ಮನುಷ್ಯ ಬದುಕಲು ಆಹಾರ ಎಷ್ಟು ಮುಖ್ಯವೋ ವಾಸ ಮಾಡಲು ಮಮನೆಯೂ ಅಷ್ಟೇ ಮುಖ್ಯ. ಇದನ್ನರಿತ ಯುವವಾಹಿನಿ (ರಿ) ಕೂಳೂರು ಘಟಕವು ಅನಾರೋಗ್ಯರೂ, ಕಡುಬಡವರೂ ಆದ ಗುರುವಪ್ಪ ಪೂಜಾರಿ ಯವರ ಮನೆಯ ದುರಸ್ಥಿ ಕೆಲಸ ಮಾಡುವ ಯೋಜನೆ ಹಾಕಿಕೊಂಡಿತು. ಆ ಯೋಜನೆಯು ಪೂರ್ಣಗೊಂಡು, ದೀಪಾವಳಿಯ ಶುಭ ದಿನ ದಿನಾಂಕ 28.10.19 ರಂದು ಸಂಜೆ 6 ಗಂಟೆಗೆ ಸರಿಯಾಗಿ ದೀಪ ಬೆಳಗುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು.
ಭಾವನಾತ್ಮಕ ಸಂಬಂಧ, ಸಾರ್ಥಕತೆ ತಂದು ಕೊಟ್ಟ ಕಾರ್ಯಕ್ರಮ ಎಂದು
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಸಸಿಹಿತ್ಲು ರವರು ದೀಪ ಬೆಳಗಿಸಿ ಮಾತನಾಡಿದರು.
ಉತ್ತರ ವಿಧಾನಸಭಾ ಕ್ಷೇತ್ರದ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷರಾದ ನವೀನ್ ಚಂದ್ರ ರವರು ಮಾತನಾಡಿ ಯುವವಾಹಿನಿ ಕೂಳೂರು ಘಟಕವು ಯಾವುದೇ ರೀತಿಯ ಪ್ರಚಾರ ಮಾಡದೆ ನಿಶಬ್ಧವಾಗಿ ಸಮಾಜಸೇವೆ ಮಾಡಿಕೊಂಡು ಬರುತ್ತಿದೆ. ಈ ಮನೆಯವರ ಮನೆ, ಮನಸ್ಸು ಬೆಳಗಲಿ, ಮನಸ್ಸಿನೊಳಗಿನ ಕತ್ತಲು ನಿವಾರಣೆಯಾಗಲಿ ಎಂದು ಆಶಿಸಿದರು. ಶ್ರೀ ಕೃಷ್ಣ ಶಿಪ್ಪಿಂಗ್ ಏಜೆನ್ಸಿ ಮಾಲಕರಾದ ಅನಿಲ್ ಕುಮಾರ್ ರವರು ಮಾತನಾಡಿ ಯುವವಾಹಿನಿ ಕೂಳೂರು ಘಟಕವು ಗುರುವಪ್ಪ ಪೂಜಾರಿ ಯವರ ಕುಟುಂಬಕ್ಕೆ ಆಶಾದೀಪವಾಗಿ ಬೆಳಗಿದೆ ಎಂದರು. ಕಾವೂರು ಉದ್ಯಮಿಯಾದ ಪುರುಷೋತ್ತಮ ಪೂಜಾರಿ ಯವರು ಮಾತನಾಡಿ ಗುರುವಪ್ಪ ಪೂಜಾರಿ ಯವರ ಮನೆಗೆ ಬೆಳಕು ತಂದುಕೊಟ್ಟ ಯುವವಾಹಿನಿ ಕೂಳೂರು ಘಟಕಕ್ಕೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಾನಕಿ ಸದಾಶಿವ ಅಮೀನ್, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರಕರಾದ ಜಗದೀಶ್ ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಶ್ಮಿ ಕರ್ಕೇರ, ಯುವವಾಹಿನಿ ಮಂಗಳೂರು ಘಟಕದ ಉಪಾಧ್ಯಕ್ಷರಾದ ಚಂದ್ರಶೇಖರ್ ಕೋಟ್ಯಾನ್, ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಮಾಜ ಸೇವೆ ನಿರ್ದೇಶಕರಾದ ಚಿತ್ರಶ್ರೀ, ಸ್ಥಳೀಯರಾದ ಭಾಸ್ಕರ್ ಪೂಜಾರಿ, ಯುವವಾಹಿನಿ ಕೂಳೂರು ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ. ಯು ಅಮೀನ್ , ಕಾರ್ಯಕ್ರಮದ ಸಂಚಾಲಕರಾದ ಲತೀಶ್ ಪೂಜಾರಿ ಹಾಗೂ ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ಉಪಸ್ಥಿತರಿದ್ದರು.
ಘಟಕದ ಸದಸ್ಯರೆಲ್ಲರೂ
ಭಜನೆ ಮೂಲಕ ದೇವರ ಸ್ತುತಿ ಮಾಡಿ ಕಾರ್ಯಕ್ರಮ ಪ್ರಾರಂಭಿಸಿ , ಅಂತಿಮವಾಗಿ ಕಾರ್ಯದರ್ಶಿ ವಂದಿಸಿದರು. ಎಲ್ಲರಿಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.