ವೇಣೂರು: ಯುವ ಸಮುದಾಯಕ್ಕೆ ಬೌದ್ಧಿಕ ಚಿಂತನೆಯನ್ನು ಮೂಡಿಸುವ ಮತ್ತು ಮಾನಸಿಕವಾಗಿ ಮನಸ್ಸನ್ನು ಕಟ್ಟುವ ಕೆಲಸ ಆಗಬೇಕು ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ ಹೇಳಿದರು.
ಬೆಳ್ತಂಗಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ವೇಣೂರು ಯುವವಾಹಿನಿ ಘಟಕದ ಆಶ್ರಯದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕೊಕ್ರಾಡಿ ಇದರ ಆತಿಥ್ಯದಲ್ಲಿ ಆ. ೪ರಂದು ಕೊಕ್ರಾಡಿ ಶ್ರೀ ಗು.ಸ್ವಾ.ಸೇ. ಸಂಘದ ಸಭಾಂಗಣದಲ್ಲಿ ಜರಗಿದ ಸಂಸ್ಕೃತಿ ಸಂಪದ ಸರಣಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿ, ಯುವಜನತೆ ಸತ್ಪ್ರಜೆಗಳಾಗಿ ಬೆಳೆಯಲು ಇಂತಹ ಸರಣಿ ಕಾರ್ಯಕ್ರಮಗಳು ಸಹಕಾರಿ ಎಂದರು.
ಬೆಳ್ತಂಗಡಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಲೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕ್ಷಣಿಕ ಸುಖಕ್ಕಾಗಿ ವಿದ್ಯಾರ್ಥಿಗಳು ಮಾದಕ ವ್ಯಸನಗಳಾಗಬೇಡಿ. ವಿದ್ಯಾರ್ಜನೆ ಪಡೆಯುವ ಸಮಯಲ್ಲಿ ಸುಖದ ಜೀವನ ತ್ಯಜಿಸಿ ಕಷ್ಟಪಟ್ಟು ಶಿಕ್ಷಣ ಪಡೆದಾಗ ಮುಂದಿನ ದಿನಗಳಲ್ಲಿ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.
ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಎಂದರು. ಬೆಳ್ತಂಗಡಿ ಬ್ರಹ್ಮಶ್ರೀ ಗು.ಸ್ವಾ.ಸೇ. ಸಂಘದ ಪ್ರ. ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕೊಕ್ರಾಡಿ ಶ್ರೀ ಗು.ಸ್ವಾ.ಸೇ. ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ, ವೇಣೂರು ಯುವವಾಹಿನಿ ಘಟಕದ ಸಲಹೆಗಾರ ಶ್ರೀಧರ ಪೂಜಾರಿ ಭೂತಡ್ಕ, ಬೆಳ್ತಂಗಡಿ ಪ್ರಾ.ಸ.ಕೃ. ಮತ್ತು ಗ್ರಾ.ಅ. ಬ್ಯಾಂಕ್ ನಿರ್ದೇಶಕ ಶುಭಕರ ಪೂಜಾರಿ ಸಾವ್ಯ, ಯುವವಾಹಿನಿ ಕೇಂದ್ರ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಯೋಗೀಶ್ ಪೂಜಾರಿ ಬಿಕ್ರೊಟ್ಟು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಶಶಿಧರ ಕೆ. ಪ್ರಾಸ್ತಾವಿಸಿ, ಅರುಣ್ ಕೋಟ್ಯಾನ್ ನಿರ್ವಹಿಸಿದರು. ಸತೀಶ್ ಪಿ.ಎನ್. ಸ್ವಾಗತಿಸಿ, ರಕ್ಷಿತ್ ಅಲೆಕ್ಕಿ ವಂದಿಸಿದರು.
ಸನ್ಮಾನ
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ| ಯೋಗೀಶ್ ಕೈರೋಡಿ ಅವರನ್ನು ಸಮ್ಮಾನಿಸಲಾಯಿತು. ಉಮೇಶ್ಚಂದ್ರ ಸಮ್ಮಾನಪತ್ರ ವಾಚಿಸಿದರು. ವಿದ್ಯಾರ್ಥಿವೇತನದ ಮಾಹಿತಿ ಮತ್ತು ಅರ್ಜಿ ಫಾರಂ ವಿತರಣೆ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಹಲವು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಂತ್ವಾನ ನಿಧಿ
ಬೆಳ್ತಂಗಡಿ ಬ್ರಹ್ಮಶ್ರೀ ಗು.ಸ್ವಾ.ಸೇ. ಸಂಘದ ವತಿಯಿಂದ ಸಾಂತ್ವಾನ ನಿಧಿ ವಿತರಿಸಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಕೊಕ್ರಾಡಿಯ ನಿವೃತ್ತ ಮುಖ್ಯ ಶಿಕ್ಷಕ ದಿ| ಡೀಕಯ್ಯ ಪೂಜಾರಿಯವರಿಗೆ ಮೌನಪ್ರಾರ್ಥನೆ ಮೂಲಕ ಚಿರಶಾಂತಿ ಕೋರಲಾಯಿತು.
ತುಳುನಾಡಿನ ಸತ್ಯ ಮತ್ತು ಧರ್ಮದ ಬೋಧನೆಯನ್ನು ಪೋಷಕರು ಮಕ್ಕಳಿಗೆ ಬೋಧಿಸಬೇಕು. ನಿರಂತರ ಉತ್ತಮ ವಿಚಾರಗಳನ್ನೇ ಆಲಿಸಿ ಸಮಾಜದಲ್ಲಿ ಸತ್‌ಪ್ರಜೆಗಳಾಗಿ ಬಾಳೋಣ.
ಡಾ| ಯೋಗೀಶ್ ಕೈರೋಡಿ