ಯುವವಾಹಿನಿ (ರಿ) ಮಂಗಳೂರು ಘಟಕ ವತಿಯಿಂದ ವಿಶ್ವ ವಿಖ್ಯಾತ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಸತತ 8ನೇ ವರ್ಷದ ಶರಬತ್ ಸೇವೆಯು ದಿನಾಂಕ 08.10.2019ರಂದು ನಡೆಯಿತು. ಶರಬತ್ ಸೇವೆಯ ಉದ್ಘಾಟನೆಯನ್ನು ನಮಗೆ ಸ್ಥಳಾವಕಾಶ ಒದಗಿಸಿಕೊಟ್ಟ
ಎಸ್ಎಲ್ ಶೇಟ್ ಡೈಮಂಡ್ಸ್ ಹೌಸ್ ನ ಮಾಲಕರಾದ ರವೀಂದ್ರ ಶೇಟ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮಹಾಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಪಾಲಿಸಿಕೊಂಡು ಅತ್ಯುತ್ತಮವಾದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಸಮಾಜದಲ್ಲಿ ಉತ್ತಮವಾದ ಸಂಘಟನೆ ಎಂದು ಹೆಸರುವಾಸಿಯಾದ ಯುವವಾಹಿನಿ ಗೆ ಒಳ್ಳೆಯದಾಗಲಿ ಎಂದು ಉದ್ಘಾಟಕರಾದ ರವೀಂದ್ರ ಶೇಟ್ ರವರು ಶುಭ ಹಾರೈಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲುರವರು ಸಾರ್ವಜನಿಕರಿಗೆ ಶರಬತ್ತು ನೀಡುವುದರ ಮೂಲಕ ಚಾಲನೆ ನೀಡಿದರು. ಯುವವಾಹಿನಿಯ ಮಾತ್ರೃ ಘಟಕವಾಗಿರುವ ಮಂಗಳೂರು ಘಟಕವು ಶೋಭಾಯಾತ್ರೆಯಲ್ಲಿ ಬಳಲಿದವರ ಬಾಯಾರಿಕೆಯನ್ನು ನೀಗಿಸುವ ಮೂಲಕ ಉತ್ತಮವಾದ ಸಮಾಜಸೇವೆಯನ್ನು ಹಮ್ಮಿಕೊಂಡಿದೆ, ಘಟಕದ ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ನರೇಶ್ ರವರು ಶುಭ ಹಾರೈಸಿದರು. ಕೇಂದ್ರ ಸಮಿತಿಯ ಕಾರ್ಯದರ್ಶಿಯವರಾದ ಪ್ರದೀಪ್ ಎಸ್ ಆರ್, ಸಂಘಟನಾ ಕಾರ್ಯದರ್ಶಿ ಹರೀಶ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಘಟಕದ ಅಧ್ಯಕ್ಷರಾದ ಕೆ ಆರ್ ಲಕ್ಷ್ಮೀನಾರಾಯಣರವರ ಮಾರ್ಗದರ್ಶನದಲ್ಲಿ, ಕಾರ್ಯದರ್ಶಿಯವರಾದ ಗಣೇಶ ವಿ. ಕೋಡಿಕಲ್ ರವರ ಸಹಕಾರ ಹಾಗೂ ಸಂಚಾಲಕರಾದ ಪ್ರಸಾದ್ ಕೆ. ಚಿಲಿಂಬಿಯವವರ ಅವಿರತ ದುಡಿಮೆಯಿಂದಾಗಿ ನಿರೀಕ್ಷೆಗೂ ಮೀರಿ ಸುಮಾರು 50 ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಸರಬತ್ ಸೇವನೆ ಮಾಡಿದರು. ಕರ್ನಾಟಕದ ಮಾಜಿ ಸಚಿವರಾದ ಯು ಟಿ. ಖಾದರ್, ಕಾಂಗ್ರೆಸ್ ಮುಖಂಡ ಹರೀಶ್ ಕುಮಾರ್ ಬೆಳ್ತಂಗಡಿ, ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಇದರ ಅಧ್ಯಕ್ಷರಾದ ವೇದಕುಮಾರ್, ಶ್ರೀ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿಯವರಾದ ಪದ್ಮರಾಜ್ ಹಾಗೂ ಆಡಳಿತ ಮಂಡಳಿಯವರು ಸರಬತ್ ಸೇವನೆ ಮಾಡಿ ಅತ್ಯುತ್ತಮವಾದ ಕೆಲಸವೆಂದು ಶ್ಲಾಘಿಸಿದರು. ಶೋಭಾಯಾತ್ರೆಯ ಸಮಯದಲ್ಲಿ 9 ನವದುರ್ಗೆಯರಿಗೆ ಘಟಕದ ವತಿಯಿಂದ ಮಂಗಳಾರತಿ ಸಮರ್ಪಿಸಲಾಯಿತು. ಸಾಯಂಕಾಲ 5:30 ರಿಂದ ರಾತ್ರಿ 2.30 ರವರೆಗೆ ಸುಮಾರು 6000 ಲೀಟರಿನಷ್ಟು ಶರಬತ್ ನ್ನು ಸಾರ್ವಜನಿಕರಿಗೆ ನೀಡಲಾಯಿತು. ಸುಮಾರು 11 ದೇವಸ್ಥಾನದ ಟ್ರಕ್ಕುಗಳು ಹಾಗೂ 70 ಕ್ಕೂ ಅಧಿಕ ಸಾರ್ವಜನಿಕ ಟ್ರಕ್ಕಿನ ಎಲ್ಲಾ ಮಾಲಕರು ಮತ್ತು ಸಿಬಂದಿಗಳು ಶರಬತ್ತು ಸೇವನೆ ಮಾಡಿ ತೃಪ್ತಿ ವ್ಯಕ್ತಪಡಿಸಿದರು. ಕಾರ್ಯಕ್ರಮದ ಆರಂಭದಿಂದಲೂ ಅತ್ಯುತ್ತಮ ಮಾರ್ಗದರ್ಶನ ಮತ್ತು ಸಹಕಾರ ನೀಡಿರುವ ಘಟಕದ ಮಾಜಿ ಅಧ್ಯಕ್ಷರುಗಳಾದ ಯಶವಂತ ಪೂಜಾರಿ, ಪರಮೇಶ್ವರ ಪೂಜಾರಿ, ಕಿಶೋರ್ ಕೆ.ಬಿಜ್ಯೆ, ಬಿ ಎಸ್ ಬಾಲಕೃಷ್ಣ, ನೇಮಿರಾಜ, ಅಶೋಕ್ ಕುಮಾರ್ ಎಸ್ ಸಿಡಿಸಿಸಿ, ಸಾಧು ಪೂಜಾರಿ, ತುಕಾರಾಂ, ಮೋಹನ್ ಪೇಜಕ್ಕಲ್, ಸುನಿಲ್ ಕುಮಾರ್ ಅಂಚನ್, ನವೀನ್ ಚಂದ್ರ, ಅಶೋಕ್ ಇಂಜಿನಿಯರ್, ಸದಾನಂದ ಸುವರ್ಣ, ರಾಕೇಶ್ ಕುಮಾರ್ ಹಾಗೂ ಇನ್ನಿತರರಿಗೆ ಘಟಕದ ಅಧ್ಯಕ್ಷರು ಧನ್ಯವಾದ ಸಲ್ಲಿಸಿದರು. ತುಂಬು ಉತ್ಸಾಹದಿಂದ ಅವಿರತವಾಗಿ ದುಡಿದಿರುವ ಘಟಕದ ಎಲ್ಲಾ ಮಾಜಿ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಮತ್ತು ಸರ್ವ ಸದಸ್ಯರಿಗೆ ಘಟಕದ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು. ನಮ್ಮ ಘಟಕದ ಸಹ ಘಟಕಗಳಾದ ಕೂಳೂರು ಮತ್ತು ಕಂಕನಾಡಿ ಘಟಕದ ಹಾಗೂ ಮಹಿಳಾ ಘಟಕದ ಸದಸ್ಯರು ಕೂಡ ಈ ಕಾರ್ಯಕ್ರಮದಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡರು. ಜನಸಂಖ್ಯೆ ಜಾಸ್ತಿ ಇದ್ದು ನೂಕುನುಗ್ಗಲಿನ ಸಮಯದಲ್ಲಿಯೂ ಕೂಡ ಘಟಕದ ಸದಸ್ಯರು ಸಮಯೋಚಿತವಾಗಿ ಎಲ್ಲರಿಗೂ ಶರಬತ್ತು ಸಿಗುವಂತೆ ಅನುಕೂಲ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಘಟಕದ ಸದಸ್ಯರಾದ ಪ್ರವೀಣ್ ಸಾಲ್ಯನ್ ಕಿರೋಡಿಯವರ ನೇತೃತ್ವದಲ್ಲಿ ತುಳುನಾಡ ಶೈಲಿಯಲ್ಲಿ ರಚಿಸಿದ ಪೇಟ ಎಲ್ಲರ ಗಮನ ಸೆಳೆಯಿತು. ಘಟಕದ ಮಾಜಿ ಅಧ್ಯಕ್ಷರಾದ ಯಶವಂತ ಪೂಜಾರಿಯವರು ಏರ್ಪಡಿಸಿರುವ ಗಂಜಿಊಟವನ್ನು ಎಲ್ಲರೂ ಸವಿದರು. ಕೊನೆಯಲ್ಲಿ ಅಧ್ಯಕ್ಷರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸಿದರು.