀನ್ ಮಟ್ಟು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು, ಘಟಕದ ಮಾಜಿ ಅಧ್ಯಕ್ಷ ರಾದ ಮೋಹನ್ ಸುವರ್ಣ ರು ಕಾರ್ಯ ಕ್ರಮ ನಿರೂಪಸಿದರು,
ಬಾಲಿಕಾಶ್ರಮದ ಮಕ್ಕಳು ನೃತ್ಯ ಕಾರ್ಯ ಕ್ರಮ ವನ್ನು ನೀಡಿದರು ,
ಘಟಕದ ಮಾಜಿ ಅಧ್ಯಕ್ಷರಾಗಿರುವ ಜಯ ಕುಮಾರ್ ಕುಬೆವೂರು ರವರು ಮಕ್ಕಳಿಗೆ ವಿವಿಧ ರೀತಿಯ ಸ್ವರ್ಧೆಗಳನ್ನು ನಡೆಸಿದರು ,
ಸ್ವರ್ಧೆಯ ನಂತರ ವಿಜೇತರಿಗೆ ಬಹುಮಾ ನೀಡುವ ಕಾರ್ಯ ಕ್ರಮ ಜರಗಿತು,
ತನ್ನ ಪುತ್ರ ನ ಹುಟ್ಟು ಹಬ್ಬದ ಪ್ರಯುಕ್ತ ಇಂದಿನ ಕಾರ್ಯ ಕ್ರಮ ದ ಮಕ್ಕಳ ಜೊತೆಗಿನ ಸಹಭೋಜನದ ಪ್ರಯೋಜಕತ್ವವನ್ನು ವಹಿಸಿ ಕೊಂಡಿರುವ ಲೋಕೇಶ್ ಅಮೀನ್ ಹೆಜಮಾಡಿ ಹಾಗೂ ಶ್ರೀ ಮತಿ ನಿರ್ಮಲ ಲೋಕೇಶ್ ಅಮೀನ್ ದಂಪತಿಗಳು ಬಹುಮಾನ ವಿತರಣಾ ಕಾರ್ಯ ಕ್ರಮ ವನ್ನು ನಡೆಸಿಕೊಟ್ಟು ಮಕ್ಕಳ ಭವ್ಯ ಭವಿಷ್ಯ ಕ್ಕೆ ಶುಭಹಾರೈಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಯಾಗಿರುವ ಪ್ರದೀಪ್ ಎಸ್ ,ಆರ್ ರವರು ದೇವಸ್ಥಾನ ಕ್ಕೆ ತೆರಳಿ ದೇವರ ಅರ್ಚನೆ ಮಾಡಿ ಸಂತೃಪ್ತಿ ಪಡುವಂತೆ ಇಂತಹ ಮಕ್ಕಳ ಜತೆಗೂಡಿ ನಡೆಸುವ ಕಾರ್ಯ ಕ್ರಮ ಮನಕೆ ಸಂತೃಪ್ತಿ ನೀಡಬಹುದು .ಅಂತಹ ಸಂತೃಪ್ತ ಭಾವ ಈ ಕಾರ್ಯ ಕ್ರಮ ದಿಂದ ನನಗಾಯಿತೆಂದರು.
ಸಂಸ್ಥೆಯ ಮುಖ್ಯಸ್ಥೆ ರೆ.ಶಾಂತಿ ಯವರು ಯುವವಾಹಿನಿ ಘಟಕದ ಸಮಾಜ ಮುಖಿ ಕಾರ್ಯ ಕ್ರಮ ಗಳ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿ ಯುವವಾಹಿನಿ ಸಂಸ್ಥೆಯು ಮುಂದೆಯೂ ಇನ್ನಷ್ಟು ಉತ್ತಮ ಕಾರ್ಯ ಕ್ರಮ ವನ್ನು ನೀಡುತ್ತಾ ಬೆಳೆದು ಬರಲಿ ಯೆಂಬ ಆಶಯ ದ ನುಡಿಯನ್ನಿತ್ತರು.ಬಾಲಿಕಾಶ್ರಮದ ಮಕ್ಕಳು ಕಾರ್ಯ ಕ್ರಮ ದ ಬಗ್ಗೆ ತಮ್ಮ ಅನಿಸಿಕೆ ಗಳನ್ನು ವ್ಯಕ್ತ ಪಡಿಸಿದರು.
ಘಟಾಕಧ್ಯಕ್ಷರಾದ ಸತೀಶ್ ಕಿಲ್ಪಾಡಿಯವರುಕಾರ್ಯಕ್ರಮಕ್ಕೆ ಸಹಾಯ ಸಹಕಾರ ದ ನೆರವು ನೀಡಿದ ಮಹನೀಯರಿಗೆ ಕೃತಜ್ಞತೆ ಯ ನುಡಿ ಸಮರ್ಪಿಸಿದರು.
ಬಹುಮಾನ ವಿತರಣಾ ಕಾರ್ಯ ಕ್ರಮ ದಲ್ಲಿ ವಿಧ್ಯಾರ್ಥಿ ಸಂಘಟನಾ ನಿರ್ದೆಶಕಿಯಾಗಿರುವ ಜಾಹ್ನವಿ ಮೋಹನ್ ಸುವರ್ಣ .ಕಾರ್ಯದರ್ಶಿ ಭರತೇಶ್ ಅಮೀನ್ ಮಟ್ಟು ಉಪಸ್ಥಿತರಿದ್ದರು
ಕಾರ್ಯ ಕ್ರಮ ದ ನಂತರ ಬಾಲಿಕಾಶ್ರಮದ ಮಕ್ಕಳೊಂದಿಗೆ ಸಹಭೋಜನ ನಡೆಯಿತು ,