ಮುಲ್ಕಿ : ಯುವವಾಹಿನಿ (ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ 17 ನೇ ವರ್ಷದ “ಆಟಿಡೊಂಜಿದಿನ ” ಕಾರ್ಯಕ್ರಮ ದಿನಾಂಕ 21.7.2019 ಆದಿತ್ಯವಾರ ಮುಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಸತೀಶ್ ಕಿಲ್ಪಾಡಿಯವರ ಆಧ್ಯಕ್ಷತೆಯಲ್ಲಿ ಜರಗಿತು,
ಕಾರ್ಯಕ್ರಮದ ಪ್ರಾರಂಭದಲ್ಲಿ ವೇದಿಕೆಯ ಮೇಲೆ ಬಲ ಬದಿಯಲ್ಲಿ ನಿರ್ಮಿಸಿರುವ ಹಂಚಿನ ಮನೆಯಿಂದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು, ತೆಗೆದುಕೊಂಡು ಬದಿಯಲ್ಲಿ ನಿರ್ಮಿಸಿರುವ ಹುಲ್ಲು ಛಾವಣಿಯ ಮನೆಯಿಂದ ಕಾರ್ಯಕ್ರಮ ನಿರ್ದೇಶಕರಾದ ರಿತೇಶ್ ಅಂಚನ್ ಹಾಗೂ ಚರಿಷ್ಮಾ ಶ್ರೀನಿವಾಸ್ ರವರು ಬಾಗಿಲು ತೆರೆದು ಕೊಂಡು ಹೊರ ಬಂದು ಜನ ಸ್ತೋಮಕ್ಕೆ ವಂದಿಸಿ ನಂತರ ಬಂದ ಅತಿಥಿಗಳಿಗೆ ಕೈ ಕಾಲು ತೊಳೆಯಲು ನೀರು ಕೊಡುವ ತುಳುನಾಡಿನ ಸಂಪ್ರದಾಯದಂತೆ ಕಾರ್ಯಕ್ರಮ ನಿರ್ದೇಶಕಿಯಾಗಿರುವ ಚರಿಪ್ಮಾ ಶ್ರೀನಿವಾಸ್ ರವರು ಬಾವಿ ಕಟ್ಟೆಯಿಂದ ಸೇದಿ ಕೊಟ್ಟ ನೀರನ್ನು ತುಂಬಿಗೆಯಲ್ಲಿ ತುಂಬಿಸಿಕೊಂಡು ವೇದಿಕೆಯ ಮೆಟ್ಟಲಿನಲ್ಲಿ ಅಧ್ಯಕ್ಷರು ಅತಿಥಿಗಳಿಗೆ ನೀಡಿ ವೇದಿಕೆಗೆ ಆಹ್ವಾನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ,ನಂತರ ಎಲ್ಲರನ್ನೂ ತನ್ನ ಸ್ವಾಗತ ಭಾಷಣದ ಮೂಲಕ ಸ್ವಾಗತಿಸಿದರು , ನಂತರ ಮೋಹನ್ ಸುವರ್ಣರು ಪ್ರಾರ್ಥಿಸಿದರು,ಚೇತನ್ ಕುಮಾರ್ ರವರು ಪ್ರಾಸ್ತಾವನೆ ಗೈದರು,
ಕಾರ್ಯಕ್ರಮವನ್ನು ವೇದಿಕೆಯಲ್ಲಿ ನಿರ್ಮಿಸಿರುವ ತರಕಾರಿ ಚಪ್ಪರದಲ್ಲಿ ಬಿದಿರಿನ ಕೋಲಿನಿಂದ ಅಮಟೆಕಾಯಿಯನ್ನು ಕೀಳುವ ಮೂಲಕ ಉಧ್ಘಾಟಿಸಿ ಮಾತನಾಡಿದ ಮುಲ್ಕಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರಾಗಿರುವ ವಿಠಲ ಅಮೀನ್ ಕಾರ್ನಾಡ್ ರವರು ” ಸಮಾಜಮುಖಿ ಸೇವೆ ಸಲ್ಲಿಸುವ ಸಂಘಟನೆಗಳಿಗೆ ಸಮಾಜದ ಬೆಂಬಲದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಆಟಿಯ ಮದಿಪು ನೀಡಿದ ಎನ್ ಎಮ್ ಸಿ ಯ ಉಪನ್ಯಾಸಕಿ ಪ್ರಗತಿಪರ ಕೃಷಿಕೆಯಾಗಿರುವ ಅರ್ಪಿತಾ ಶೆಟ್ಟಿಯವರು ಆಟಿ ತಿಂಗಳ ,ಆಟಿ ತಿಂಗಳಲ್ಲಿ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಆಚರಣೆ ಹಾಗೂ ಆಹಾರ ತಿನಿಸುಗಳ ಆಯುರ್ವೇದಿಯ ಹಾಗೂ ವೈಜ್ಞಾನಿಕ ಮಹತ್ವವನ್ನು ಕೂಲಂಕುಷವಾಗಿ ತಿಳಿಸಿದರು .
ಹಿರಿಯ ಸಾಹಿತಿ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾಗಿರುವ ಬಿ, ತಮ್ಮಯ್ಯ ರವರಿಗೆ ” ಆಟಿಯ ತಮ್ಮನ ” ವನ್ನು ನೀಡಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ತಮ್ಮಯ್ಯ ರವರು ಮುಲ್ಕಿ ಚಂದ್ರಶೇಖರ ಸುವರ್ಣರ ಪರಿಕಲ್ಪನೆಯಲ್ಲಿ ಮೂಡಿ ಬಂದು ಇಂದು ಜಗದೆಲ್ಲೆಡೆ ಪಸರಿಸಿರುವ ಆಟಿಡೊಂಜಿದಿನವನ್ನು ಹುಟ್ಟು ಹಾಕಿದ ಮೂಲ ಸಂಸ್ಥೆ ಯಾಗಿರುವ ಮುಲ್ಕಿ ಯುವವಾಹಿನಿಯ ಆಟಿಡೊಂಜಿದಿನದ ಈ ಕಾರ್ಯಕ್ರಮದಲ್ಲಿ ನೀವು ನೀಡಿರುವ ಆಟಿಯ ತಮ್ಮನವನ್ನು ಸ್ವೀಕರಿಸಲು ಸಂತೋಷವಾಗಿದೆ ಎಂದರು ,ಒರ್ವ ಸಾಹಿತಿ ಹಾಗೂ ತುಳುಲಿಪಿಯ ಸಂಶೋಧಕರಾಗಿರುವ ತಮ್ಮಯ್ಯರವರು ತುಳುಲಿಪಿ ಹಾಗೂ ತುಳು ಭಾಷೆಯ ಪ್ರಾಚೀನ ಇತಿಹಾಸವನ್ನು ಸಭೆಯ ಮುಂದಿಟ್ಟರು.
ಯುವವಾಹಿನಿ (ರಿ,) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್ ರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು,ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷರಾದ ಗೋಪಿನಾಥ ಪಡಂಗ,ಕಾರ್ಯದರ್ಶಿ ಭರತೇಶ ಅಮೀನ್, ಕಾರ್ಯಕ್ರಮದ ನಿರ್ದೇಶಕರಾದ ರಿತೇಶ್ ಅಂಚನ್ ಹಾಗೂ ಚರಿಷ್ಮಾ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿಯ ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು , ಕಾರ್ಯಕ್ರಮದ ವಿಶೇಷ ವಾಗಿ “ಇಲ್ಲೊಕ್ಕೆಲ್ಲು” ಚಿತ್ರ ತಂಡದ ಕಲಾವಿದರಾದ ಸುರೇಶ್ ಚಿತ್ರಾಪು,ಮೈಮ್ ರಾಮದಾಸ, ಯಕ್ಷ ಪ್ರತಿಭೆ ಸೀತಾರಾಮ್ ಕುಮಾರ್ ,ನವ್ಯಾ ಪೂಜಾರಿ ಯವರು “ಇಲ್ಲೊಕ್ಕೆಲ್ಲು”ಚಿತ್ರದ ವಿವಿಧ ಸಂಭಾಷಣೆ ,ಅಭಿನಯ ಹಾಗೂ ಹಾಡುಗಳ ಮೂಲಕ ರಂಜಿಸಿದರು,
ಕಾರ್ಯಕ್ರಮದಲ್ಲಿ ನಿಸರ್ಗದತ್ತ ಪರಿಕರಗಳಾದ ತಾಳೆಮರದ ಮಡಲು,ರೆಚ್ಚೆವು ಗಿಡದ ಎಲೆ ಹಾಗೂ ವಿವಿಧ ತರಕಾರಿಗಳನ್ನು ಉಪಯೋಗಿಸಿ ಕೊಂಡು ಸುವರ್ಣ ಆಟ್ಸ್ ಮುಲ್ಕಿ ಯವರಿಂದ ನಿರ್ಮಿತವಾದ ವೇದಿಕೆ ಎಲ್ಲರ ಗಮನ ಸೆಳೆಯಿತು.
ಬಂದ ಅತಿಥಿಗಳಿಗೆ ಚಹಾ .ಕಾಫಿ ಹಾಗೂ ಪದೆಂಗಿ ಬಜಿಲ್ ನೀಡಿ ಉಪಚರಿಸಲಾಯಿತು.
ಕಾರ್ಯಕ್ರಮದ ನಡುವೆ ಹುರಿಕಡಲೆ,ಹಪ್ಪಳ,ಸಾಂತನಿ ಹಾಗೂ ಕೆರೆಂಗ್ದ ಪೂಲ್ ಹಂಚಲಾಯಿತು ಉದಯ ಅಮೀನ್ ಹಾಗೂ ಮೋಹನ್ ಸುವರ್ಣರು ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಭರತೇಶ ಅಮೀನ್ ವಂದಿಸಿದರು.
ಆಟಿಯ ಊಟದಲ್ಲಿ ಆಟಿಯ ವಿಶೇಷ ತಿನಿಸುಗಳಾದ ಕುಡುತ ಚಟ್ನಿ,ತಿಮರೆ ಚಟ್ನಿ,ಕುಕ್ಕುದ ಚಟ್ನಿ, ಬಂಬೆ ಕುಡುಗಸಿ,ಉಪ್ಪಡ್ ಪಚ್ಚಿರ್, ತೇವು ತೆಟ್ಲ,ತೇವು ಪತ್ಪೆ,ಕುಡುತಸಾರು,,ಪೆಲಕಾಯಿದ ಗಟ್ಟಿ ,ಪೆಲಕಾಯಿದ ಗಾರ್ಯ,ಮೆಂತೆಯ ಪಾಯಸ ಮುಂತಾದ ವಿವಿಧ ಖಾದ್ಯಗಳೊಂದಿಗೆ ಸುಮಾರು 1700 ಮಂದಿಗೆ ಆತಿಥ್ಯ ನೀಡಲಾಯಿತು .