ಮಂಗಳೂರು : ಯುವವಾಹಿನಿ ಸಭಾಂಗಣದಲ್ಲಿ ಪ್ರಪ್ರಥಮ ಬಾರಿಗೆ ಯುವವಾಹಿನಿ ಘಟಕದ ಸದಸ್ಯರಿಂದ 73ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ಕೆ.ಆರ್. ಲಕ್ಷ್ಮೀನಾರಾಯಣರವರು ಧ್ವಜಾರೋಹಣ ಮಾಡಿದರು. ಮಾಜಿ ಅಧ್ಯಕ್ಷರಾದ ಶ್ರೀಧರ ಪೂಜಾರಿ, ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ಹಾಗೂ ರಾಜೇಶ್ ಅಮೀನ್ ರವರು ಉಪಸ್ಥಿತರಿದ್ದರು. ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಘಟಕದ ಸದಸ್ಯರು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಗೀತೆಯ ನಂತರ ಎಲ್ಲರಿಗೂ ಸಿಹಿತಿಂಡಿ ಹಂಚಲಾಯಿತು.
ಅನಾಥ ಮಹಿಳೆಯರ ಸೇವಾಶ್ರಮ ಬೆಲ್ಮಕ್ಕೆ ತೆರಳಿದ ಘಟಕದ ಸದಸ್ಯರು, ಆಶ್ರಮದ ಸದಸ್ಯರೊಂದಿಗೆ ಸಿಹಿ ಹಂಚಿ ಸ್ವಾತಂತ್ರ್ಯೋತ್ಸವ ಆಚರಿಸಿದರು. ಘಟಕದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ರವರು ಆಶ್ರಮದ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಮಾಡಿ, ಭಜನೆ, ಸಾಂತ್ವನದ ನುಡಿ ಮತ್ತು ಜೀವನದ ಮೌಲ್ಯ, ಅವಶ್ಯಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ರಕ್ಷಾಬಂಧನದ ಮಹತ್ವವನ್ನು ತಿಳಿಸಿದ ಅಧ್ಯಕ್ಷರು ಆಶ್ರಮದ ಸದಸ್ಯರಿಗೆ ರಕ್ಷೆಯನ್ನು ನೀಡಿ ಭಾಂದವ್ಯದ ಪಾಠ ತಿಳಿಸಿದರು. ನಂತರ ಆಶ್ರಮದ ಸದಸ್ಯರೆಲ್ಲರಿಗೂ ಉಡುಗೊರೆ ಮತ್ತು ತಿಂಡಿಯಾ ಪೊಟ್ಟಣಗಳನ್ನು ನೀಡಲಾಯಿತು. ಆಶ್ರಮದ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಜಿತೇಂದ್ರ ಸುವರ್ಣ ಪಾಲ್ಗೊಂಡಿದ್ದರು. ಘಟಕದ ಮಾಜಿ ಅಧ್ಯಕ್ಷರಾದ ಯಶವಂತ ಪೂಜಾರಿ, ಪರಮೇಶ್ವರ ಪೂಜಾರಿ, ಶ್ರೀಧರ ಪೂಜಾರಿ, ಹರೀಶ್ ಕೆ ಪೂಜಾರಿ, ಕಾರ್ಯದರ್ಶಿ ಗಣೇಶ್ ವಿ.ಕೋಡಿಕಲ್, ಸಮಾಜಸೇವಾ ನಿರ್ದೇಶಕರಾದ ಯೋಗೀಶ್ ಕುಮಾರ್ ಡೆಂಟಲ್ ಹಾಗೂ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಕೊನೆಯಲ್ಲಿ ಎಲ್ಲರೂ ಯಶವಂತ ಪೂಜಾರಿಯವರು ಏರ್ಪಡಿಸಿರುವ ಸಹಭೋಜನವನ್ನು ಸ್ವೀಕರಿಸಿದರು.