ಯುವವಾಹಿನಿ (ರಿ) ಕೊಲ್ಯ ಘಟಕ ಇದರ ಸಾಪ್ತಾಹಿಕ ಸಭೆ ಹಾಗೂ ಗುರುವಂದನಾ ಕಾರ್ಯಕ್ರಮ ದಿನಾಂಕ 5.9.19 ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕೊಲ್ಯದಲ್ಲಿ ಜರುಗಿತು.
ಪ್ರಾರ್ಥನೆಯೊಂದಿಗೆ ಸಭೆಯು ಘಟಕದ ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಲಾಯಿತು
ಅಧ್ಯಕ್ಷರು ಸಭೆಗೆ ಬಂದ ಅತಿಥಿಗಳನ್ನು ಮತ್ತು ಸದಸ್ಯರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು
ಕಾರ್ಯದರ್ಶಿ ಆನಂದ್ ಅಮೀನ್ ಗತ ಸಭೆಯ ವರದಿಯನ್ನು ಸಭೆಯಲ್ಲಿ ಮಂಡಿಸಿದರು ಸದಸ್ಯರು ಚಪ್ಪಾಳೆ ಮೂಲಕ ಅನುಮೋದನೆ ನೀಡಿದರು
ಬ್ರಹ್ಮಶ್ರೀ ನಾರಾಯಣ ಗುರುವರ್ಯರ 165 ನೇ ಜನ್ಮ ದಿನಾಚರಣೆ ಅಂಗವಾಗಿ ದಿನಾಂಕ 8.9.19 ರಂದು ಅದಿತ್ಯವಾರ ಬೆಳಗ್ಗೆ 9.30 ಕ್ಕೆ ಉಳ್ಳಾಲವಲಯದ ಎಲ್ಲಾ ಸಮುದಾಯದ ಪ್ರಾಥಮಿಕ, ಹೈಸ್ಕೂಲು, ಕಾಲೇಜು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ,
ಮತ್ತು ಸಾರ್ವಜನಿಕರಿಗೆ, ಸಾಂಸ್ಕೃತಿಕ ಸ್ಪರ್ಧೆಗಳು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಜರುಗಲಿದೆ ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಘಟಕದ ಎಲ್ಲಾ ಸದಸ್ಯರು ಬಂದು ಸಹಕರಿಸಬೇಕು ಎಂದು ವಿನಂತಿಸಿದರು
ಸಭೆಯ ನಂತರ ಶಿಕ್ಷಕರ ದಿನಾಚರಣೆ ಅಂಗವಾಗಿ ಗೌರವಾನ್ವಿತ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು
ಘಟಕದ ಉಪಾಧ್ಯಕ್ಷರಾದ ಲತೀಶ್ ಸಂಕೋಲಿಗೆ ಗುರು ಶಿಷ್ಯರ ಸಂಬಂಧದ ಕುರಿತು ಸಿದ್ಧಪಡಿಸಿದ “ಶಿಕ್ಷಕರು ಮತ್ತು ಶಿಕ್ಷಣದ ಮಹತ್ವ’ದ ಬಗ್ಗೆ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತಾನಾಡಿದರು
ನಮ್ಮ ಸಮಾಜದ ಗೌರವಾನ್ವಿತ ಶಿಕ್ಷಕರುಗಳಾದ ಗಂಗಾಧರ ಪೂಜಾರಿ ಪಜೀರು, ನಾರಾಯಣ ಪೂಜಾರಿ ,ರಾಘವ ಮಸ್ಟರ್, ಶ್ರೀಮತಿ. ವಿಜಯಲಕ್ಷ್ಮಿ ಕಟೀಲು, ಸಂದೀಪ್ ರಾಜ್ , ಶ್ರೀಮತಿ ರೇವತಿ ವಿಶ್ವನಾಥ್, ಶ್ರೀಮತಿ ಕುಸುಮಾ ಕುಂಪಲ , ಶ್ರೀಮತಿ ವಿನುತ ಸತೀಶ್ ಕುಂಪಲ , ಶ್ರೀಮತಿ ಬಬಿತಾ ಆನಂದ್, ಶ್ರೀಮತಿ ವತ್ಸಲಾ ರಘುರಾಮ್ ಸುವರ್ಣ ಕೊಲ್ಯ, ಶ್ರೀಮತಿ ಭಾರತಿ ನಾಗರಾಜ್ ಕುಂಪಲ , ಶ್ರೀಮತಿ ಸೌಮ್ಯ ಕುಸುಮಾಕರ್, ಶ್ರೀಮತಿ ಶೈನಾ ರಾಣಿ,
ಶ್ರೀಮತಿ. ಮೋಹಿತ ಲತೀಶ್, ಶ್ರೀ ಮತಿ. ಅನುಷಾ ಯಶವಂತ್ , ಶ್ರೀಮತಿ ಅಶಾ ಪ್ರವೀಣಿ, ಶಕುಂತಲಾ ಮಾಡೂರು, ಜಯಶ್ರೀ ಸುರಾಜ್ , ಮಮತಾ ತಾರಾನಾಥ್ ಒಟ್ಟು ಇಪ್ಪತ್ತು ಜನ ಶಿಕ್ಷಕರನ್ನು ಈ ಸಂದರ್ಭ ದಲ್ಲಿ ಗೌರವಿಸಲಾಯಿತು ಹಾಗೂ ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಹಿರಿಯ ಸದಸ್ಯರು ಈ ಸಂದರ್ಭದಲ್ಲಿ ಸಹಕಾರ ನೀಡಿದರು
ಈ ಸಂದರ್ಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ನಿವೃತ್ತ ಶಿಕ್ಷಕರಾದ ಗಂಗಾಧರ ಪೂಜಾರಿ ಪಜೀರು ಇವರು ಯುವವಾಹಿನಿ ಕೊಲ್ಯ ಘಟಕದ ಸದಸ್ಯರಿಗೆ ಶುಭ ಹಾರೈಸಿ ಹಿಂದಿನ ಕಾಲದಲ್ಲಿ ಬಿಲ್ಲವರು ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಯಾವ ರೀತಿ ಪಾತ್ರ ಇತ್ತು ಈಗ ಹೇಗೆ ನಮ್ಮ ಸಮಾಜದ ಆಧುನೀಕರಣ ಪ್ರಗತಿ ಹೊಂದಿದೆ ಎಂದು ತಿಳಿಸಿದರು ಹಾಗೂ ಘಟಕದ ಸದಸ್ಯರಿಗೆ ಮತ್ತು ಬಂದ ಶಿಕ್ಷಕರಿಗೆ ಒಂದು ಕಿವಿಮಾತು ಹೇಳಿದರು, ನಮ್ಮಲ್ಲಿ ಯಾವಾಗಲೂ ಸಿದ್ಧತೆ ,ಬದ್ಧತೆ, ಶುದ್ಧತೆ ,ಈ ಮೂರು ಪದಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಆವಾಗ ಮಾತ್ರ ಮನುಷ್ಯ ಉತ್ತಮ ಶಿಖರವೇರಲು ಸಾಧ್ಯ ಎಂದು ಅವರು ತಿಳಿಸಿದರು. ಯುವವಾಹಿನಿ ಈ ಮೂರು ಪದವನ್ನು ಅನುಸರಿಸಿ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಅಭಿಪ್ರಾಯಪಟ್ಟರು
ಶ್ರೀ ಮತಿ ವಿಜಯಲಕ್ಷ್ಮಿ ಕಟೀಲು ಮಾತನಾಡಿ ಯುವ ವಾಹಿನಿ ಕೊಲ್ಯ ಘಟಕದವರು ಶಿಕ್ಷಕರನ್ನು ಸನ್ಮಾನಿಸುವುದಕ್ಕಾಗಿ ಎಲ್ಲಾ ಶಿಕ್ಷಕರ ಪರವಾಗಿ ಅಭಿನಂದಿಸಿದರು ಹಾಗೂ ಪ್ರಾಸ್ತಾವಿಕ ದಲ್ಲಿ ಹೇಳಿರುವಂತೆ ನಾವು ಹೂವು ಕೊಡುವಷ್ಟು ದೊಡ್ಡವರಲ್ಲ ಆದರೆ ಹೂವಿನ ಎಸಲನ್ನು ನಿಮಗೆ ನೀಡುತ್ತಿದ್ದೇವೆ ಎಂಬ ಮಾತನ್ನು ಇವರು ಪುನಃರುಚ್ಚರಿಸಿ ನಾವು ಈ ಗೌರವವನ್ನು ಕೃತಜ್ಜತಪೂವ್ವಕವಾಗಿ ಸ್ಟಿಕರಿಸಿದ್ದೇವೆ ಎಂದರು ಹಾಗೂ ತಿಮರೆ ಹಾಗೂ ಬಿಲ್ಲವನ ಕಥೆ ಸಭೆಗೆ ಹೇಳಿ ಯುವವಾಹಿನಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಇದರ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಈಶ್ವರ ಸುವರ್ಣ ಮಾತನಾಡಿ ಘಟಕದ ಕಾರ್ಯಕ್ರಮವನ್ನು ಅಭಿನಂದಿಸಿದರು ಹಾಗೂ ಗುರುಜಯಂತಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ರೋಟರಿ ಸಮುದಾಯದಳ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾದ ಸವಿತಾ ಸಂತೋಷ್ ಇವರನ್ನು ಗುರುತಿಸಲಾಯಿತು. ಹಾಗೂ ಹೊಸ ಸದಸ್ಯರ ಐಡಿ ಕಾರ್ಡನ್ನು ಹಸ್ತಾಂತರಿಸಲಾಯಿತು. ಅಧ್ಯಕ್ಷರು ಯುವವಾಹಿನಿ ಹೇಗೆ ಬೆಳೆದುಬಂತು ಯುವವಾಹಿನಿಯ ಸಿದ್ಧಾಂತಗಳ ಬಗ್ಗೆ ಹಾಗೂ ಯುವ ವಾಹಿನಿಯ ಶಾಶ್ವತ ವಿದ್ಯಾನಿಧಿ ಯೋಜನೆಯ ಬಗ್ಗೆಯೂ ಸಭೆಯಲ್ಲಿ ತಿಳಿಸಿದರು ಯಾರಾದರೂ ವಿದ್ಯಾನಿಧಿಗೆ ಸಹಕರಿಸುವ ದಾನಿಗಳು ಇದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಮನವಿ ಮಾಡಿದರು
ಕಾರ್ಯದರ್ಶಿ ಆನಂದ್ ಅವೀನ್ ಧನ್ಯವಾದ ನೀಡುವುದರೊಂದಿಗೆ ಕಾರ್ಯ ಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.