ಯುವವಾಹಿನಿ ರಿ. ಮೂಡಬಿದಿರೆ ಘಟಕದ ವತಿಯಿಂದ ಆರಂಭಿಸಲಾದ *ಯುವ ಸ್ಪಂದನ ಸೇವಾ ಯೋಜನೆಯ 16ನೇ ಸೇವೆಯನ್ನು ಶ್ರೀಮತಿ ಲಲಿತಾ ಹಾಗೂ ಓಬಯ್ಯ ಪೂಜಾರಿ ದಂಪತಿಗಳ ಬಡಕುಟುಂಬವೊಂದು ತನ್ನ 4 ಮಕ್ಕಳೊಂದಿಗೆ ಬೆಳ್ತಂಗಡಿ ತಾಲೂಕಿನ ಪೆರಿಂಜೆಯಲ್ಲಿ ವಾಸವಾಗಿದ್ದು ಹಿಂದಿನಿಂದಲೂ ಕೂಲಿ ಕೆಲಸ ಹಾಗೂ ಬೀಡಿ ಕಟ್ಟುತ್ತಾ ತುಂಬಾ ಕಷ್ಟಕರ ಜೀವನವನ್ನು ನಡೆಸುತ್ತಾ ತನ್ನ ಮಕ್ಕಳಿಗೆ ತಮಗೇ ಸಾಧ್ಯವಿದ್ದಷ್ಟು ವಿದ್ಯಾಭ್ಯಾಸ ಕೊಟ್ಟು ಹಿರಿಮಗಳಿಗೆ ಸಾಲ ಸೋಲ ಮಾಡಿ ಮದುವೆ ಮಾಡಿ ವರ್ಷ ಒಂದು ಆಗುವಷ್ಟರಲ್ಲಿ ಸಾಕಿ ಸಲಹಿದ ಕುಟುಂಬದ ಯಜಮಾನ ಓಬಯ್ಯ ಪೂಜಾರಿ ಅಪಘಾತ ಒಂದರಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.ಮುಂದೆ ಮಕ್ಕಳನ್ನು ಸಾಕಿ ಬೆಳೆಸುವ ಜವಾಬ್ದಾರಿ ತಾಯಿಯ ಮೇಲೆ ಬಿದ್ದಾಗ ಒಬ್ಬಾಕೆಯ ಸಂಪಾದನೆಯಲ್ಲಿ ಕುಟುಂಬದ ನಿರ್ವಹಣೆ ಕಷ್ಟವಾಗಿ ಮಕ್ಕಳ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಿ ಬೀಡಿ ಕಟ್ಟುತ್ತಾ ಜೀವನ ನಡೆಸುತ್ತಿದ್ದರು. ಎರಡನೇ ಮಗಳು ಸುಚಿತ್ರ ಳನ್ನು ಮತ್ತೆ ಅದೇ ಸಾಲದ ಸುಳಿಯಲ್ಲಿದ್ದುಕೊಂಡು ಬೆಳ್ತಂಗಡಿಯ ಸಂತೋಷ್ ಪೂಜಾರಿ ಎಂಬ ಯುವಕನಿಗೆ ಮಗಳನ್ನು ಮದುವೆ ಮಾಡಿಸಿ ಕೊಡುತ್ತಾರೆ. ಮದುವೆಯಾಗಿ ತಿಂಗಳು 10 ಕಳೆದಿದೆ. ತಮ್ಮ ದಾಂಪತ್ಯ ಜೀವನದ ಫಲವಾಗಿ ಹೊಟ್ಟೆಯಲ್ಲಿ 6 ತಿಂಗಳ ಕೂಸೊಂದು ಬೆಳೆಯುವಸ್ಟರಲ್ಲಿ ಹೆಣ್ಣು ಮಗಳು ಸುಚಿತ್ರ ವಿಧಿಯ ವಕ್ರದೃಷ್ಠಿಗೆ ಬೀಳುತ್ತಾಳೆ.ಮೆದುಳು ಸಂಬಂಧಿತ ಮಾರಕ ಕಾಯಿಲೆ ಒಂದು ಆಕೆಯನ್ನು ಆವರಿಸಿ ಹಾಸಿಗೆ ಹಿಡಿದಿದ್ದಾಳೆ.ಮಂಗಳೂರಿನ A J ಆಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿ ಸುಮಾರು ದಿನಗಳು ಕಳೆದು ಹೋಗಿದೆ.ತೀರಾ ಬಡತನದಿಂದಿರುವ ಈ ಕುಟುಂಬಕ್ಕೆ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೊಂದಿಸಿಕೊಳ್ಳಲಾಗದೆ *ಇವರು ಯುವವಾಹಿನಿ ರಿ. ಮೂಡಬಿದಿರೆ ಘಟಕಕ್ಕೆ ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಿದ್ದರು. ಆದ್ದರಿಂದ ಇವರ ಕುಟುಂಬಕ್ಕೆ ರೂ.5000/- ಚೆಕ್ ನ್ನು 5.9.2019 ರಂದು ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಯುವವಾಹಿನಿ ರಿ. ಮೂಡಬಿದಿರೆ ಘಟಕ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ, ಉಪಾಧ್ಯಕ್ಷರಾದ ಹರಿಪ್ರಸಾದ್ ಪಿ ಹೊಸಂಗಡಿ, ಘಟಕದ ಸಲಹೆಗಾರರಾದ ಸುಶಾಂತ್ ಕರ್ಕೆರ ಸದಸ್ಯರಾದ ಭರತ್ ಕರ್ಕೇರ ಮತ್ತು ಪೆರಿಂಜೆ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಸಚ್ಚಿದಾನಂದ ಇವರಗಳು ಉಪಸ್ಥಿತರಿದ್ದರು ಇವರುಗಳಿಗೆ ಯುವ ಸ್ಪಂದನ ಸೇವಾ ಯೋಜನೆಯ ಸರ್ವ ಸದಸ್ಯರ ಪರವಾಗಿ ಧನ್ಯವಾದಗಳು.