ಬೆಳ್ತಂಗಡಿ : ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು. ಸಮಾಜದಲ್ಲಿ ಅವಕಾಶ ವಂಚಿತ ಕಟ್ಟ ಕಡೆಯ ವ್ಯಕ್ತಿಯನ್ನು ಹುಡುಕಿ ಸಾಧನೆ ಮಾಡಲು ಇಂತಹ ಸಂಘಟನೆಗಳ ಮೂಲಕ ಪ್ರೋತ್ಸಾಹ ನೀಡಬೇಕು ಇಂದಿನ ಪ್ರಥಮ ಹೆಜ್ಜೆಯೆ ಪ್ರೋತ್ಸಾಹದ ಸಾವಿರ ಸಾವಿರ ಹೆಜ್ಜೆಯಾಗಿ ಮುನ್ನಡೆಯಲಿ ಎಂದು ಮಂಗಳೂರಿನ ಅಬಕಾರಿ ನಿರೀಕ್ಷಕರು ಗೀತಾ ಪಿ ಹೇಳಿದರು.
ಅವರು ದಿನಾಂಕ 28/07/2019ನೇ ಭಾನುವಾರ ಬೆಳ್ತಂಗಡಿ ಸುವರ್ಣ ಅರ್ಕೆಡ್ ನಲ್ಲಿ ನಡೆದ ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಪ್ರಥಮ ಹೆಜ್ಜೆ ಇಡುವ ಸುಸಂದರ್ಬದಲ್ಲಿ ಹೆಜ್ಜೆ ಹೊಸ ಕನಸಿನೆಡೆಗೆ… ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಮಾತನಾಡಿ ಇಂದು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಮೂಡಿಗೆರೆ ಬೆಂಗಳೂರು ಸೇರಿ ಒಟ್ಟು 35 ಘಟಕಗಳ ಯುವಜನಾಂಗವನ್ನು ಸಂಘಟನೆಯತ್ತ ಸೆಳೆಯುವ ಕೆಲಸವನ್ನು ಯುವವಾಹಿನಿ ಮಾಡುತ್ತಿದೆ. ಈ ಬಾರಿಯ ವಾರ್ಷಿಕ ಸಮಾವೇಶವು ಪುತ್ತೂರಿನಲ್ಲಿ ಅಗಸ್ಟ್ 11 ರಂದು ನಡೆಯಲಿದ್ದು ಎಲ್ಲರನ್ನೂ ಕಾರ್ಯಕ್ರಮ ಆಹ್ವಾನಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ಅಕಸ್ಮಿಕವಾಗಿ ನಿಧನರಾದ ಘಟಕದ ಸಮಾಜ ಸೇವೆ ನಿರ್ದೇಶಕರಾದ ಶಶಿದರ ಅದೇಲು ಇವರ ಇಬ್ಬರು ಮಕ್ಕಳಾದ ಶರಣ್ಯ ಮತ್ತು ಸಂದೀಪ್ ಇವರ ಸಂಪೂರ್ಣ ಶಿಕ್ಷಣಕ್ಕಾಗಿ ಘಟಕದ ವತಿಯಿಂದ ದತ್ತು ಸ್ವೀಕರಿಸಲಾಯಿತು ಹಾಗೂ ಕಿಡ್ನಿ ಸೊಂಕಿನಿಂದ ಮಾ।ಶ್ರೇಯಸ್ಸು ಇವರ ಚಿಕಿತ್ಸಾ ವೆಚ್ಚಕ್ಕೆ ಘಟಕದ ವತಿಯಿಂದ 10000.00 ಸಾಂತ್ವನ ನಿಧಿಯನ್ನು ಹಸ್ತಾಂತರಿಸಲಾಯಿತು ಹಾಗೂ SSLC ಪರೀಕ್ಷೆಯಲ್ಲಿ 625 ಅಂಕದಲ್ಲಿ 622 ಪಡೆದು ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಜ್ಯೋತಿಕಾ N.ಇವರಿಗೆ ಶೈಕ್ಷಣಿಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಯನಂದ ಲ್ಯಾಲ ಮಾತನಾಡಿ ಸರಕಾರದಿಂದ ಮಹಿಳೆಯರಿಗಾಗಿ ಇರುವ ಸೌಲಭ್ಯಗಳ ಮಾಹಿತಿಯನ್ನು ನೀಡಿದರು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಬಂಟ್ವಾಳ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿಯ ಪ್ರದಾನ ಸಂಚಾಲಕರು ಸುಜಾತ ಅಣ್ಣಿ ಪೂಜಾರಿ ವೇದಿಕೆಯಲ್ಲಿದ್ದರು.
ವಿಶಾಖ್ ಜೆ ಪೂಜಾರಿ ಪ್ರಾರ್ಥಿಸಿದರು ಘಟಕದ ಸಲಹೆಗಾರರಾದ ಅಶ್ವಥ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು .ಮಹಿಳಾ ಸಂಚಾಲನ ಸಮಿತಿಯ ಕಾರ್ಯದರ್ಶಿ ಸುಧಾಮಣಿ ರಮಾನಂದ್ ಸ್ವಾಗತಿಸಿದರು ವೇದಾವತಿ ಪ್ರಭಾಕರ್ ಎಂ ಕೆ ಪ್ರಸಾದ್ ಚಂದ್ರಶೇಖರ ಅಳದಂಗಡಿ ರಾಕೇಶ್ ಬಂಗೇರ ಪರಿಚಯಿಸಿದರು ಪ್ರಜ್ಞಾ ಓಡಿಲ್ನಾಳ ಸಮೀಕ್ಷಾ ಬಾರ್ಲೋಡಿ ನಿರೂಪಿಸಿದರು ಘಟಕದ ಕಾರ್ಯದರ್ಶಿ ವಿಜಯ್ ಶಿರ್ಲಾಲು ವಂದಿಸಿದರು