ಯುವವಾಹಿನಿ ರಿ. ಮೂಡಬಿದಿರೆ ಘಟಕದ ವತಿಯಿಂದ ಆರಂಭಿಸಲಾದ *ಯುವ ಸ್ಪಂದನ ಸೇವಾ ಯೋಜನೆಯ 17ನೇ ಸೇವೆಯನ್ನು ಅಳಿಯೂರಿನಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಹರೀಶ್ ಪೂಜಾರಿ ಅವರು ಕೆಲಸಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿದ್ದು ಇದೀಗ ಶಸ್ತ್ರಚಿಕಿತ್ಸೆ ಗೆ ೭ ಲಕ್ಷ ತಗಲುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇವರು ಕಡುಬಡತನದಲ್ಲಿದ್ದು ಇವರಿಗೆ ಹೆಂಡತಿ, ಮಗು ಹಾಗೂ ಹೆತ್ತವರಿಗೆ ಇವರೇ ಆಧಾರ ಸ್ತಂಭವಾಗಿದ್ದು ಇದೀಗ ಮನೆಯವರಿಗೆ ದಿಕ್ಕೇ ತೋಚದಂತಗಿದೆ.ತೀರಾ ಬಡತನದಿಂದಿರುವ ಈ ಕುಟುಂಬಕ್ಕೆ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೊಂದಿಸಿಕೊಳ್ಳಲಾಗದೆ *ಇವರ ಹೆಂಡತಿ ಯುವವಾಹಿನಿ ರಿ. ಮೂಡಬಿದಿರೆ ಘಟಕಕ್ಕೆ ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ ಇವರ ಕುಟುಂಬಕ್ಕೆ ರೂ.5000/- ಚೆಕ್ ನ್ನು ಇಂದು 07-09-2019 ಶನಿವಾರ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ ರಿ. ಮೂಡಬಿದಿರೆ ಘಟಕ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ, ಕಾರ್ಯದರ್ಶಿ ನವಾನಂದ, ಸಮಾಜಸೇವಾ ನಿರ್ದೇಶಕರಾದ ಸಂತೋಷ ಪಣಪಿಲ, ವಿದ್ಯಾ ನಿಧಿ ಸಂಚಾಲಕರಾದ ರಮೇಶ್ ಅಮೀನ್, ಜೋತೆ ಕಾರ್ಯದರ್ಶಿ ವಿದೇಶ್ ಮೂಡುಕೋಡಿ ಇವರುಗಳು ಉಪಸ್ಥಿತರಿದ್ದರು ಇವರುಗಳಿಗೆ ಹಾಗೂ ಯುವ ಸ್ಪಂದನ ಸೇವಾ ಯೋಜನೆಗೆ ಸಹಕಾರ ನೀಡಿದ ಸರ್ವ ಸೇವಾ ಬಂಧುಗಳಿಗೆ ಧನ್ಯವಾದಗಳು