ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಹಾಗೂ ಯುವ ವಾಹಿನಿ(ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಜರುಗುವ “ಧಾರ್ಮಿಕ ಶಿಕ್ಷಣ ಪದ್ಧತಿ ಹಾಗೂ ಭಜನಾ ತರಬೇತಿ ಕಮ್ಮಟ” ನಿರಂತರವಾಗಿ ನಡೆಯುತ್ತಿದ್ದು, ಇಂದು ದ್ವಿತೀಯ ತರಗತಿಯು ಭಜನಾ ಗುರುಗಳಾದ ಅರುಣ್ ಉಳ್ಳಾಲ್ ರವರಿಂದ ಸಂಜೆ 7.00 ರಿಂದ 8.00 ಗಂಟೆಯ ವರೆಗೆ ಜರಗಿತು.
ಗುರುಗಳು ದೀಪಾವಳಿ ಹಬ್ಬದ ಮಹತ್ವವನ್ನು ಹಾಗೂ ಹಿಂದೂ ಪಂಚಾಂಗದ ಬಗ್ಗೆ ಕೆಲವು ಮಾಹಿತಿಗಳನ್ನು ಸಭೆಯಲ್ಲಿ ನೀಡಿದರು.
ಭಜನೆಯಲ್ಲಿ ಸ್ವರ ಉಚ್ಛಾರದ ಬಗ್ಗೆ ಇರುವ ಮಹತ್ವಗಳನ್ನು ತಿಳಿಸಿದರು. ಇಂದಿನ ತರಬೇತಿಯಲ್ಲಿ ಒಟ್ಟು 82 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.