ಯುವವಾಹಿನಿ (ರಿ.) ಮುಲ್ಕಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮ ವಾಗಿರುವ ” ತುಳುವೆರೆ ತುಡರ ಪರ್ಬ” ಕಾರ್ಯಕ್ರಮ ದಿನಾಂಕ 26.10 .2019 ರಂದು ಸಂಜೆ 6 .30ಕ್ಕೆ ಸರಿಯಾಗಿ ನಮ್ಮ ಘಟಕದ ಅಧ್ಯಕ್ಷ ರಾದ ಸತೀಶ್ ಕಿಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಮುಲ್ಕಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಜರಗಿತು.
ಸಭಾಕಾರ್ಯಕ್ರಮದ ಪ್ರಾರಂಭದಲ್ಲಿ ವರುಣ್ ಪೂಜಾರಿ ಯವರು ಪ್ರಾರ್ಥನೆ ಗೈದರು. ಅಧ್ಯಕ್ಷ ರಾದ ಸತೀಶ್ ಕಿಲ್ಪಾಡಿಯವರು ಬಂದ ಅತಿಥಿ ಗಣ್ಯ ರಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾಗತ ಕೋರಿ ಅತಿಥಿ ವರ್ಯರನ್ನು ಶಾಲು ಹಾಗೂ ತಾಂಬೂಲ ನೀಡಿ ಸ್ವಾಗತಿಸಿದರು . ಮಾಜಿ ಅಧ್ಯಕ್ಷ ರಾದ ರಮೇಶ ಬಂಗೇರ ರವರು ಪ್ರಸ್ತಾವನೆ ಗೈದರು,
ತುಡರಪರ್ಬ ಕಾರ್ಯಕ್ರಮ ದ ಉಧ್ಘಾಟನೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾದ ರಾಜೀವ ಪೂಜಾರಿ ಯವರು ಬಲ್ಕಿ ಮರದ ದೊಂದಿ ದೀಪ ಗಳನ್ನು ಬೆಳಗಿಸುವುದರ ಮೂಲಕ ಉಧ್ಘಾಟಿಸಿದರು, ಮಾಜಿ ಅಧ್ಯಕ್ಷ ರಾದ ಜಯ ಕುಮಾರ್ ಕುಬೆವೂರು ಬಲೀಂದ್ರ ಕರೆಯ ಮೂಲಕ ಬಲೀಂದ್ರ ಪೂಜೆ ಮಾಡಲಾಯಿತು.
ಕಾರ್ಯ ಕ್ರಮ ವನ್ನು ಉಧ್ಘಾಟಿಸಿ ಮಾತನಾಡಿದ ರಾಜೀವ ಪೂಜಾರಿ ಯವರು ಇಂದು ಯುವವಾಹಿನಿ ಯಲ್ಲಿ ಹೊಸ ಹೊಸ ಘಟಕಗಳು ಪ್ರಾರಂಭಗೊಂಡು ಹೊಸ ಹೊಸ ಪರಿಕಲ್ಪನೆ ಗಳು ಮೂಡಿಬರುತಿವೆಯಾದರು ಪ್ರಾರಂಭದ ದಿನಗಳಲ್ಲಿ ಯುವವಾಹಿನಿ ಗೆ ಸಾಂಸ್ಕೃತಿಕ ವಾಗಿ ವಿನೂತನ ಪರಿಕಲ್ಪನೆ ಗಳು ಮೂಡಿ ಬಂದಿರುವುದು ಮುಲ್ಕಿ ಯುವವಾಹಿನಿ ಘಟಕದಿಂದ, ಶ್ರೀ ನಾರಾಯಣ ಗುರುವರ್ಯರ ಸಂದೇಶಕ್ಕನುಸಾರವಾಗಿ ಸರ್ವ ಧರ್ಮದವರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಆಚರಿಸುವ ತುಡರಪರ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಒದಗಿ ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಮುಲ್ಕಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಲಿಯಾಖತ್ ಆಲಿ ಮಾತನಾಡಿ ತುಡರಪರ್ಬದ ಶುಭಾಶಯಕೋರಿದರು,
ಮುಚ್ಚೂರು ಲಯನ್ಸ್ ಕ್ಲಬ್ ನ ಸ್ಥಾಪಕಧ್ಯಕ್ಷರಾದ ಲಯನ್ ಲಾಸರಸ್ ಡಿ’ಕೋಸ್ತ ರವರು ಹಿರಿಯರು ರೂಢಿಸಿಕೊಂಡು ಬಂದಿರುವ ಹಬ್ಬ ಹರಿದಿನಗಳು ಜಾತಿ ಮತ ಭೇದವಿಲ್ಲದೆ ಸಮಾಜದಲ್ಲಿ ಸಾಮರಸ್ಯ ಮಾನವೀಯ ಸಂಬಂಧಗಳನ್ನು ಬೆಸೆಯುವ ಸಾಧನವಾಗಿದೆಯೆಂದರು.
ಇನ್ನೊರ್ವ ಮುಖ್ಯ ಅತಿಥಿ ಯಾಗಿರುವ ಎಂ,ಆರ್ ,ಪೂಂಜಾ ಐಟಿಐ ತೋಕೂರು ಇಲ್ಲಿನ ಉಪಾನ್ಯಾಸಕರಾಗಿರುವ ಹರಿ.ಎಚ್ ರವರು ಹಿರಿಯರು ಆಚರಣೆಗೆ ತಂದಿರುವ ಹಬ್ಬ ಹರಿದಿನಗಳ ಆಚರಣೆಯ ಉದ್ದೇಶ ವನ್ನು ಅರ್ಥೈಸಿಕೊಂಡು ಆಚರಿಸಿಕೊಂಡು ಬರಬೇಕು ಎಂದು ತಿಳಿಸಿದರು ,
ಮುಲ್ಕಿ ಬಿಲ್ಲವ ಸಂಘದ ನಿವೃತ ಮೆನೇಜರ್ ರಾಗಿರುವ ಸದಾನಂದ ಪೂಜಾರಿಯವರನ್ನು ಪರ್ಬದ ತಮ್ಮನ ನೀಡಲಾಯಿತು. ಜಯಕುಮಾರ್ ಕುಬೆವೂರುರವರು ಸನ್ಮಾನ ಪತ್ರ ವಾಚಿಸಿದರು.
ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಾದ ಗೋಪಿನಾಥ ಪಡಂಗ ರವರು ಶುಭಾಸಂಸನೆಗೈದರು.
ಕಾರ್ಯದರ್ಶಿ ಭರತೇಶ ಅಮೀನ್ ಮಟ್ಟು ಧನ್ಯವಾದ ಸಮರ್ಪಿಸಿದರು. ಉದಯ ಅಮೀನ್ ಮಟ್ಟು ಮತ್ತು ಮೋಹನ್ ಸುವರ್ಣ ರವರು ಕಾರ್ಯ ಕ್ರಮ ನಿರೂಪಿಸಿದರು,
ಕಾರ್ಯ ಕ್ರಮ ದ ಪ್ರಯುಕ್ತ ಗೂಡುದೀಪ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಾಡಿಸಲಾಗಿತ್ತು
ಗೂಡುದೀಪ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪೂಜಾ ಎರೆಂಜರ್ಸ್ ಹಳೆಯಂಗಡಿ, ದ್ವಿತೀಯ ಬಹುಮಾನ ಶಕ್ತಿ ನಗರ ಘಟಕ ಹಾಗೂ ತ್ರತೀಯ ಬಹುಮಾನ ವನ್ನು ಪಡುಬಿದ್ರಿ ಯುವವಾಹಿನಿ ಘಟಕದವರು ಪಡಕೊಂಡರು,
ರಂಗೋಲಿ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ವನ್ನು ನಾಗರತ್ನ ವೆಂಕಟರಮಣ ದ್ವಿತೀಯ ಭಾಗ್ಯ ಬೊರ್ಡುಸ್ಕೂಲು ಹಾಗೂ ತ್ರತೀಯ ಬಹುಮಾನ ವನ್ನು ಅಡ್ವೆ ಘಟಕದ ಶರತ್ ರವರು ಪಡಕೊಂಡರು. ಭಾಗವಹಿಸಿದ ಏಲ್ಲಾ ಸ್ವರ್ಧಾಳು ಗಳಿಗೂ ಸಮಾಧಾನಕರ ಬಹುಮಾನದೊಂದಿಗೆ ಗೌರವಧನ ನೀಡಲಾಯಿತು .
ಕಾರ್ಯ ಕ್ರಮ ದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ,ಸದಸ್ಯರು , ಯುವವಾಹಿನಿ ಅಡ್ವ್, ಹಳೆಯಂಗಡಿ, ಪಡುಬಿದ್ರಿ, ಕೂಳೂರು, ಪೆರ್ಮುದೆ -ಎಕ್ಕಾರ್, ಶಕ್ತಿನಗರ, ಹೆಜಮಾಡಿ, ಕಂಕನಾಡಿ, ಪಣಂಬೂರ್ ಘಟಕಗಳ ಅಧ್ಯಕ್ಷರು ಸದಸ್ಯರು .ಮುಲ್ಕಿ ರೋಟರಿ, ಜೆ ಸಿ ಐ, ಲಯನ್ಸ್ ಕ್ಲಬ್, ಬಿಲ್ಲವ ಸಂಘ ಮುಲ್ಕಿ, ಬಿರ್ವೆರ್ ಕುಡ್ಲ ಮೂಲ್ಕಿ ಯ ಅಧ್ಯಕ್ಷರು ಮತ್ತು ಸದಸ್ಯರು ,ಮುಲ್ಕಿ ನಗರ ಪಂಚಾಯತ್ ಸದಸ್ಯ ರಾದ ಹರ್ಷರಾಜ್ ಶೆಟ್ಟಿ, ಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ರಾದ ವಿಠಲ ಅಮೀನ್ ಉಪಸ್ಥಿತ ರಿದ್ದರು
ಕಾರ್ಯ ಕ್ರಮ ದ ಪ್ರಾರಂಭದಲ್ಲಿ ಘಟಕದ ಸದಸ್ಯ ರಿಂದ ನೃತ್ಯ ಕಾರ್ಯ ಕ್ರಮ ನಡೆಯಿತು ,ಘಟಕದ ಮಹಿಳಾ ಸದಸ್ಯರು ಹಾಗೂ ಸರ್ವಧರ್ಮದ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಗೋಪೂಜೆಯನ್ನು ನೆರವೇರಿಸಿದರು,ಬಂದವರೆಲ್ಲರಿಗೂ ಸದಸ್ಯರು ತುಡರ ಪರ್ಬದ ಗಟ್ಟಿ ಬಜಿಲ್ ಹಾಗೂ ಪಾನಕ ನೀಡಿ ಸತ್ಕರಿಸಲಾಯಿತು