Yuvavahini

SEP 17, 2019 10.20 AM IST

ಯುವವಾಹಿನಿ (ರಿ) ಕೇಂದ್ರ ಸಮಿತಿ

ಯುವವಾಹಿನಿಯ ಅನರ್ಘ್ಯ ರತ್ನ, ದಿ|ತಮ್ಮಯ್ಯ ರವರಿಗೆ ಭಾವಪೂರ್ಣ ಶ್ರಧ್ಧಾಂಜಲಿ

ಅಗಲಿದ ಹಿರಿಯ ಚೇತನ,ಯುವವಾಹಿನಿಯ ಅನರ್ಘ್ಯ ರತ್ನ, ದಿ|ತಮ್ಮಯ್ಯ ರವರಿಗೆ ನಮ್ಮೆಲ್ಲರ ಏಕಾಗ್ರ ಚಿತ್ತದ   ನುಡಿನಮನಗಳೊಂದಿಗೆ ಇಂದು ನಮ್ಮೊಂದಿಗಿಲ್ಲದ ಆ  ಮಂದಹಾಸದ ಮುಗುಳ್ನಗೆಯೊಂದಿಗೆ ರಾರಾಜಿಪ, ಶಕ್ತಿಯೆಂಬ  ವ್ಯಕ್ತಿಯ ಅಂದದ ಮುಕುಟದ  ಭಾವಚಿತ್ರಕ್ಕೆ  ಅರ್ಪಿತವಾಯಿತು ಭಾವಪೂರ್ಣ ಶ್ರಧ್ಧಾಂಜಲಿ
*ದಿನಾಂಕ 17-09-2019 ನೇ ಮಂಗಳವಾರ ಸಾಯಂಕಾಲ ಘಂಟೆ 5:30 ಕ್ಕೆ ಸರಿಯಾಗಿ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅಗಲಿದ ಹಿರಿಯರ ಭಾವಚಿತ್ರಕ್ಕೆ ಮಾಜಿ ಅಧ್ಯಕ್ಷರುಗಳು ದೀಪ ಬೆಳಗಿಸಿದರು. ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ರವರು ಸೇರಿದ ಸರ್ವರನ್ನು ಸ್ವಾಗತಿಸಿ, ಅಗಲಿದ ನಮ್ಮೆಲ್ಲರ ಹಿರಿಯ ಮುತ್ತು ದಿ| ತಮ್ಮಯ್ಯ ರವರ ಗುಣಗಾನ ಮಾಡಿ ಹೆಜ್ಜೆ ಹೆಜ್ಜೆಗೂ ಅವರು ಹಾಕಿಕೊಟ್ಟ ಮಾರ್ಗದರ್ಶನ ನಮಗೆ ಸ್ಪೂರ್ತಿ ಹಾಗೂ ಅವರು ಸದಾ ನಮಗೆ ನೀಡಿದ ಮೌಲ್ಯಯುತ  ಮುತ್ತಿನಂತಹ ಮಾತುಗಳ ಸಲಹೆಗಳನ್ನು ನಾವು ಅನುಸರಿಸಿ ನಮ್ಮ ಈ ಸಂಸ್ಥೆಯಲ್ಲಿ ಅದನ್ನು ಅಳವಡಿಸುವುದರೊಂದಿಗೆ ನಾವು ಅವರನ್ನು ಸದಾ ಗೌರವಪೂರ್ವಕವಾಗಿ ನೆನೆಯೋಣ,ಅವರು ನಮಗೆ ಹೇಳಿದ ಕಿವಿಮಾತು ಒಬ್ಬರಿಗೊಬ್ಬರು ದ್ವೇಷಿಸದೆ ಸಹೋದರತೆಯ ಸಹಬಾಳ್ವೆಯಿಂದ ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸಿ ಎಂಬ ನಾನ್ನುಡಿಯನ್ನು ಸ್ವತಃ ನಾವು ಅಳವಡಿಸಿಕೊಂಡಲ್ಲಿ ಮಾತ್ರ ನಮ್ಮಿಂದ ಅವರಿಗೆ ಅರ್ಪಿತವಾಗುವ ನಿಜವಾದ ಶ್ರಧ್ಧಾಂಜಲಿ  ಎಂದು ಹೇಳಿ ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು.ಮಾಜಿ ಅಧ್ಯಕ್ಷರುಗಳಾದ ಟಿ.ಶಂಕರ ಸುವರ್ಣ, ಸಾಧು ಪೂಜಾರಿ, ಜಯರಾಮ ಕಾರಂದೂರು,ರಾಜೀವ ಪೂಜಾರಿ ಯವರು ಸಭೆಯನ್ನುದ್ದೇಶಿಸಿ ನಮ್ಮನ್ನಗಲಿದ ಹಿರಿಯ ಜೀವ, ಯುವವಾಹಿನಿಯ ನಾಡಿ ಮಿಡಿತ ದಿ|ತಮ್ಮಯ್ಯ ರವರು ಯುವವಾಹಿನಿಯ ಪ್ರಥಮ ಸಮಾವೇಷದಿಂದ ಈ ವರೆಗೆ ಮೊನ್ನೆ ನೆರವೇರಿದ 32 ನೇ ಸಮಾವೇಷದ ವರೆಗೂ ಸಂಸ್ಥೆಯ ಮೇಲಿನ ಪ್ರೀತಿ,ಒಲವು ದನಿವರಿಯದ ಉತ್ಸಾಹ,ತನ್ನ ದೇಹದ ನೋವನ್ನು ಮರೆತು ಪ್ರತಿಯೊಂದಕ್ಕೂ ಸ್ವ ಇಚ್ಛೆಯಿಂದ ನಮ್ಮೊಂದಿಗೆ ಬಹಳ ಉಲ್ಲಾಸದಿಂದ ಸ್ಪಂದಿಸುತ್ತಾ ಇದ್ದು,ಕೇವಲ ಸಂಸ್ಥೆ ಮಾತ್ರವಲ್ಲದೆ ಇಡೀ ಸಮಾಜದ ಬಗ್ಗೆ ಅವರಲ್ಲಿದ್ದ ಕಾಳಜಿ ಅನನ್ಯವಾದುದು. ಯುವಕರಿಗೆ ಪ್ರೇರಕ ಶಕ್ತಿ, ನಮ್ಮೆಲ್ಲರ ಒಡನಾಡಿಯಾದ ಹಿರಿಯರ ಹೆಸರು ಅಜರಾಮರವಾಗಿಸೋಣ,ನಮ್ಮ ಮಧ್ಯೆ ಅವರು ಇಲ್ಲವಾದರೂ ನಮ್ಮೊಂದಿಗೆ ಇದ್ದ ಹಾಗೆ ಭಾಸವಾಗುತ್ತಿರುವ ಅವರ ಬಗ್ಗೆ ಎಷ್ಟು ನೆನೆದರೂ ಸಾಲದೆಂಬ ರೀತಿಯಲ್ಲಿ ಅವರ ಗುಣಗಾನ ಮಾಡಿ, ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.ಸಿಂಚನ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕರಾದ ರಾಜೇಶ್ ಬಂಟ್ವಾಳ ರವರು ಮಾತನಾಡಿ ಹಿರಿಯರಾದ ತಮ್ಮಯ್ಯರವರಲ್ಲಿ ಯುವವಾಹಿನಿ ಯ ವೆಬ್‌ಸೈಟ್ ಅನುಷ್ಠಾನ ದ ಬಗೆಗೆ ಅವರಲ್ಲಿದ್ದ ಕಾಳಜಿ ಹಾಗೂ ಅವರ ಜೀವನೋತ್ಸಾಹ ಬಹಳ ಆಕರ್ಷಣೀಯ ಹಾಗೂ ಅವಿಸ್ಮರಣೀಯ ಎಂಬುದಾಗಿ ತಿಳಿಯಪಡಿಸಿದರು.ಹಾಗೂ ತಾರೀಕು 23-09-2019 ನೇ ಸೋಮವಾರ ದಂದು ಬಂಟವಾಳ ಬಂಟರ ಭವನದಲ್ಲಿ ನೆರವೇರಲಿರುವ ಮೃತರ ‘ಉತ್ತರಕ್ರಿಯೆ’ಯ ಕಾರ್ಯಕ್ಕೆ ಅವರ ಕುಟುಂಬದ ಮೂಲದಿಂದ   ಯುವವಾಹಿನಿ ಯ ಸರ್ವಸದಸ್ಯರಿಗೂ ಬಂದ ಆಮಂತ್ರಣವನ್ನು ತಿಳಿಸಿದರು, ಯುವವಾಹಿನಿ ಬಂಟ್ವಾಳ ಘಟಕ  ಹಾಗೂ ಕುಟುಂಬದ ವತಿಯಿಂದ ಅದೇ ದಿನ ಬೆಳಿಗ್ಗೆ 11 ಘಂಟೆಯಿಂದ 12 ರ ವರೆಗೆ ಅದೇ ಸಭಾ ಭವನ ದಲ್ಲಿ ಸಾರ್ವಜನಿಕ ‘ಶ್ರಧ್ಧಾಂಜಲಿ ಸಭೆ’ ನಡೆಯಲಿರುವುದು ಎಂಬ ಮಾಹಿತಿ ನೀಡಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಪ್ರದೀಪ್ ಎಸ್.ಆರ್ ರವರು ಶ್ರಧ್ಧಾಂಜಲಿ ಕಾರ್ಯಕ್ರಮಕ್ಕೆ ಹಾಜರಿದ್ದ ಸರ್ವರಿಗೂ ವಂದಿಸಿದರು.ಬಳಿಕ ಭಾಗವಹಿಸಿದ ಪ್ರತಿಯೊಬ್ಬರೂ ದಿ|ತಮ್ಮಯ್ಯರವರ ಭಾವಚಿತ್ರಕ್ಕೆ ಭಕ್ತಿಯುತ ಪುಷ್ಪಾರ್ಚನೆಯನ್ನು ಅರ್ಪಿಸಿ ಕರಜೋಡಿಸಿ ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಶಿರಬಾಗಿ ನಮಿಸಿದರು.ಈಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಿದ ಮಂಗಳೂರು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆಗಳು.*

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!