ಮಾಣಿ : ಸರಕಾರಿ ಶಾಲೆ ಉಳಿಯಲಿ,ಬೆಳೆಯಲಿ ಎಂಬ ಆಶಯದೊಂದಿಗೆ ಯುವವಾಹಿನಿ(ರಿ.)ಮಾಣಿ ಘಟಕಕ್ಕೆ ಮತ್ತೊಂದು ಸರಕಾರಿ ಶಾಲೆಯ ಅವಶ್ಯಕತೆಯನ್ನು ಸಾಕಾರಗೊಳಿಸುವ ಅವಕಾಶಯೊಂದು ಇಂದು ಒದಗಿಬಂತು..
ದಿನಾಂಕ .26-07-2019ರಂದು ಸ.ಹಿ.ಪ್ರಾ.ಶಾಲೆ ಮಲ್ಲಡ್ಕ, ಪೆರ್ನೆ ಇದರ ಶಾಲಾ ಮಕ್ಕಳಿಗೆ ಊಟದ ತಟ್ಟೆಗಳನ್ನು ಘಟಕದ ವತಿಯಿಂದ ನೀಡಲಾಯಿತು.ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಹರೀಶ್ ಬಾಕಿಲ ತಟ್ಟೆಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು.ಜೊತೆಯಲ್ಲಿ ಕಾರ್ಯದರ್ಶಿ ಸುಜಿತ್ ಅಂಚನ್,ನಿ.ಪೂ ಅಧ್ಯಕ್ಷರು ರಾಜೇಶ್ ಬಾಬನಕಟ್ಟೆ, ಜೊತೆ ಕಾರ್ಯದರ್ಶಿ ಜನಾರ್ದನ ಕೊಡಂಗೆ,ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು ಚೇತನ್ ಮಲ್ಲಡ್ಕ ಉಪಸ್ಥಿತರಿದ್ದರು.