ಯುವವಾಹಿನಿ (ರಿ) ಮಂಗಳೂರು ಘಟಕದಿಂದ ಮಂದಾರ – ಪಚ್ಚನಾಡಿ ನಿವಾಸಿಗಳ ಕಾಲೋನಿಗೆ ಭೇಟಿ.
ದಿನಾಂಕ 01.09.2019 ರಂದು ಬೆಳಿಗ್ಗೆ ನಮ್ಮ ಘಟಕವು ಬೈತುರ್ಲಿ KHB ಕಾಲೋನಿ ಯಲ್ಲಿರುವ ಮಂದಾರ – ಪಚ್ಚನಾಡಿ ಡಂಪಿಂಗ್ ಯಾರ್ಡ್ ನ ನಿವಾಸಿಗಳನ್ನು ಭೇಟಿ ಮಾಡಿ ನಿವಾಸಿಗಳ ನೋವಿಗೆ ಸ್ಪಂದಿಸಿತು.
ಘಟಕದ ಅಧ್ಯಕ್ಷರಾದ ಶ್ರೀ ಕೆ. ಆರ್. ಲಕ್ಷ್ಮೀ ನಾರಾಯಣ ರವರು ಬೆಳಿಗ್ಗೆ 5.30ರಿಂದ ಧ್ಯಾನ ಮತ್ತು ಯೋಗದ ಅಭ್ಯಾಸಗಳನ್ನು ನಿರಂತರವಾಗಿ ಮಾಡಿಸಿ ಅವರ ಮನಸ್ಥೈರ್ಯವನ್ನು ಹೆಚ್ಚಿಸಿದರು. ಆಯುರ್ವೇದ ವೈದ್ಯರಾದ ಡಾ. ಜ್ಞಾನೇಶ್ವರ ನಾಯಕ್ ರವರು ಮಾತನಾಡುತ್ತ ಸೃಷ್ಟಿ ಮತ್ತು ಅಂತ್ಯ ಭಗವಂತನ ಲೀಲೆ, ಎಲ್ಲವೂ ನಡೆಯುವುದು ಒಳ್ಳೆಯದಕ್ಕೆ, ಮುಂದಿನ ದಿನಗಳಲ್ಲಿ ನಿಮಗೆಲ್ಲಾ ಉತ್ತಮ ಭವಿಷ್ಯ ಒದಗಿ ಬರುವುದೆಂದು ಶುಭ ಹಾರೈಸಿದರು.
ಘಟಕದ ಕಾರ್ಯದರ್ಶಿ ಗಣೇಶ್ ವಿ ಕೋಡಿಕಲ್ ರವರು ಸಂಪನ್ಮೂಲ ವ್ಯಕ್ತಿಗಳಿಗೆ ಹೂ ನೀಡಿ ಗೌರವಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಯಶವಂತ ಪೂಜಾರಿ, ಹರೀಶ್ ಕೆ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಶೇಖರ ಕರ್ಕೇರ ಮತ್ತು ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು. ನಂತರ ಘಟಕದಿಂದ ಏರ್ಪಡಿಸಿದ್ದ ಬೆಳಗಿನ ಉಪಾಹಾರವನ್ನು ಎಲ್ಲರು ಸೇವಿಸಿದರು. ಕೊನೆಯಲ್ಲಿ ನಿವಾಸಿಗಳೆಲ್ಲರು ಸದಸ್ಯರಿಗೆ ಧನ್ಯವಾದ ನೀಡಿದರು.