ಇಂದು ಬಡವರ ಮಕ್ಕಳು ಸಹ ಶಿಕ್ಷಣ ಪಡೆಯಲು ಅವಕಾಶ ಇದೆ. ಪೋಷಕರು ಇದನ್ನು ಮನಗಂಡು ಮಕ್ಕಳ ವಿದ್ಯೆಗೆ ಪ್ರಾಮುಖ್ಯ ನೀಡಬೇಕು ವಿದ್ಯಾರ್ಜನೆಯಿಂದ ವಂಚಿಸಿದರೆ ದೇವರ ಶಾಪಕ್ಕೆ ಗುರಿಯಾಗುವಿರಿ ಎಂದು ಬೆಳ್ತಂಗಡಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅದ್ಯಕ್ಷ ವಸಂತ ಬಂಗೇರ ತಿಳಿಸಿದರು.
ಅವರು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಮೂಡುಕೋಡಿ ಗ್ರಾಮದ ಬಿಲ್ಲವ ಭಾಂದವರಿಗೆ ನಾರಾಯಣಗುರು, ಕೋಟಿ ಚೆನ್ನಯ, ಕಿಮ್ಮಲೆ ನಾಗಬ್ರಹ್ಮರ ಉಚಿತ ಭಾವಚಿತ್ರ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಸಂಘಟನೆಗಳು ಸಮಾಜಕ್ಕೆ ಪೂರಕವಾಗುವ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಬೆಳ್ತಂಗಡಿ ಯುವವಾಹಿನಿ ಕಾರ್ಯಸಾಧನೆ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಬೆಳ್ತಂಗಡಿ ಯುವವಾಹಿನಿ ಅದ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ವಹಿಸಿದ್ದರು ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ಅವರು ನಾರಾಯಣ ಗುರುಗಳ ಭಾವಚಿತ್ರ ವಿತರಿಸಿದರು.
ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕಾದ್ಯಕ್ಷೆ ಸುಚಿತಾ ವಿ. ಬಂಗೇರ ರಾಷ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ ನಾರಾವಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ಬೆಳ್ತಂಗಡಿ ಎಪಿಎಂಸಿ ಅದ್ಯಕ್ಷ ಸತೀಶ್ ಕೆ ಕಾಶೀಪಟ್ಲ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅದ್ಯಕ್ಷ ತುಕರಾಮ್ ಎನ್, ರವಿಚಂದ್ರ, ಗೆಜ್ಜೆಗಿರಿ ನಂದನ ಬಿತ್ತಿಲು ಸೇವಾ ಸಮಿತಿ ಅದ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ವೇಣೂರು ಶ್ರೀ ನಾರಾಯಣಗುರು ಸ್ವಾಮೀ ಸೇವಾ ಸಂಘದ ಅದ್ಯಕ್ಷ ಪೂವಪ್ಪ ಪೂಜಾರಿ, ಬೆಳ್ತಂಗಡಿ ಯುವವಾಹಿನಿ ಸಂಘಟನಾ ಕಾರ್ಯದರ್ಶಿ ಗಳಾದ ನವೀನ್ ಪೂಜಾರಿ ಪಚ್ಚೇರಿ, ಸುಂದರ ಪೂಜಾರಿ, ಯೋಗೀಶ್ ಪೂಜಾರಿ ಬಿಕ್ಕೊಟ್ಟು, ಸುರೇಶ್ ಪೂಜಾರಿ, ಈಶ್ವರ ಪೂಜಾರಿ, ಜಗನ್ನಾಥ ಬಂಗೇರ, ನಾರಾಯಣ ಪೂಜಾರಿ ಮಚ್ಚಿನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ತಂಗಡಿ ಯುವವಾಹಿನಿ ಸ್ಥಾಪಕಾದ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಅರುಣ್ ಕೋಟ್ಯಾನ್ ಸ್ವಾಗತಿಸಿ, ಸತೀಶ್ ಪಿ ಎಸ್ ವಂದಿಸಿದರು. ಸದಾನಂದ ಸಾಲ್ಯಾನ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.